ಸಿನಿಮಾ ಸುದ್ದಿ

ಪುರ್ಮಿ ನಂತರ ಇಂದು ಅನನ್ಯ ಟೀಚರ್ ಪಾತ್ರ ಪರಿಚಯಿಸಲಿರುವ ಸುನಿ

ಸುನಿ ನಿರ್ದೇಶನದ ಮುಂದಿನ ಚಿತ್ರ 'ಆಪರೇಷನ್ ಅಲಮೇಲಮ್ಮ' ಸಾವಧಾನವಾಗಿ ಸಿನೆರಸಿಕರಲ್ಲಿ ಕುತೂಹಲ ಕೆರಳಿಸುತ್ತಿದೆ. ಪುರ್ಮಿ-ಪಾರಿವಾಳ ಪಾತ್ರವನ್ನು ಪರಿಚಿಯಿಸಿದ ಮೇಲೆ ಈಗ ಮತ್ತೊಂದು ಪಾತ್ರದ

ಪುರ್ಮಿ ನಂತರ ಇಂದು ಅನನ್ಯ ಟೀಚರ್ ಪಾತ್ರ ಪರಿಚಯಿಸಲಿರುವ ಸುನಿ
'ಆಪರೇಷನ್ ಅಲಮೇಲಮ್ಮ' ಸಿನೆಮಾದಲ್ಲಿ ಶ್ರದ್ಧ ಶ್ರೀನಾಥ್
Published On :
ಬೆಂಗಳೂರು: ಸುನಿ ನಿರ್ದೇಶನದ ಮುಂದಿನ ಚಿತ್ರ 'ಆಪರೇಷನ್ ಅಲಮೇಲಮ್ಮ' ಸಾವಧಾನವಾಗಿ ಸಿನೆರಸಿಕರಲ್ಲಿ ಕುತೂಹಲ ಕೆರಳಿಸುತ್ತಿದೆ. ಪುರ್ಮಿ-ಪಾರಿವಾಳ ಪಾತ್ರವನ್ನು ಪರಿಚಿಯಿಸಿದ ಮೇಲೆ ಈಗ ಮತ್ತೊಂದು ಪಾತ್ರದ ಅನಾವರಣಕ್ಕೆ ನಿರ್ದೇಶಕ ಮುಂದಾಗಿದ್ದಾರೆ. 
ಮನೀಶ್ ರಿಷಿ ನಟಿಸಿರುವ ಪುರ್ಮಿ ಪಾತ್ರದ ಟೀಸರ್ ಜನಮೆಚ್ಚುಗೆ ಪಡೆದಿತ್ತು. ಈಗ ಒಂದು ತಿಂಗಳ ನಂತರ ನಟಿ ಶ್ರದ್ಧ ಶ್ರೀನಾಥ್ ನಟನೆಯ ಅನನ್ಯ ಟೀಚರ್ ಪಾತ್ರವನ್ನು ಪರಿಚಯಿಸುವ ಟೀಸರ್ ಬಿಡುಗಡೆಗೆ ಮುಂದಾಗಿದ್ದಾರೆ. 
ಕಳೆದ ಟೀಸರ್ ಅನ್ನು ತರಕಾರಿ ಮಾರಾಟಗಾರ ಬಿಡುಗಡೆ ಮಾಡಿದ್ದರೆ, ಈ ನೂತನ ಟೀಸರ್ ಶಾಲಾ ಉಪನ್ಯಾಸಕರಿಂದ ಬಿಡುಗಡೆಯಾಗಲಿದೆ. 
ಅನನ್ಯ ಪಾತ್ರಕ್ಕೆ ಎರಡು ಚಹರೆಗಳಿವೆ ಎನ್ನುವ ನಿರ್ದೇಶಕ "ಕೌಟುಂಬಿಕವಾಗಿ ಅವರು ಮನೆಯಲ್ಲಿ ಮೌನವಾಗಿರುತ್ತಾರೆ, ಆದರೆ ಅವರು ಸ್ವಚ್ಛಂದದ ಹುಡುಗಿ... ಅದರ ಪರಿಚಯ ಪ್ರೇಕ್ಷಕರಿಗೆ ಟೀಸರ್ ಮೂಲಕ ಸಿಗಲಿದೆ" ಎನ್ನುತ್ತಾರೆ. 
ರಾಜೇಶ್ ನಟರಂಗ ಮತ್ತು ಅರುಣ್ ಬಾಲರಾಜ್ ಕೂಡ ನಟಿಸಿರುವ ಈ ಸಿನೆಮಾದಲ್ಲಿ, ಜುಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ, ಅಭಿಷೇಕ್ ಕಾಸರಗೋಡ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.