'೧ಸ್ಟ್ ರ್ಯಾಂಕ್ ರಾಜು' ನಿರ್ದೇಶಕರ ಹೊಸ ಸಿನೆಮಾ 'ರಾಜು ಕನ್ನಡ ಮೀಡಿಯಮ್'
ಚೊಚ್ಚಲ ಸಿನೆಮಾ '೧ಸ್ಟ್ ರ್ಯಾಂಕ್ ರಾಜು' ನಿರ್ದೇಶಿಸಿ ಗಮನ ಸೆಳೆದ ನಿರ್ದೇಶಕ ನರೇಶ್ ಕುಮಾರ್, ಈಗ ತಮ್ಮ ಎರಡನೇ ಸಿನೆಮಾಗೆ ಸಜ್ಜಾಗಿದ್ದಾರೆ. ಅವರಿಗೆ ಅದೃಷ್ಟ ತಂದಿದ್ದ ರಾಜು ಹೆಸರನ್ನು

Published On :
ಬೆಂಗಳೂರು: ಚೊಚ್ಚಲ ಸಿನೆಮಾ '೧ಸ್ಟ್ ರ್ಯಾಂಕ್ ರಾಜು' ನಿರ್ದೇಶಿಸಿ ಗಮನ ಸೆಳೆದ ನಿರ್ದೇಶಕ ನರೇಶ್ ಕುಮಾರ್, ಈಗ ತಮ್ಮ ಎರಡನೇ ಸಿನೆಮಾಗೆ ಸಜ್ಜಾಗಿದ್ದಾರೆ. ಅವರಿಗೆ ಅದೃಷ್ಟ ತಂದಿದ್ದ ರಾಜು ಹೆಸರನ್ನು ಉಳಿಸಿಕೊಂಡಿದ್ದು, ನೂತನ ಸಿನೆಮಾಗೆ 'ರಾಜು ಕನ್ನಡ ಮೀಡಿಯಮ್' ಎಂದು ನಾಮಕರಣ ಮಾಡಿದ್ದಾರೆ. ಜೊತೆಗೆ '೧ಸ್ಟ್ ರ್ಯಾಂಕ್ ರಾಜು' ನಟ ಗುರುನಂದನ್ ಕೂಡ ಸದರಿ ಸಿನೆಮಾಗೆ ಹಿಂದಿರುಗಿದ್ದಾರೆ.
"ಗುರುನಂದನ್ ನಟಿಸಿದ ರಾಜು ಪಾತ್ರ ಬಹಳ ಜನಪ್ರಿಯವಾಗಿತ್ತು. ಹಲವಾರು ಶೀರ್ಷಿಕೆಗಳನ್ನು ಪರಿಗಣಿಸಿದ ಮೇಲೆ 'ರಾಜು' ಹೆಸರಿಗೆ ಹಿಂದಿರುಗಲು ನಿಶ್ಚಯಿಸಿದೆವು. ಇದು ಕನ್ನಡದಲ್ಲಿ ಅತಿ ಸಾಮಾನ್ಯ ಹೆಸರು" ಎನ್ನುತ್ತಾರೆ ನಿರ್ಮಾಪಕ ಸುರೇಶ. ಇವರು 'ಶಿವಲಿಂಗ' ಸಿನೆಮಾದ ನಿರ್ಮಾಪಕ ಕೂಡ.
'ರಂಗಿತರಂಗ'ದ ನಟಿ ಅವಂತಿಕಾ ಶೆಟ್ಟಿ 'ರಾಜು ಕನ್ನಡ ಮೀಡಿಯಮ್'ನಲ್ಲಿ ನಾಯಕ ನಟಿ. ಚಿತ್ರತಂಡ ಈಗಾಗಲೇ ೬೦% ಚಿತ್ರೀಕರಣ ಮುಗಿಸಿದ್ದು, ಉಳಿದ ಭಾಗವನ್ನು ಮಲೇಷಿಯಾ ಅಥವಾ ಥೈಲ್ಯಾಂಡ್ ನಲ್ಲಿ ಚಿತ್ರೀಕರಿಸಲು ಎದುರು ನೋಡುತ್ತಿದೆ.
ಈಮಧ್ಯೆ ಭಾನುವಾರ ಸಿನೆಮಾದ ಟೀಸರ್ ಅನ್ನು ತಂಡ ಬಿಡುಗಡೆ ಮಾಡಲಿದೆ. 'ರಾಜು ಕನ್ನಡ ಮೀಡಿಯಮ್' ತಂಡ ಹಿಂದಿನ ಸಿನೆಮಾದ ಯಶಸ್ಸನ್ನು ಪುನರ್ ಸೃಷ್ಟಿಸಲಿದೆಯೇ? ಕಾದು ನೋಡಬೇಕು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಅವಂತಿಕಾ ಶೆಟ್ಟಿ1st Rank Rajuಗುರುನಂದನ್GurunandanNaresh Kumarನರೇಶ್ ಕುಮಾರ್Raju Kannada Mediumರಾಜು ಕನ್ನಡ ಮೀಡಿಯಮ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


