ಸಿನಿಮಾ ಸುದ್ದಿ

'ಬ್ಯೂಟಿಫುಲ್ ಮನಸುಗಳು' ಯಶಸ್ಸಿನ ನಿರೀಕ್ಷೆಯಲ್ಲಿ ನೀನಾಸಂ ಸತೀಶ್

'ಮಾದೇಶ' ಸಿನೆಮಾದ ಮೂಲಕ ೨೦೦೮ ರಲ್ಲಿಯೇ ಕನ್ನಡ ಚಿತ್ರರಂಗ ಪ್ರವೇಶಿಸಿದರು, ನೀನಾಸಂ ಸತೀಶ್ ಅವರಿಗೆ ದೊಡ್ಡ ಬ್ರೇಕ್ ಸಿಗಲು ೨೦೧೩ ರ 'ಲೂಸಿಯಾ' ಸಿನೆಮಾದವರೆಗೂ ಕಾಯಬೇಕಾಯಿತು.

'ಬ್ಯೂಟಿಫುಲ್  ಮನಸುಗಳು' ಯಶಸ್ಸಿನ ನಿರೀಕ್ಷೆಯಲ್ಲಿ ನೀನಾಸಂ ಸತೀಶ್
ನೀನಾಸಂ ಸತೀಶ್
Published On :
ಬೆಂಗಳೂರು: 'ಮಾದೇಶ' ಸಿನೆಮಾದ ಮೂಲಕ ೨೦೦೮ ರಲ್ಲಿಯೇ ಕನ್ನಡ ಚಿತ್ರರಂಗ ಪ್ರವೇಶಿಸಿದರು, ನೀನಾಸಂ ಸತೀಶ್ ಅವರಿಗೆ ದೊಡ್ಡ ಬ್ರೇಕ್ ಸಿಗಲು ೨೦೧೩ ರ 'ಲೂಸಿಯಾ' ಸಿನೆಮಾದವರೆಗೂ ಕಾಯಬೇಕಾಯಿತು. ನಂತರ ತಮ್ಮದೇ ಛಾಪು ಮೂಡಿಸಿರುವ ನಟ ಈಗ ನೂತನ ಸಿನೆಮಾ 'ಬ್ಯೂಟಿಫುಲ್  ಮನಸುಗಳು' ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. 
ಅರಸು ಅಂತಾರೆ ನಿರ್ದೇಶನದಲ್ಲಿ 'ಲವ್ ಇನ್ ಮಂಡ್ಯ' ಸಿನೆಮಾದ ಯಶಸ್ಸಿನ ನಂತರ, ತಾವೇ ನಿರ್ಮಿಸಿದ್ದ 'ರಾಕೆಟ್' ನಿರೀಕ್ಷಿತ ಯಶಸ್ಸು ತಂದುಕೊಡಲಿಲ್ಲ. ಸಾಮಾನ್ಯ ಮನುಷ್ಯನ ಪಾತ್ರ ನಿರವಹಿಸಿರುವ ಸಿನೆಮಾಗಳೆಲ್ಲಾ ಅವರಿಗೆ ಹೆಸರು ತಂದುಕೊಟ್ಟಿರುವ ಹಿನ್ನಲೆಯಲ್ಲಿ, ಅಂತಹುದೇ ಪಾತ್ರವನ್ನು 'ಬ್ಯೂಟಿಫುಲ್  ಮನಸುಗಳು' ಚಿತ್ರದಲ್ಲಿ ಪೋಷಿಸಿರುವುದಕ್ಕೆ ಉತ್ಸುಕರಾಗಿದ್ದಾರೆ. 
"ನನ್ನ ವರ್ತನೆ ಮತ್ತು ವ್ಯಕ್ತಿತ್ವ, ಸಾಮಾನ್ಯ ಜನಕ್ಕೆ ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಗುತ್ತಿರುವುದು ನನ್ನ ವರ. ಮಧ್ಯಮ ವರ್ಗಕ್ಕೆ ನನ್ನ ಪಾತ್ರಗಳು ಇಷ್ಟವಾಗುತ್ತಿರುವುದು ನನಗೆ ಸಂತಸ ತಂದಿದೆ" ಎನ್ನುವ ಅವರು 'ಬ್ಯೂಟಿಫುಲ್  ಮನಸುಗಳು' ಸಿನೆಮಾದಲ್ಲಿನ ನನ್ನ ಪಾತ್ರ ಪ್ರಜ್ಞಾವಂತ ಮತ್ತು ಜವಾಬ್ದಾರಿಯುತವಾದದ್ದು ಎನ್ನುತ್ತಾರೆ. 
"ನನ್ನ ಸಂಭಾಷಣೆಯ ಮೂಲಕ ಪ್ರೇಕ್ಷಕರೊಂದಿಗೆ ನಾನು ಯಾವಾಗಲೂ ಒಳ್ಳೆಯ ಸಂಪರ್ಕ ಸಾಧಿಸಿದ್ದೇನೆ, ಆದರೆ ಈ ಸಿನೆಮಾದಲ್ಲಿ ಮೌನದ ಮೂಲ ಅಭಿವ್ಯಕ್ತಿಪಡಿಸಲಿದ್ದೇನೆ ಮತ್ತು ಅದು ಜನರಲ್ಲಿ ನಗು ಉಕ್ಕಿಸುತ್ತದೆ ಮತ್ತು ಹತಾಶೆಯನ್ನು" ಎಂದು ವಿವರಿಸುವ ಸತೀಶ್, ನಿರ್ದೇಶಕ ಜಯತೀರ್ಥ 'ಮಹಿಳೆ'ಯನ್ನು ಕೇಂದ್ರ ವಸ್ತುವಾಗಿ ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸುತ್ತಾರೆ. 
"ಮಹಿಳೆಯರು, ಪುರುಷರು ಎಲ್ಲರಿಗು 'ಬ್ಯೂಟಿಫುಲ್  ಮನಸುಗಳು' ಪ್ರತಿಬಿಂಬವಿದ್ದಂತೆ. ಈ ಸಿನೆಮಾ ಮಾಧ್ಯಮ, ಪ್ರೇಕ್ಷಕರು ಮತ್ತು ನಮ್ಮನ್ನು ಗುರಿಯಾಗಿಸಿಕೊಂಡಿದೆ ಹಾಗು ಇವೆಲ್ಲವನ್ನೂ ಮಿಳಿತವಾಗಿ ಮಿಶ್ರಣ ಮಾಡಿದೆ" ಎನ್ನುವ ಸತೀಶ್ ಮಂಗಳೂರಿನಲ್ಲಿ ನಡೆದ ಸತ್ಯ ಘಟನೆಯೊಂದನ್ನು ಆಧರಿಸಿದ ಸಿನೆಮಾ ಇದು ಎನ್ನುತ್ತಾರೆ. 
"ಈ ಸಿನೆಮಾದಲ್ಲಿ ೭೦% ನಿಜ ಘಟನೆ ಮತ್ತು ೩೦% ಕಾಲ್ಪನಿಕ ಆದುದರಿಂದ ಹೆಚ್ಚು ತಟ್ಟುತ್ತದೆ. ವಿಶ್ವ ಇರುವವರೆಗೂ ಒಳಿತು ಕೆಡುಕು ಇರುತ್ತವೆ. ಆದರೆ ಅರಿವನ್ನು ವಿಸ್ತರಿಸುವುದು ನಮ್ಮ ಕರ್ತವ್ಯ" ಎನ್ನುತ್ತಾರೆ ಸತೀಶ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.