ಸಿನಿಮಾ ಸುದ್ದಿ

ಮುಗುಳುನಗೆ ಚಿತ್ರ ವಿಶೇಷ: 8 ಹಾಡುಗಳು ರಾಜ್ಯದ ಒಂದೊಂದು ಪ್ರದೇಶದಲ್ಲಿ ಬಿಡುಗಡೆ!

ಯೋಗರಾಜ್ ಭಟ್ ಹಾಗೂ ಗಣೇಶ್ ಜೋಡಿಯ ಮುಗುಳುನಗೆ ಚಿತ್ರ ಈ ವಾರದಲ್ಲಿ ಸೆನ್ಸಾರ್ ಆಗುತ್ತಿದ್ದು, ಇದಕ್ಕೂ ಮುನ್ನ ವಿನೂತನ ರೀತಿಯಲ್ಲಿ ಆಡಿಯೋ ಲಾಂಚ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

ಮುಗುಳುನಗೆ ಚಿತ್ರ ವಿಶೇಷ: 8 ಹಾಡುಗಳು ರಾಜ್ಯದ ಒಂದೊಂದು ಪ್ರದೇಶದಲ್ಲಿ ಬಿಡುಗಡೆ!
ಮುಗುಳುನಗೆ
Published On :
ಯೋಗರಾಜ್ ಭಟ್ ಹಾಗೂ ಗಣೇಶ್ ಜೋಡಿಯ ಮುಗುಳುನಗೆ ಚಿತ್ರ ಈ ವಾರದಲ್ಲಿ ಸೆನ್ಸಾರ್ ಆಗುತ್ತಿದ್ದು, ಇದಕ್ಕೂ ಮುನ್ನ ವಿನೂತನ ರೀತಿಯಲ್ಲಿ ಆಡಿಯೋ ಲಾಂಚ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ. 
ಮುಗುಳುನಗೆ ಚಿತ್ರ ತಂಡ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಲಿದೆ. ಚಿತ್ರದಲ್ಲಿ ಒಟ್ಟು 8 ಹಾಡುಗಳಿದ್ದು, ರಾಜ್ಯದ ಒಂದೊಂದು ಭಾಗದಲ್ಲಿಯೂ ಒಂದೊಂದು ಹಾಡನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಚಿತ್ರದ ಆಲ್ಬಮ್ ನಲ್ಲಿ ಹೊಡಿ ಒಂಭತ್ತು ಮೊದಲನೆಯ ಹಾಡಾಗಿದ್ದು, ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಿಲೀಸ್ ಮಾಡಲಾಗುತ್ತಿದೆ. 
ಜು.12 ರಂದು ಶಿಲ್ಪಾ ಗಣೇಶ್ ಜನ್ಮದಿನದ ಅಂಗವಾಗಿ ಬೆಂಗಳೂರಿನಲ್ಲಿ 2 ನೇ ಹಾಡನ್ನು ಗಣೇಶ್ ಅವರ ಮನೆಯಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಜು.14 ರಂದು ಮೈಸೂರು ನಂತರ ದಾವಣಗೆರೆಗೆ ಚಿತ್ರ ತಂಡ ತೆರಳಲಿದ್ದು, ಜುಲೈ 21, 22 ರ ವೇಳೆಗೆ ಆಡಿಯೋ ಬಿಡುಗಡೆ ಕಾರ್ಯಕ್ರಮ ಸಂಪೂರ್ಣವಾಗಲಿದೆ. ಇದೇ ವೇಳೆ ಮುಂಗಾರು ಮಳೆಯ 10 ವರ್ಷಾಚರಣೆಯ ಭಾಗವಾಗಿ ಗಣೇಶ್ ಹಾಗೂ ಯೋಗರಾಜ್ ಭಟ್ ಅವರು ಜೋಗ್ ಫಾಲ್ಸ್ ಗೆ ಭೇಟಿ ನೀಡಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.