ನಟ ಗಣೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಿರ್ದೇಶಕ ಎಸ್. ನಾರಾಯಣ್
ಗೋಲ್ಡನ್ ಸ್ಟಾರ್ ಗಣೇಶ್ ಅವರು ದಾಖಲಿಸಿರುವ ಪ್ರಕರಣ ಸಂಬಂಧ ತಮಗೆ ನಿರಂತರವಾಗಿ ಸಮನ್ಸ್ ಬರುತ್ತಿರುವುದರಿಂದ ಬೇಸತ್ತು ನಿರ್ದೇಶಕ ನಾರಾಯಣ್ ...

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ದಾಖಲಿಸಿರುವ ಪ್ರಕರಣ ಸಂಬಂಧ ತಮಗೆ ನಿರಂತರವಾಗಿ ಸಮನ್ಸ್ ಬರುತ್ತಿರುವುದರಿಂದ ಬೇಸತ್ತು ನಿರ್ದೇಶಕ ನಾರಾಯಣ್ ಅವರು ಗಣೇಶ್ ವಿರುದ್ಧ ಮಾನನಷ್ಟ ನೊಟೀಸ್ ನೀಡಿದ್ದಾರೆ.
ಮೋಕ್ಷ ಅಗರಬತ್ತಿ ಕಂಪನಿ ಮತ್ತು ನಾಯಕ ನಟ ಗಣೇಶ್ ನಡುವಿನ ಕಾನೂನು ಹೋರಾಟ ಇದೀಗ ಗಣೇಶ್ ಮತ್ತು ಚಿತ್ರ ನಿರ್ದೇಶಕ ಎಸ್.ನಾರಾಯಣ್ ನಡುವೆ ಮಾನನಷ್ಟ ಮೊಕದ್ದಮೆಗೆ ದಾರಿ ಮಾಡಿಕೊಟ್ಟಿದೆ. ಅಗರಬತ್ತಿ ಜಾಹೀರಾತಿಗೆ ಸಂಬಂಧಿಸಿದಂತೆ ಗಣೇಶ್ ಮೋಕ್ಷ ಅಗರಬತ್ತಿ ಕಂಪೆನಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಎಸ್.ನಾರಾಯಣ್ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಚೆಲುವಿನ ಚಿತ್ರದ ಚಿತ್ರದ ಪ್ರಚಾರಕ್ಕಾಗಿ ಅಗರಬತ್ತಿ ಕಂಪನಿಯೊಂದರ ಜೊತೆಗೆ ನಾರಾಯಣ್ ಒಪ್ಪಂದ ಮಾಡಿಕೊಂಡಿದ್ದರು. ಪ್ರಚಾರದ ಸಲುವಾಗಿ ಮೂರು ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರೂ, ಅವಧಿ ಮುಗಿದ ಬಳಿಕವೂ ಸಂಸ್ಥೆಯು ಚಿತ್ರದ ಹೆಸರನ್ನು ಪ್ರಚಾರಕ್ಕೆ ಬಳಸಿಕೊಂಡಿದೆ.
ಅವಧಿ ಮುಗಿದರೂ, ತಮ್ಮ ಹೆಸರನ್ನು ಅಗರಬತ್ತಿಯ ಪ್ರಚಾರಕ್ಕೆ ಯಾಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಗಣೇಶ್, ಅಗರಬತ್ತಿ ಸಂಸ್ಥೆಯ ಮೇಲೆ ಕೇಸು ಹಾಕಿದ್ದಾರೆ. ಅಗರಬತ್ತಿಯವರು ನಾರಾಯಣ್‌ರವರನ್ನು ಪಾರ್ಟಿ ಮಾಡಿದ್ದರಿಂದ ನಾರಾಯಣ್ ಅವರಿಗೂ ಸಮನ್ಸ್ ಹೋಗಿದೆ. ಗಣೇಶ್ ದೂರು ದಾಖಲಿಸಿದ್ದರಿಂದಲೇ ತಮಗೆ ಸಮನ್ಸ್ ಬರುತ್ತಿದೆ. ಮಾತುಕತೆಯಿಂದ ಇದನ್ನು ಬಗೆಹರಿಸಿಕೊಳ್ಳಬಹುದಿತ್ತು ಎಂದ ಅವರು ಈ ವಿಷಯವಾಗಿ ಸಾಕಷ್ಟು ಮಾನಸಿಕ ಹಿಂಸೆಯಾಗಿದೆ ಎಂದು ಗಣೇಶ್ ಗೆ ನೊಟೀಸ್ ನೀಡಿದ್ದಾರಂತೆ.
ಇದರಿಂದ ಅಸಮಾಧಾನಗೊಂಡಿರುವ ನಾರಾಯಣ್, ಗಣೇಶ್ ದಾಖಲಿಸಿದ ದೂರಿನಿಂದ ತಮಗೂ ಸಮನ್ಸ್ ಬಂದಿದ್ದು, ಮಾನಹಾನಿಯುಂಟಾಗಿದೆ. ಹೀಗಾಗಿ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ತಮ್ಮ ವಕೀಲರ ಮೂಲಕ ನಾರಾಯಣ್ ಗಣೇಶ್ ಗೆ ನೋಟೀಸ್ ನಿಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


