ಸಿನಿಮಾ ಸುದ್ದಿ

ಇಷ್ಟು ಕಾದಿದ್ದಕ್ಕೆ ಸಿನೆಮಾ 'ಭರ್ಜರಿ'ಯಾಗಿರಲಿದೆ ಎಂದ ಧ್ರುವ್

ನಟ ಧ್ರುವ್ ಸರ್ಜಾ ಅವರ ಮೂರನೇ ಸಿನೆಮಾ ೨೦ ತಿಂಗಳುಗಳಿಂದ ನಿರ್ಮಾಣದಲ್ಲಿದೆ. 'ಭರ್ಜರಿ' ಸಿನೆಮಾದ ಮುಹೂರ್ತ ೨೦೧೫ ರಲ್ಲಿ ಜರುಗಿತ್ತು.

ಇಷ್ಟು ಕಾದಿದ್ದಕ್ಕೆ ಸಿನೆಮಾ 'ಭರ್ಜರಿ'ಯಾಗಿರಲಿದೆ ಎಂದ ಧ್ರುವ್
ನಟ ಧ್ರುವ್ ಸರ್ಜಾ
Published On :
ಬೆಂಗಳೂರು: ನಟ ಧ್ರುವ್ ಸರ್ಜಾ ಅವರ ಮೂರನೇ ಸಿನೆಮಾ ೨೦ ತಿಂಗಳುಗಳಿಂದ ನಿರ್ಮಾಣದಲ್ಲಿದೆ. 'ಭರ್ಜರಿ' ಸಿನೆಮಾದ ಮುಹೂರ್ತ ೨೦೧೫ ರಲ್ಲಿ ಜರುಗಿತ್ತು. 
ಕಳೆದ ಎರಡು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ 'ಭರ್ಜರಿ' ಸಿನೆಮಾ ತಡವಾಗಿರುವುದಕ್ಕೆ ಹಲವು ರೀತಿಯ ಊಹಾಪೋಹಗಳು ಮತ್ತು ಅನಪೇಕ್ಷಿತ ಪ್ರತಿಕ್ರಿಯೆಗಳು ಬಂದಿದ್ದವು. ಆಗ ನಾವು ಉತ್ತರಿಸುವ ಗೋಜಿಗೆ ಹೋಗಲಿಲ್ಲ ಎನ್ನುವ ನಟ ಧ್ರುವ್ ಮತ್ತು ನಿರ್ದೇಶಕ ಚೇತನ್ ಕುಮಾರ್ ಈಗ ಸಿನೆಮಾ ಡಬ್ಬಿಂಗ್ ಹಂತದಲ್ಲಿದೆ ಎಂದು ತಿಳಿಸುತ್ತಾರೆ. 
"ನನ್ನನ್ನು ಮಾತನಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ಜನ ನಂಬಿದ್ದಾರೆ. ಆದರೆ ನನ್ನ ದೃಷ್ಟಿಕೋನದಿಂದ ನೋಡಿದರೆ, ಸಿನೆಮಾ ಬಿಡುಗಡೆಯ ಬಗ್ಗೆ ನಾನು ಗಮನಾರ್ಹವಾದದ್ದನ್ನು ಹೇಳುವ ಸ್ಥಿತಿಯಲ್ಲಿಲ್ಲ. ಆದರೆ ಸಿನಿಮಾಮಂದಿರಗಳಲ್ಲಿ ಬಿಡುಗಡೆಯಾಗದ ಮೇಲೆ ಇದು ಒಳ್ಳೆಯ ಪರಿಣಾಮ ಬೀರಲಿದೆ ಎಂದಷ್ಟೇ ಹೇಳುತ್ತೇನೆ" ಎಂದಿದ್ದಾರೆ ಧ್ರುವ್, 
'ಅದ್ದೂರಿ' ಮತ್ತು 'ಬಹಾದ್ದೂರ್' ಎರಡು ಹಿಟ್ ಚಿತ್ರಗಳನ್ನು ನೀಡಿದ್ದ ಧ್ರುವ್ ಮೂರನೇ ಸಿನೆಮಾ ಬಿಡುಗಡೆಯಾಗುವುದಕ್ಕೆ ಇಷ್ಟು ತಡವಾದದ್ದಕ್ಕೆ ಅವರ ಅಭಿಮಾನಿಗಳ ನಡುವೆ ಅಪಾರ ಪ್ರಶ್ನೆಗಳೆದ್ದಿದ್ದವು. ನಾನು ಯಾವುದನ್ನು ಎದುರಿಸಲು ಸಿದ್ಧನಿದ್ದೇನೆ ಎನ್ನುವ ನಟ ನಿರ್ಮಾಪಕನ ಜೊತೆಯಾಗಿ ನಿಲ್ಲುವುದಾಗಿ ಹೇಳಿದ್ದಾರೆ. 
ಈಮಧ್ಯೆ ನಂದಕಿಶೋರ್ ನಿರ್ದೇಶನ ಮುಂದಿನ ಚಿತ್ರದಲ್ಲಿ ಧ್ರುವ್ ನಟಿಸಲಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.