ಅಮೆರಿಕಾ ಅಧ್ಯಕ್ಷ ಟ್ರಂಪ್ ಭೇಟಿ ಮಾಡುವ ಭರವಸೆ ವ್ಯಕ್ತಪಡಿಸಿದ ಮಿಸ್ಟರ್ ವರ್ಲ್ಡ್ ೨೦೧೬ ರೋಹಿತ್
ಭಾರತೀಯ ನಟ ಮತ್ತು ಮಾಡೆಲ್, ೨೦೧೬ ರ ಮಿಸ್ಟರ್ ವರ್ಲ್ಡ್ ರಾಹುಲ್ ಖಾಂಡೇಲ್ವಾಲ್ ತಮ್ಮ ಮುಂದಿನ ಅಮೆರಿಕ ಭೇಟಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುವ ಭರವಸೆ

Published On :
ಮುಂಬೈ: ಭಾರತೀಯ ನಟ ಮತ್ತು ಮಾಡೆಲ್, ೨೦೧೬ ರ ಮಿಸ್ಟರ್ ವರ್ಲ್ಡ್ ರಾಹುಲ್ ಖಾಂಡೇಲ್ವಾಲ್ ತಮ್ಮ ಮುಂದಿನ ಅಮೆರಿಕ ಭೇಟಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ.
"ಮಿಸ್ಟರ್ ವರ್ಲ್ಡ್ ಗೆದ್ದ ಮೇಲೆ ನಾನು ವಿಶ್ವದಾದ್ಯಂತ ಪರ್ಯಟನೆ ಮಾಡಿ ಹೊಸ ಹೊಸ ಜನರನ್ನು ಭೇಟಿ ಮಾಡುತ್ತಿದ್ದೇನೆ. ಅಮೆರಿಕಾದಲ್ಲಿಯೂ ಬಹಳಷ್ಟು ಜನರನ್ನು ಭೇಟಿಮಾಡಲು ಎದುರುನೋಡುತ್ತಿದ್ದೇನೆ. ಹಾಗೆಯೇ ಅಧ್ಯಕ್ಷರನ್ನು ಕೂಡ ಭೇಟಿ ಮಾಡಬಹುದು ಎಂದು ನಂಬಿದ್ದೇನೆ" ಎಂದು ಟ್ರಂಪ್ ಪ್ರಮಾಣವಚನ ಸ್ವೀಕಾರದ ವೇಳೆ ಅಮೆರಿಕಾ ರಾಯಭಾರ ಕಚೇರಿಯಲ್ಲಿ ನಡೆದ ಔತಣಕೂಟದಲ್ಲಿ ಭಾಗವಹಿಸಿದ್ದ ರೋಹಿತ್ ಹೇಳಿದ್ದಾರೆ.
ಎರಡು ದೇಶಗಳ ನಡುವೆ ಶಕ್ತಿಯುತ ಸಂಬಂಧ ಮುಂದುವರೆಯುವ ಭರವಸೆಯನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.
"ನಾನು ಡೊನಾಲ್ಡ್ ಟ್ರಂಪ್ ಅವರ ಸಂದರ್ಶನಗಳನ್ನು ನೋಡಿದ್ದೇನೆ. ಅವರಿಗೆ ಹಿಂದೂಗಳ ಮತ್ತು ಹಿಂದೂ ಧರ್ಮದ ಮೇಲೆ ಬಹಳ ಗೌರವ ಇದೆ. ಆದುದರಿಂದ ಸಂಬಂಧ ಬಹಳ ಶಕ್ತಿಯುತವಾಗಿ ದೀರ್ಘಕಾಲದವರೆಗೆ ಉಳಿಯಲಿದೆ. ಆ ಸಂಬಂಧ ಅದ್ಭುತವಾಗಿರುತ್ತದೆ" ಎಂದು ಅವರು ಹೇಳಿದ್ದಾರೆ.
ರೋಹಿತ್ ಸದ್ಯಕ್ಕೆ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. "ನಾವು ಬಹುಷಃ ಏಪ್ರಿಲ್ ನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ" ಎಂದು ಕೂಡ ಹೆಚ್ಚು ವಿವರಗಳನ್ನು ತಿಳಿಸದೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


