ಸಿನಿಮಾ ಸುದ್ದಿ

ಮುಫ್ತಿ ಭೇಟಿ ಮಾಡಿದ್ದಕ್ಕೆ ವಿವಾದಕ್ಕೆ ಸಿಲುಕಿದ ದಂಗಲ್ ನಟಿ ಜೈರಾ ವಾಸೀಂ

ಬಾಲಿವುಡ್'ನ ಯಶಸ್ವಿ ದಂಗಲ್ ಚಿತ್ರದಲ್ಲಿ ಗೀತಾ ಫೊಗಟ್ ಪಾತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದ ನಟಿ ಜೈರಾ ವಾಸೀಂ ಅವರು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಭೇಟಿ ಮಾಡುವ ಮೂಲಕ ಇದೀಗ ವಿವಾದಕ್ಕೆ...

ಮುಫ್ತಿ ಭೇಟಿ ಮಾಡಿದ್ದಕ್ಕೆ ವಿವಾದಕ್ಕೆ ಸಿಲುಕಿದ ದಂಗಲ್ ನಟಿ ಜೈರಾ ವಾಸೀಂ
ನಟಿ ಜೈರಾ ವಾಸೀಂ
Published On :

ಶ್ರೀನಗರ: ಬಾಲಿವುಡ್'ನ ಯಶಸ್ವಿ ದಂಗಲ್ ಚಿತ್ರದಲ್ಲಿ ಗೀತಾ ಫೊಗಟ್ ಪಾತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದ ನಟಿ ಜೈರಾ ವಾಸೀಂ ಅವರು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಭೇಟಿ ಮಾಡುವ ಮೂಲಕ ಇದೀಗ ವಿವಾದಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ.

ದಂಗಲ್ ಚಿತ್ರ ಯಶಸ್ಸು ಕಂಡ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರನ್ನು ಜೈರಾ ಅವರು ಕೆಲ ದಿನಗಳ ಹಿಂದಷ್ಟೇ ಭೇಟಿಯಾಗಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿತ್ತು. ಕೆಲವರು ಜೈರಾ ಅವರು ಕ್ಷಮೆಯಾಚಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಜೈರಾ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಬೆಂಬಲ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಜೈರಾ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡಿದ್ದಾರೆ. ಆದರೆ, ಇದೂ ಕೂ ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಕ್ಷಮೆಯಾಚಿಸುವ ಜೈರಾ ಅವರು, ನನ್ನನ್ನು ಆದರ್ಶ ಎಂದು ಬಿಂಬಿಸಲಾಗುತ್ತಿದೆ. ಅದು ತಪ್ಪು. ನಾನೂ ಯಾರಿಗೂ ಆದರ್ಶಳಲ್ಲ. ಹಾಗೆಯೇ ನನ್ನನ್ನು ಯಾರೂ ಅನುಸರಿಸುವ ಅಗತ್ಯವೂ ಇಲ್ಲ. ನನ್ನ ಇತ್ತೀಚಿನ ಕೆಲ ಕ್ರಮಗಳಿಂದ ಅಥವಾ ನಾನು ಕೆಲವು ವ್ಯಕ್ತಿಗಳನ್ನು ಇತ್ತೀಚೆಗೆ ಭೇಟಿ ಮಾಡಿದ್ದರಿಂದ ಕೆಲವರಿಗೆ ನೋವಾಗಿದೆ. ಆದ್ದರಿಂದ ಈ ಬಗ್ಗೆ ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಿದ್ದೇನೆಂದು ಹೇಳಿಕೊಂಡಿದ್ದಾರೆ.

ಇನ್ನು ಜೈರಾ ಅವರು ಕ್ಷಮೆಯಾಚನೆ ಮಾಡಿದ್ದಕ್ಕೆ ಕೆಲವು ವಿರೋಧ ವ್ಯಕ್ತಪಡಿಸುತ್ತಿದ್ದು. ಒತ್ತಡ ಹೇರಿದ್ದರಿಂದಾಗಿ ಜೈರಾ ಅವರು ಈ ರೀತಿಯಾಗಿ ಕ್ಷಮೆ ಕೇಳುತ್ತಿದ್ದಾರೆಂದು ಹೇಳುತ್ತಿದ್ದಾರೆ. ಬಾಲಿವುಡ್ ಹಲವು ನಟ ಹಾಗೂ ನಟಿಯಲು ಜೈರಾ ಅವರ ಬೆಂಬಲಕ್ಕೆ ಧಾವಿಸಿದ್ದು, ಜೈರಾ ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ತಿಳಿಯದೆಯೇ ನನ್ನಿಂದ ನೋವುಂಟಾಗಿರುವವದಿಗೆ ನಾನು ಕ್ಷಮೆಯಾಚಿಸುತ್ತೇನೆ. ಅವರ ಭಾವನೆಗಳನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ವಿಶೇಷವಾಗಿ ಕಳೆದ ಆರು ತಿಂಗಳಿಂದ ಕಣಿವೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ಹಿನ್ನಲೆಯಲ್ಲಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಆದರೆ, ಕೆಲವು ಸಮಯಗಳಲ್ಲಿ ನಮ್ಮ ನಿಯಂತ್ರಣಕ್ಕೂ ಮೀರಿ ಕೆಲ ಘಟನೆಗಳು ನಡೆದುಹೋಗುತ್ತವೆ ಎಂಬುದನ್ನು ಜನರು ಕೂಡ ಅರ್ಥ ಮಾಡಿಕೊಳ್ಳುತ್ತಾರೆಂಬ ನಂಬಿಕೆ ನನಗಿದೆ. ನಾನು ಕೇವಲ 16 ವರ್ಷದ ಹುಡುಗಿಯಾಗಿದ್ದು, ನನ್ನನ್ನು ಹಾಗೆಯೇ ನೀವು ಪರಿಗಣಿಸಬೇಕು. ನಾನು ಮಾಡಿದ್ದಕ್ಕೆ ಕ್ಷಮೆಯಿರಲಿ. ನಾನು ಯಾವುದನ್ನೂ ಉದ್ದೇಶ ಪೂರ್ವಕವಾಗಿ ಮಾಡಿಲ್ಲ.

ಕಾಶ್ಮೀರ ಯುವಕರಿಗೆ ನಾನು ಆದರ್ಶಳೆಂಬಂತೆ ಬಿಂಬಿಸಲಾಗುತ್ತಿದೆ. ಇದಕ್ಕೆ ಮೊದಲು ಸ್ಪಷ್ಟನೆ ನೀಡಲು ಬಯಸುತ್ತೇನೆ. ನಾನೂ ಯಾರಿಗೂ ಆದರ್ಶಳಲ್ಲ. ಹಾಗೆಯೇ ನನ್ನನ್ನು ಯಾರೂ ಅನುಸರಿಸುವ ಅಗತ್ಯವಿಲ್ಲ. ನಾನು ಏನು ಮಾಡುತ್ತಿದ್ದೇನೋ ಅದರ ಬಗ್ಗೆ ನನಗೆ ಹೆಮ್ಮೆಯಿಲ್ಲ. ಪ್ರತೀಯೊಬ್ಬರಿಗೆ ಪ್ರಮುಖವಾಗಿ ಯುವಕರಿಗೆ ಹೇಳಲು ಬಯಸುತ್ತೇನೆ ನನಗಿಂತಲೂ ಈ ಪ್ರಪಂಚದಲ್ಲಿ, ಇತಿಹಾಸದಲ್ಲಿ ಉನ್ನತವಾದ ವ್ಯಕ್ತಿಗಳಿದ್ದಾರೆ. ಅವರನ್ನು ನಿಮ್ಮ ಆದರ್ಶ ವ್ಯಕ್ತಗಳನ್ನಾಗಿ ಮಾಡಿಕೊಳ್ಳಿ. ಮತ್ತಷ್ಟು ವಾಗ್ವಾದಗಳನ್ನು ಆರಂಭಿಸುವುದು ನನಗಿಷ್ಟವಿಲ್ಲ. ಇದು ಕೇವಲ ನನ್ನ ಕಡೆಯಿಂದ ನೀಡಿರುವ ತಪ್ಪೊಪ್ಪಿಗೆ ಎಂದು ಹೇಳಿದ್ದಾರೆ.

ಇನ್ನು ಒತ್ತಡ ಹೇರಿರುವ ಕುರಿತಂತೆಯೂ ಜೈರಾ ಸ್ಪಷ್ಟನೆ ನೀಡಿದ್ದು, ನನ್ನ ಮೇಲೆ ಯಾರೂ ಒತ್ತಡವನ್ನು ಹೇರಿಲ್ಲ. ಸ್ವಂತ ವಿವೇಚನೆಯಿಂದಲೇ ನಾನು ಕ್ಷಮೆಯಾಚಿಸಿದ್ದೇನೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.