ಕಥೆಯೇ 'ಟಗರು' ಚಿತ್ರದ ಹೀರೊ: ನಿರ್ದೇಶಕ ಸೂರಿ
ಸೂರಿ ನಿರ್ದೇಶನದ, ಶಿವರಾಜ್ ಕುಮಾರ್ ನಟನೆಯ 'ಟಗರು' ಸಿನೆಮಾದ ಚಿತ್ರೀಕರಣ ಸದ್ಯಕ್ಕೆ ಉಡುಪಿಯ ಕಾಪು ಬೀಚ್ ಬಳಿ ಭರದಿಂದ ಸಾಗುತ್ತಿದ್ದು, ಸೆಂಚ್ಯುರಿ ಸ್ಟಾರ್ ಮತ್ತು ಮಾನ್ವಿತಾ ಹರೀಶ್ ಅವರ

Published On :
ಬೆಂಗಳೂರು: ಸೂರಿ ನಿರ್ದೇಶನದ, ಶಿವರಾಜ್ ಕುಮಾರ್ ನಟನೆಯ 'ಟಗರು' ಸಿನೆಮಾದ ಚಿತ್ರೀಕರಣ ಸದ್ಯಕ್ಕೆ ಉಡುಪಿಯ ಕಾಪು ಬೀಚ್ ಬಳಿ ಭರದಿಂದ ಸಾಗುತ್ತಿದ್ದು, ಸೆಂಚ್ಯುರಿ ಸ್ಟಾರ್ ಮತ್ತು ಮಾನ್ವಿತಾ ಹರೀಶ್ ಅವರ ಸ್ಟಿಲ್ ಲಭ್ಯವಿದ್ದು, ಸಿನೆಮಾ ಬಗ್ಗೆ ಕುತೂಹಲ ಹುಟ್ಟಿಸುವಂತಿದೆ.
ಶೂಟಿಂಗ್ ನಿರತ ಸೂರಿ "ಸಿನೆಮಾದಲ್ಲಿ ಹಲವು ಆಸಕ್ತಿದಾಯಕ ಸಂಗತಿಗಳಿವೆ. ವಿಷಯ ಸಂಪೂರ್ಣ ಸ್ಕ್ರೀನ್ ಪ್ಲೇ ಮೇಲೆ ಅವಲಂಬಿತವಾಗಿರುವುದರಿಂದ ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ. ಈ ಸಿನೆಮಾದಲ್ಲಿ ಕಥೆಯೇ ಹೀರೊ ಮತ್ತು ಬಹಳ ಗಟ್ಟಿ ಪಾತ್ರಗಳಿವೆ" ಎನ್ನುತ್ತಾರೆ ನಿರ್ದೇಶಕ.
"ಇದರ ಬಗ್ಗೆ ಶಿವರಾಜ್ ಕುಮಾರ್ ಅಂತಹ ಸ್ಟಾರ್ ನಟರಿಗೂ ಅರಿವಿದೆ ಮತ್ತು ಇತರ ನಟರಾದ ಮಾನ್ವಿತಾ ಹರೀಶ್, ಧನಂಜಯ್, ವಶಿಷ್ಠ ಸಿಂಹ ಅವರಿಗೂ" ಎಂದು ತಿಳಿಸುವ ಸೂರಿ ಪ್ರೇಕ್ಷಕರು ಸ್ವಲ್ಪ ತಾಳ್ಮೆಯಿಂದರಬೇಕು ಎಂದು ಕೋರುತ್ತಾರೆ. ಫಲಿತಾಂಶ ಅದ್ಭುತವಾಗಿ ಮೂಡಿ ಬರುವುದರ ಬಗ್ಗೆ ಭರವಸೆ ವ್ಯಕ್ತಪಡಿಸುವ ಅವರು "ಟಗರು ತನ್ನ ಕಥೆಯ ಜೊತೆಗೆ ಮಾತನಾಡಬೇಕು ಎಂಬುದು ನನ್ನಾಸೆ ಮತ್ತು ಅದರ ಪಾತ್ರಗಳ ಮೂಲಕ. ಯಾರು ಯಾರ ಜೊತೆಗೆ ಎಷ್ಟು ಸ್ಕ್ರೀನ್ ಸಮಯ ಕಳೆಯುತ್ತಾರೆ ಎಂಬುದರ ಮೇಲಲ್ಲ" ಎನ್ನುತ್ತಾರೆ.
ಕೆ ಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಈ ಸಿನೆಮಾಗೆ ಮಹೇಂದ್ರ ಸಿಂಹ ಸಿನೆಮ್ಯಾಟೋಗ್ರಾಫರ್ ಮತ್ತು ಚರಣ್ ರಾಜ್ ಅವರ ಸಂಗೀತವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


