ಕನ್ನಡ ರಂಗಭೂಮಿಗೆ ಬಂದ ಬುದ್ಧ ಚರಿತ್ರೆ
ಬುದ್ಧನ ಜೀವನಚರಿತ್ರೆಗೆ ಸಂಬಂಧಿಸಿದ ನಾಟಕಗಳು ವಿರಳವೇನಲ್ಲ ಆದರೆ ಪ್ರಸಾದನ ಕಲಾವಿದ ಕೃಷ್ಣ ಹೇಳಿಕೊಳ್ಳುವಂತೆ 'ಬುದ್ಧ ಜೀವನ ಚರಿತ್ರೆ - ಕತ್ತಲೆಯಿಂದ ಬೆಳಕಿನೆಡೆಗೆ' ಇದೆ

Published On :
ಬೆಂಗಳೂರು: ಬುದ್ಧನ ಜೀವನಚರಿತ್ರೆಗೆ ಸಂಬಂಧಿಸಿದ ನಾಟಕಗಳು ವಿರಳವೇನಲ್ಲ ಆದರೆ ಪ್ರಸಾದನ ಕಲಾವಿದ ಕೃಷ್ಣ ಹೇಳಿಕೊಳ್ಳುವಂತೆ 'ಬುದ್ಧ ಜೀವನ ಚರಿತ್ರೆ - ಕತ್ತಲೆಯಿಂದ ಬೆಳಕಿನೆಡೆಗೆ' ಇದೆ ಮೊದಲ ಬಾರಿಗೆ ಕನ್ನಡದಲ್ಲಿ ಮೂಡಿಬರುತ್ತಿದೆಯಂತೆ. ಮೇಕಪ್ ಕೃಷ್ಣ ಎಂದೇ ಹೆಸರಾಗಿರುವ ಇವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ.
೨೦ ದಿನಗಳ ಕಾಲ ಬೋಧ್ ಗಯಾದಲ್ಲಿ ತಂಗಿದ್ದ ಕೃಷ್ಣ ಅವರಿಗೆ ಗುರುಗಳೊಬ್ಬರು ಬುದ್ಧನ ಜಾತಕವನ್ನು ನಿರೂಪಿಸಿದಾಗ ಈ ನಾಟಕ ನಿರ್ದೇಶಿಸುವ ಸ್ಫೂರ್ತಿ ಸಿಕ್ಕಿತಂತೆ.
೫೮ ವರ್ಷದ ಕೃಷ್ಣ ಕಳೆದ ೪೨ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವವರು. "ಈ ಆಸಕ್ತಿದಾಯಕ ವಿಷಯವನ್ನು ಕನ್ನಡ ರಂಗಭೂಮಿಯಲ್ಲಿ ಇಲ್ಲಿಯವರೆಗೂ ಏಕೆ ಎತ್ತಿಕೊಳ್ಳಲಿಲ್ಲವೋ ತಿಳಿಯದು. ನಾನು ಬುದ್ಧನ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ ಮತ್ತು ಈಗ ಬುದ್ಧನ ಬೋಧನೆಯನ್ನು ಜನರೊಂದಿಗೆ ಹಂಚಿಕೊಳ್ಳುತ್ತಿರುವುದಕ್ಕೆ ಸಂತಸವಾಗುತ್ತಿದೆ" ಎನ್ನುತ್ತಾರೆ.
ಈ ಎರಡು ಘಂಟೆಗಳ ನಾಟಕದಲ್ಲಿ ೨೫ ಜನರ ತಂಡ ಭಾಗವಹಿಸಲಿದೆಯಂತೆ. ಈಗಾಗಲೇ ಹಲವು ಕಡೆ ಪ್ರದರ್ಶನ ಕಂಡು ಪ್ರಶಂಸೆ ಗಳಿಸಿರುವ ಈ ನಾಟಕ ಮತ್ತೆ ಜುಲೈ ೪ ಮತ್ತು ಜುಲೈ ೬ ರಂದು, ಕಲಾಗ್ರಾಮ ಮಲ್ಲತ್ತಹಳ್ಳಿಯಲ್ಲಿ ಸಂಜೆ ೬:೩೦ ಕ್ಕೆ ಪ್ರದರ್ಶನಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Krishnaಕೃಷ್ಣBuddha’s Life History- From Darkness towards Lighಬುದ್ಧ ಜೀವನ ಚರಿತ್ರೆ - ಕತ್ತಲೆಯಿಂದ ಬೆಳಕಿನೆಡೆಗೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


