ಮಾರ್ಚ್ ಮೊದಲ ವಾರದಿಂದ 'ಟಗರು' ಸಿನೆಮಾ ಸೆಟ್ ಸೇರಲಿರುವ ಭಾವನಾ
ಸದ್ಯಕ್ಕೆ ಪೃಥ್ವಿರಾಜ್ ನಟನೆಯ 'ಆಡಮ್' ಮಲಯಾಳಂ ಸಿನೆಮಾದಲ್ಲಿ ನಟಿಸುತ್ತಿರುವ ನಟಿ ಭಾವನಾ ಶೀಘ್ರದಲ್ಲೇ 'ಟಗರು' ಕನ್ನಡ ಸಿನೆಮಾ ಸೆಟ್ ಸೇರಲಿದ್ದಾರೆ. ಸೂರಿ ನಿರ್ದೇಶನದ ಈ

Published On :
ಬೆಂಗಳೂರು: ಸದ್ಯಕ್ಕೆ ಪೃಥ್ವಿರಾಜ್ ನಟನೆಯ 'ಆಡಮ್' ಮಲಯಾಳಂ ಸಿನೆಮಾದಲ್ಲಿ ನಟಿಸುತ್ತಿರುವ ನಟಿ ಭಾವನಾ ಶೀಘ್ರದಲ್ಲೇ 'ಟಗರು' ಕನ್ನಡ ಸಿನೆಮಾ ಸೆಟ್ ಸೇರಲಿದ್ದಾರೆ. ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಭಾವನಾ ಶಿವರಾಜ್ ಕುಮಾರ್ ಎದುರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ಟಗರು' ಸಿನೆಮಾದ ಮುಂದಿನ ಹಂತದ ಚಿತ್ರೀಕರಣ ಮಾರ್ಚ್ ೩ ರಿಂದ ಪ್ರಾರಂಭವಾಗಲಿದ್ದು ಇದಕ್ಕೆ ಸಿದ್ಧವಾಗುತ್ತಿರುವ ಸೂರಿ, ನಟಿ ಚಿತ್ರತಂಡವನ್ನು ಸೇರುತ್ತಿರುವುದನ್ನು ಧೃಢೀಕರಿಸುತ್ತಾರೆ. "ನಾವು ಅವರ ಭಾಗದ ಚಿತ್ರೀಕರಣವನ್ನು ಮಾರ್ಚ್ ಮೊದಲ ವಾರದಿಂದ ನಿಗದಿ ಮಾಡಿದ್ದೇವೆ ಮತ್ತು ಅವರು ನಮ್ಮ ಸೆಟ್ ಸೇರಲಿದ್ದಾರೆ" ಎಂದು ತಿಳಿಸುತ್ತಾರೆ ಸೂರಿ.
ಈ ಹಿಂದೆ ಸೂರಿ ಅವರ 'ಜಾಕಿ' ಸಿನೆಮಾದ ಮೂಲಕ ಭಾವನಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಆಗ ಪುನೀತ್ ರಾಜಕುಮಾರ್ ಎದುರು ನಟಿಸಿದ್ದರು.
'ಟಗರು' ಸಿನೆಮಾದ ಈ ಭಾಗ ಬಹುತೇಕ ಬೆಂಗಳೂರಿನಲ್ಲೇ ಚಿತ್ರೀಕರಣಗೊಳ್ಳಲಿದ್ದು ಶಿವಣ್ಣ ಮತ್ತು ಭಾವನಾ ನಡುವಿನ ದೃಶ್ಯಗಳನ್ನು ಚಿತ್ರೀಕರಣ ಬಹುತೇಕ ಒಳಗೊಂಡಿವೆ.
ಚರಣ್ ರಾಜ್ ಸಿನೆಮಾಗೆ ಸಂಗೀತ ನೀಡಿದ್ದು, ಮಹೇಂದ್ರ ಸಿಂಹ ಅವರ ಸಿನೆಮ್ಯಾಟೋಗ್ರಫಿ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


