ಸಿನಿಮಾ ಸುದ್ದಿ

ಎ ಆರ್ ರಹಮಾನ್ ಅವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಮಜೀದ್ ಮಜಿದಿ ಹರ್ಷ

ರಂಜಾನ್ ಹಬ್ಬಕ್ಕೆ ತೆಹೆರಾನ್ ನ ಮನೆಗೆ ವಿರಾಮಕ್ಕೆ ತೆರಳಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಇರಾನಿ ಸಿನೆಮಾ ನಿರ್ದೇಶಕ ಮಜೀದ್ ಮಜಿದಿ, ತಮ್ಮ ಮುಂದಿನ ಚಿತ್ರ 'ಬಿಯಾಂಡ್ ಕ್ಲೌಡ್ಸ್'

ಎ ಆರ್ ರಹಮಾನ್ ಅವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಮಜೀದ್ ಮಜಿದಿ ಹರ್ಷ
ಎ ಆರ್ ರಹಮಾನ್ - ಮಜೀದ್ ಮಜಿದಿ
Published On :
ಮುಂಬೈ: ರಂಜಾನ್ ಹಬ್ಬಕ್ಕೆ ತೆಹೆರಾನ್ ನ ಮನೆಗೆ ವಿರಾಮಕ್ಕೆ ತೆರಳಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಇರಾನಿ ಸಿನೆಮಾ ನಿರ್ದೇಶಕ ಮಜೀದ್ ಮಜಿದಿ, ತಮ್ಮ ಮುಂದಿನ ಚಿತ್ರ 'ಬಿಯಾಂಡ್ ಕ್ಲೌಡ್ಸ್' ಕೆಲಸಕ್ಕೆ ಹಿಂದಿರುಗಿದ್ದಾರೆ. 
ಇತ್ತೀಚಿಗೆ ಅವರು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಅವರೊಂದಿಗೆ ಮುಂಬೈ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿರುವ ಸ್ಟಿಲ್ ಲಭ್ಯವಾಗಿತ್ತು. 
ಮೂಲಗಳ ಪ್ರಕಾರ "ಎ ಆರ್ ರಹಮಾನ್ ಅವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಮಜೀದ್ ಮಜಿದಿ ಹರ್ಷಗೊಂಡಿದ್ದಾರೆ. ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಚಿತ್ರೀಕರಣದ ನಂತರದ ಕೆಲಸಗಳಲ್ಲಿ ನಿರತರಾಗಿದ್ದಾರೆ" ಎನ್ನುತ್ತವೆ.
ಶಾಹಿದ್ ಕಪೂರ್ ಅವರ ಕಿರಿಯ ಸಹೋದರ ಇಶಾನ್ ಖಟ್ಟರ್ ಮತ್ತು ಮಾಳವಿಕಾ ಮೋಹನ್ ನಟಿಸಿರುವ ಈ ಸಿನೆಮಾವನ್ನು ಸಂಪೂರ್ಣವಾಗಿ ಭಾರತದಲ್ಲಿ ಚಿತ್ರೀಕರಿಸಲಾಗಿದೆ. ಇದು ಮಜಿದಿ ಅವರ ಮೊದಲ ಭಾರತೀಯ ಚಿತ್ರ 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.