ಸಿನಿಮಾ ಸುದ್ದಿ

ಕ್ರಿಕೆಟ್ ಆಯ್ತು, ಈಗ ಸಿಂಗರ್ ಆಗಿ ಮಿಂಚು ಹರಿಸಲಿರುವ ಹರ್ಭಜನ್ ಸಿಂಗ್

ದೇಶದ ಪರಂಪರೆ ಮತ್ತು ಸಂಸ್ಕೃತಿ ಕುರಿತ ಆಲ್ಬಂನಲ್ಲಿ ಆಡಲಿರುವ ಹರ್ಭಜನ್ ಸಿಂಗ್ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚು ಹರಿಸಿದ್ದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್...

ಕ್ರಿಕೆಟ್ ಆಯ್ತು, ಈಗ ಸಿಂಗರ್ ಆಗಿ ಮಿಂಚು ಹರಿಸಲಿರುವ ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್
Published On :
ದೇಶದ ಪರಂಪರೆ ಮತ್ತು ಸಂಸ್ಕೃತಿ ಕುರಿತ ಆಲ್ಬಂನಲ್ಲಿ ಆಡಲಿರುವ ಹರ್ಭಜನ್ ಸಿಂಗ್
ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಮಿಂಚು ಹರಿಸಿದ್ದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಇದೀಗ ಸಿಂಗರ್ ಆಗಲಿದ್ದಾರೆ. 
ದೇಶಕ್ಕಾಗಿ ಸರ್ವವನ್ನು ಅರ್ಪಿಸಿದ ರಿಯಲ್ ಹೀರೋಗಳ ಸ್ಮರಣೆಗಾಗಿ ಸಂಗೀತ ನಿರ್ದೇಶಕ ಮಿಥೂನ್ ಆಲ್ಬಂ ಸಾಂಗ್ ವೊಂದನ್ನು ಕಂಪೂಸ್ ಮಾಡಿದ್ದು ಇದಕ್ಕೆ ಹರ್ಭಜನ್ ಸಿಂಗ್ ಧ್ವನಿಯಾಗಲಿದ್ದಾರೆ. 
ಹರ್ಭಜನ್ ಸಿಂಗ್ ಅವರು ಕೆಲವೊಂದು ವಿಚಾರಗಳನ್ನು ನನ್ನಲ್ಲಿ ಹೇಳಿಕೊಳ್ಳುತ್ತಿದ್ದರು. ನಾವಿಬ್ಬರು ಒಳ್ಳೆಯ ಗೆಳೆಯರು, ನಮ್ಮಿಬ್ಬರಿಗೂ ಸಂಗೀತ ಅಂದರೆ ಪಂಚಪ್ರಾಣ. ಹೀಗಾಗಿ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಕುರಿತು ಒಂದು ಆಲ್ಬಂ ಮಾಡುವ ಇರಾದೆಯನ್ನು ಹರ್ಭಜನ್ ಸಿಂಗ್ ವ್ಯಕ್ತಪಡಿಸಿದ್ದರು ಎಂದು ಮಿಥುನ್ ಹೇಳಿದ್ದಾರೆ.
ದೇಶಾದ ನಾನಾ ಭಾಗಗಳಲ್ಲಿ ಈ ಆಲ್ಬಂನ ಶೂಟಿಂಗ್ ಮಾಡಲಾಗುವುದು. ಸಾಮಾನ್ಯ ವ್ಯಕ್ತಿ ದೇಶದ ಪ್ರಗತಿಯಲ್ಲಿ ಹೇಗೆ ಭಾಗಿಯಾಗುತ್ತೇನೆ ಎಂಬುದನ್ನು ಬಿಂಬಿಸುವ ದೃಶ್ಯಗಳನ್ನು ಸೆರೆಹಿಡಿಯಲಾಗುವುದು. ಈ ಆಲ್ಬಂ ಹಿಂದಿ ಮತ್ತು ಇಂಗ್ಲೀಷ್ ನಲ್ಲಿದ್ದು ಡಿಸೆಂಬರ್ ವೇಳೆ ಸಿದ್ಧಗೊಳ್ಳಲಿದೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.