ಸಿನಿಮಾ ಸುದ್ದಿ

ಮೋಹನ್ ಲಾಲ್ ಅಭಿನಯದ 'ವಿಲನ್' ಓಣಂಗೆ ಬಿಡುಗಡೆ; ರಾಕ್ಲೈನ್ ನಿರ್ಮಾಣದ ಮೊದಲ ಮಲಯಾಳಂ ಚಿತ್ರ

ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಮೊದಲ ಮಲಯಾಳಂ ಚಿತ್ರ 'ವಿಲನ್' ಚಿತ್ರೀಕರಣ ಮುಗಿಸಿದ್ದು, ಡಬ್ಬಿಂಗ್ ಕಾರ್ಯ ಪ್ರಗತಿಯಲ್ಲಿದೆ. ಇದು ಓಣಂ ಹಬ್ಬಕ್ಕೆ ಬಿಡುಗಡೆಯಾಗಲಿದೆ.

ಮೋಹನ್ ಲಾಲ್ ಅಭಿನಯದ 'ವಿಲನ್' ಓಣಂಗೆ ಬಿಡುಗಡೆ; ರಾಕ್ಲೈನ್ ನಿರ್ಮಾಣದ ಮೊದಲ ಮಲಯಾಳಂ ಚಿತ್ರ
ಮೋಹನ್ ಲಾಲ್ - ರಾಕ್ಲೈನ್ ವೆಂಕಟೇಶ್
Published On :
ಬೆಂಗಳೂರು: ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಮೊದಲ ಮಲಯಾಳಂ ಚಿತ್ರ 'ವಿಲನ್' ಚಿತ್ರೀಕರಣ ಮುಗಿಸಿದ್ದು, ಡಬ್ಬಿಂಗ್ ಕಾರ್ಯ ಪ್ರಗತಿಯಲ್ಲಿದೆ. ಇದು ಓಣಂ ಹಬ್ಬಕ್ಕೆ ಬಿಡುಗಡೆಯಾಗಲಿದೆ.
ಬಿ ಉನ್ನಿಕೃಷ್ಣನ್ ನಿರ್ದೇಶನದ ಈ ಕ್ರೈಮ್ ಥ್ರಿಲ್ಲರ್ ಸಿನೆಮಾದಲ್ಲಿ ಮೋಹನ್ ಲಾಲ್ ನಟಿಸಿದ್ದಾರೆ. "ನಾವು ಡಬ್ಬಿಂಗ್ ಹಂತದಲ್ಲಿದ್ದೇವೆ. ಮೊದಲಿಗೆ ಆಡಿಯೋ ಬಿಡುಗಡೆ ಮಾಡಿ ನಂತರ ಅದ್ದೂರಿಯಾಗಿ ಸಿನೆಮಾ ಬಿಡುಗಡೆ ಮಾಡಲಿದ್ದೇವೆ" ಎನ್ನುತ್ತಾರೆ ರಾಕ್ಲೈನ್. ಈ ಸಿನೆಮಾದ ಮೂಲಕ ತಮಿಳು ನಟರಾದ ವಿಶಾಲ್ ಮತ್ತು ಹಂಸಿಕಾ ಮೋಟ್ವಾನಿ ಮಲಯಾಳಂ ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದಾರೆ. 
ಈ ಸಿನೆಮಾದಲ್ಲಿ ಮಂಜು ವಾರಿಯರ್, ರಾಶಿ ಖನ್ನಾ ಮತ್ತು ಶ್ರೀಕಾಂತ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ದೊಡ್ಡ ಬಜೆಟ್ ಚಿತ್ರವನ್ನು ಎರಾಸ್ ಇಂಟರ್ನ್ಯಾಷನಲ್ ವಿತರಿಸುತ್ತಿದ್ದು, ಸುಶಿನ್ ಶ್ಯಾಮ್ ಸಂಗೀತ ನೀಡಿದ್ದಾರೆ. 
ಇತ್ತ ಕನ್ನಡ ಚಿತ್ರರಂಗದಲ್ಲಿ ಮನೋರಂಜನ್ ಅಭಿನಯದ ವಿಐಪಿ (ವೃತ್ತಿ ಇಲ್ಲದ ಪದವೀಧರ) ಕೂಡ ರಾಕಲೈನ್ ಬ್ಯಾನರ್ ಅಡಿ ಬಿಡುಗಡೆಗೆ ಸಿದ್ಧವಾಗಿರುವ ಚಿತ್ರ. "ವೆಟ್ರಿಮಾರನ್ ನಿರ್ದೇಶಿಸಲಿರುವ ಪುನೀತ್ ರಾಜಕುಮಾರ್ ಚಿತ್ರವನ್ನು ನಿರ್ಮಿಸುತ್ತಿದ್ದೇನೆ ಮತ್ತು ನಂತರ ಸ್ಕ್ರಿಪ್ಟ್ ಹಂತದಲ್ಲಿರುವ ಯಶ್ ಸಿನೆಮಾವನ್ನು ಕೂಡ" ಎನ್ನುತ್ತಾರೆ ವೆಂಕಟೇಶ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.