ಸಿನಿಮಾ ಸುದ್ದಿ

ಸುನಿ ಅವರ ಹೊಸ ಶೋಧ ವಿದ್ಯುತ್ ಚಂದ್ರ

ಹೆಚ್ಚು ಸದ್ದಿಲ್ಲದ ಸಿನೆಮಾಗಳನ್ನು ನಿರ್ದೇಶಿಸಿ ಮುಗಿಸುವ ಸುನಿ, 'ಆಪರೇಷನ್ ಅಲಮೇಲಮ್ಮ' ಕೆಲಸಗಳನ್ನು ಬಹುತೇಕ ಮುಗಿಸಿದ್ದು, ಈಗ ಜೊತೆ ಜೊತೆಗೆ ಮತ್ತೊಂದು ಸಿನೆಮಾವನ್ನು ಕೂಡ ಕೈಗೆತ್ತಿಕೊಂಡಿದ್ದಾರೆ.

ಸುನಿ ಅವರ ಹೊಸ ಶೋಧ ವಿದ್ಯುತ್ ಚಂದ್ರ
ನಟ ವಿದ್ಯುತ್ ಚಂದ್ರ
Published On :
ಬೆಂಗಳೂರು: ಹೆಚ್ಚು ಸದ್ದಿಲ್ಲದ ಸಿನೆಮಾಗಳನ್ನು ನಿರ್ದೇಶಿಸಿ ಮುಗಿಸುವ ಸುನಿ, 'ಆಪರೇಷನ್ ಅಲಮೇಲಮ್ಮ' ಕೆಲಸಗಳನ್ನು ಬಹುತೇಕ ಮುಗಿಸಿದ್ದು, ಈಗ ಜೊತೆ ಜೊತೆಗೆ ಮತ್ತೊಂದು ಸಿನೆಮಾವನ್ನು ಕೂಡ ಕೈಗೆತ್ತಿಕೊಂಡಿದ್ದಾರೆ. ಈ ಹೊಸ ಸಿನೆಮಾದ ಚಿತ್ರೀಕರಣ ಕೂಡ ೬೦% ಮುಗಿದಿದೆ ಎಂದು ತಿಳಿದುಬಂದಿದೆ. 
'ಜಾನ್ ಸೀನ' ಎಂಬ ಶೀರ್ಷಿಕೆ ಹೊತ್ತ ಈ ಸಿನೆಮಾದಲ್ಲಿ ನಟ ವಿದ್ಯುತ್ ಚಂದ್ರ ವಿದ್ಯುಕ್ತವಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ನಿರ್ದೇಶಕ ಹೇಳುವಂತೆ ನಟನ ಆಕರ್ಷಣೆ ಅವರ ಎತ್ತರ: ಆರು ಅಡಿ ಮೂರೂ ಇಂಚಿನ ಆಳು ಎನ್ನುತ್ತಾರೆ. "ಅವರಿಗೆ ಕ್ಲಾಸ್ ಮತ್ತು ಮಾಸ್ ಲುಕ್ ಎರಡು ಇದೆ" ಎನ್ನುತ್ತಾರೆ ಸುನಿ. 
ಇದು ಥ್ರಿಲ್ಲರ್ ಸಿನೆಮಾ ಎನ್ನುವ ನಿರ್ದೇಶಕ, ಹಬ್ಬದ ಸಮಯದಲ್ಲಿ ಚಂದ ಎತ್ತುವ ಯುವಕನೊಬ್ಬ ರಾಜಕೀಯ ನಾಯಕನ ವ್ಯೂಹದಲ್ಲಿ ಸಿಕ್ಕಿಹಾಕಿಕೊಳ್ಳುವ ಕಥೆ ಎನ್ನುತ್ತಾರೆ. "ಇದು ಮೂರು ದಿನಗಳಲ್ಲಿ ನಡೆಯುವ ಕಥೆ" ಎನ್ನುವ ಸುನಿ "ಜಾನ್ ಜೀವನ, ಪ್ರೇಮ ಕಥೆಯಲ್ಲಿ ಹಾಸ್ಯ ಮತ್ತು ಆಕ್ಷನ್ ಕೂಡ ಇರಲಿದೆ" ಎನ್ನುತ್ತಾರೆ. 
ಶುಭ್ರ ಅಯ್ಯಪ್ಪ ಈ ಸಿನೆಮಾದ ನಾಯಕನಟಿ. ಕ್ರಿಸ್ಟಲ್ ಪಾರ್ಕ್ ಸಿನೆಮಾದ ಚಂದ್ರಶೇಖರ್ ಈ ಸಿನೆಮಾವನ್ನು ನಿರ್ಮಿಸುತ್ತಿದ್ದಾರೆ. ಸುನಿ ಅವರ ಮತ್ತೊಂದು ಯೋಜನೆ 'ಚಮಕ್'ಗೆ ಕೂಡ ಇವರೇ ನಿರ್ಮಾಪಕ. "ನಾನು ಚಂದ್ರಶೇಖರ್ ಬಳಿ ಎರಡು ಸ್ಕ್ರಿಪ್ಟ್ ಕೊಂಡೊಯ್ದಿದ್ದೆ ಅವುಗಳಲ್ಲಿ ಅವರು ಎರಡನ್ನು ಆಯ್ಕೆ ಮಾಡಿಕೊಂಡರು" ಎನ್ನುವ ಸುನಿ "ಗಣೇಶ್ ಅಭಿನಯದ 'ಚಮಕ್'ಗೆ ಇನ್ನಷ್ಟು ಸಮಯ ಹಿಡಿಯಲಿದೆ. ಆದುದರಿಂದ ಸಮಯ ವ್ಯರ್ಥ ಮಾಡದೆ ಇರಲು 'ಜಾನ್ ಸೀನ' ಪ್ರಾರಂಭಿಸಿದೆ. ಇನ್ನು ಕೇವಲ ೪೦% ಚಿತ್ರೀಕರಣವಷ್ಟೇ ಬಾಕಿಯುಳಿದಿದೆ ಎಂಬುದು ಸಂತಸದ ವಿಷಯ" ಎನ್ನುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.