ಕ್ರೇಜ್ ಹುಟ್ಟಿಸಿದ 'ರಾಜಕುಮಾರ' ಟೀಸರ್
ಪುನೀತ್ ರಾಜಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ 'ರಾಜಕುಮಾರ'ದ ಎರಡನೇ ಟೀಸರ್ ಹೊಸವರ್ಷಕ್ಕೆ ಬಿಡುಗಡೆಯಾಗಿದ್ದು, ಬಿಡುಗಡೆಯಾದ ನಾಲ್ಕೇ ಘಂಟೆಗಳಲ್ಲಿ ೫೦ ಸಾವಿರ ಬಾರಿ

Published On :
ಬೆಂಗಳೂರು: ಪುನೀತ್ ರಾಜಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ 'ರಾಜಕುಮಾರ'ದ ಎರಡನೇ ಟೀಸರ್ ಹೊಸವರ್ಷಕ್ಕೆ ಬಿಡುಗಡೆಯಾಗಿದ್ದು, ಬಿಡುಗಡೆಯಾದ ನಾಲ್ಕೇ ಘಂಟೆಗಳಲ್ಲಿ ೫೦ ಸಾವಿರ ಬಾರಿ ವೀಕ್ಷಣೆಯಾಗಿದ್ದು, ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಇಡೀ ಸಿನೆಮಾದ ತಾರಾಗಣವನ್ನು ಪರಿಚಯಿಸಲಾಗಿದೆ. ನಟ ದತ್ತಣ್ಣ ಪುನೀತ್ ರಾಜಕುಮಾರ್ ಜೊತೆಗೆ ಬ್ಯಾಸ್ಕೆಟ್ ಬಾಲ್ ಆಡುತ್ತಿರುವ ಸ್ಟಿಲ್ ಈಗ ಲಭ್ಯವಾಗಿದ್ದು, ಸಿನೆಮಾ ಬಗ್ಗೆ ಹೆಚ್ಚಿನ ಕುತೂಹಲ ಹುಟ್ಟಿಸಿದೆ.
ಸಂತೋಷ್ ಆನಂದರಾಮ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕ ನಟಿಯಾಗಿದ್ದು, ಶರತ್ ಕುಮಾರ್, ಅಚ್ಯುತ್ ಕುಮಾರ್, ಪ್ರಕಾಶ್ ರಾಜ್, ಅನಂತ್ ನಾಗ್, ಬಾರ್ಘವಿ ನಾರಾಯಣ್, ಅಶೋಕ್, ಅರುಣಾ ಬಾಲರಾಜ್, ವಿಜಯಲಕ್ಷ್ಮಿ ಸಿಂಗ್, ದಿವಂಗತ ಅನಿಲ್, ಹೊನ್ನವಳ್ಳಿ ಕೃಷ್ಣ, ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲಾ, ಚಿಕ್ಕಣ್ಣ ಹೀಗೆ ಪ್ರಖಾತರ ದಂಡೇ ಸಿನಿಮಾದಲ್ಲಿದೆ.
ಈ ಸಿನೆಮಾವನ್ನು ಆಸ್ಟ್ರೇಲಿಯಾ, ಬೆಂಗಳೂರು, ಮೈಸೂರು, ಹೈದರಾಬಾದ್, ಗೋವಾ ಮತ್ತು ದೆಹಲಿಯಲ್ಲಿ ಚಿತ್ರೀಕರಿಸಲಾಗಿದೆ. ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದು, ವೆಂಕಟೇಶ್ ಅನುರಾಗ್ ಅವರದ್ದು ಸಿನೆಮ್ಯಾಟೋಗ್ರಫಿ. ಶೀಘ್ರದಲ್ಲೇ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


