ಸಿನಿಮಾ ಸುದ್ದಿ

ಬ್ಯೂಟಿಫ‌ುಲ್‌ ಮನಸ್ಸುಗಳು ಸಿನಿಮಾ ಮಹಿಳೆಯರಿಗೆ ಅರ್ಪಣೆ

ನೈಜ ಘಟನೆಯ ಕಥೆಯ ಮೇಲೆ ನಿರ್ದೇಶಕ ಜಯತೀರ್ಥ ಬ್ಯೂಟಿಫುಲ್ ಮನಸ್ಸುಗಳು ಎಂಬ ಸಿನಿಮಾ ನಿರ್ದೇಶಿಸಲು ...

ಬ್ಯೂಟಿಫ‌ುಲ್‌ ಮನಸ್ಸುಗಳು ಸಿನಿಮಾ ಮಹಿಳೆಯರಿಗೆ ಅರ್ಪಣೆ
ಶೃತಿ ಹರಿಹರನ್ ಮತ್ತು ನೀನಾಸಂ ಸತೀಶ
Published On :

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಇನ್ನೂ ಮಾಸಿಲ್ಲ, ಇಂಥಹುದೇ ಒಂದು ನೈಜ ಘಟನೆಯ ಕಥೆಯ ಮೇಲೆ ನಿರ್ದೇಶಕ ಜಯತೀರ್ಥ ಬ್ಯೂಟಿಫುಲ್ ಮನಸ್ಸುಗಳು ಎಂಬ ಸಿನಿಮಾ ನಿರ್ದೇಶಿಸಲು ಹೊರಟಿದ್ದಾರೆ.

ನಿನಾಸಂ ಸತೀಶ್ ಮತ್ತು ಶೃತಿ ಹರಿಹರನ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.  2013 ರಲ್ಲಿ ನಡೆದ ನೈಜ ಘಟನೆಯೊಂದರ ಕಥೆ ಆಧರಿಸಿ ಸಿನಿಮಾ ನಿರ್ಮಿಸಲಾಗುತ್ತಿದೆ. ಹೆಣ್ಣಿನ ಸೌಂದರ್ಯವೇ ಕೆಲವೊಮ್ಮೆ ಅವಳ ನೋವಿಗೂ ಕಾರಣವಾಗುತ್ತದೆ ಎಂಬ ಸತ್ಯ ಈ ಕಥೆಯಲ್ಲಿ ಹೇಳಲಾಗಿದೆ. ಇದೊಂದು ಸರಳ ಸುಂದರ ರೋಮ್ಯಾಂಟಿಕ್ ಕಥೆಯಾಗಿದೆ.

ಪರಸ್ಪರ ಪ್ರೀತಿಸುವ ಇಬ್ಬರು ಯುವಕ ಯುವತಿಯರು, ಅಹಿತಕರ ಘಟನೆಗಳಲ್ಲಿ ಸಿಲುಕಿಕೊಂಡು ತಮ್ಮ ಸಂಬಂಧದಿಂದ ದೂರವಾಗಿ ಇಬ್ಬರು ನೋವನುಭವಿಸುತ್ತಾರೆ.

ಮಂಗಳೂರಿನಲ್ಲಿ ನಡೆದ ಈ ಘಟನೆಯ ಸಂತ್ರಸ್ತರನ್ನು ನಿರ್ದೇಶಕ ಭೇಟಿ ಮಾಡಿ ಅವರಿಂದ ಎಲ್ಲಾ ಮಾಹಿತಿಗಳನ್ನು ಪಡೆದಿದ್ದಾರೆ. ಘಟನೆ ನಡೆದ ನಂತರ ಸಮಾದ ಮತ್ತು ಪೊಲೀಸರ ವಿಚಾರಣೆ ವೇಳೆ ಅನುಭವಿಸಿದ ಸಮಸ್ಯೆಗಳ ಬಗ್ಗೆ ವಿವರ ಪಡೆದು ಕೊಂಡಿದ್ದಾರೆ. ಈ ಕಥೆ ಕೇಳಿದ ಮೇಲೆ ನನಗೆ ವಿಭಿನ್ನವಾದ ಚಿತ್ರ ನಿರ್ಮಿಸಬೇಕು ಎಂದು ನನಗೆ ಅನ್ನಿಸಿದೆ ಎಂದು ಜಯತೀರ್ಥ ಹೇಳಿದ್ದಾರೆ.

ರಾಜ್ಯದ ಎಲ್ಲಾ ಮಹಿಳೆಯರಿಗೂ ಈ ಸಿನಿಮಾ ಸಮರ್ಪಿಸುವುದಾಗಿ ಹೇಳಿದ್ದಾರೆ. ಪಂಚಿಂಗ್ ಡೈಲಾಗ್ಸ್ ಗಳಿದ್ದು ಮನ ತಣಿಸುವ ಹಾಡುಗಳಿವೆ. ಭಾವನೆಗಳ ಜೊತೆಗಿನ ಈ ಕಥೆ ತೀರಾ ವಿಭಿನ್ನವಾಗಿದೆ ಎಂದು ಹೇಳಿದ್ದಾರೆ.ಸಿನಿಮಾದಲ್ಲಿ ಅಚ್ಯುತಕುಮಾರ್, ತಬಲನಾಣಿ ಪ್ರಶಾಂತ್ ಸಿದ್ದಿ ಸೇರಿದಂತೆ ಹಲವು ಹೊಸ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.