ಶಿವರಾತ್ರಿಯಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ 3 ಸಿನಿಮಾಗಳಿಗೆ ಮುಹೂರ್ತ
2017ನೇ ವರ್ಷದ ರವಿಚಂದ್ರನ್ ಅಭಿನಯದ ಮೊದಲ ಸಿನಿಮಾ ಹೆಬ್ಬುಲಿ ನಾಳೆ ತೆರೆ ಕಾಣಲಿದೆ. ಸುದೀಪ್ ಜೊತೆ ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ...

ಬೆಂಗಳೂರು: 2017ನೇ ವರ್ಷದ ರವಿಚಂದ್ರನ್ ಅಭಿನಯದ ಮೊದಲ ಸಿನಿಮಾ ಹೆಬ್ಬುಲಿ ನಾಳೆ ತೆರೆ ಕಾಣಲಿದೆ. ಸುದೀಪ್ ಜೊತೆ ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಶುಕ್ರವಾರ ಶಿವರಾತ್ರಿ ಹಬ್ಬದಂದು ರವಿಚಂದ್ರನ್ ಅವರ ಮೂರು ಸಿನಿಮಾಗಳಿಗೆ ಮುಹೂರ್ಥ ನಡೆಯಲಿದೆ. ಎರಡು ಸಿನಿಮಾದಲ್ಲಿ ರವಿಚಂದ್ರನ್ ನಟಿಸುತ್ತಿದ್ದು, ಮತ್ತೊಂದು ಸಿನಿಮಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಕರ್ವ ಸಿನಿಮಾ ಖ್ಯಾತಿಯ ನವನೀತ್ ನಿರ್ದೇಶನದ ಸಿನಿಮಾದಲ್ಲಿ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ. ಕ್ರೇಜಿ ಸ್ಟಾರ್ ಅವರ ಮತ್ತೊಂದು ಸಿನಿಮಾಗೆ ಎಂ.ಎಸ್ ರಮೇಶ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ,ಮತ್ತೊಂದು ಸಿನಿಮಾವನ್ನು ರವಿಚಂದ್ರನ್ ಅವರೇ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾಕ್ಕಾಗಿ ಚಿತ್ರಕಥೆ ಬರೆಯುತ್ತಿದ್ದಾರೆ.
ಸಿನಿಮಾದಲ್ಲಿ ಸ್ಟಾರ್ ಗಳು ಮಾಡು ಪಾತ್ರದಿಂದ ಚಿತ್ರದ ಮೌಲ್ಯ ಹೆಚ್ಚುವಂತೆ ಮಾಡುತ್ತದೆ. ಜನರಿಗೆ ಹೇಗೆ ಇಷ್ಟವಾಗುತ್ತದೋ ಆ ರೀತಿಯೇ ಸಿನಿಮಾ ನಿರ್ದೇಶನ ಮಾಡಬೇಕಾಗುತ್ತದೆ ಇದಕ್ಕಾಗಿ ನಿರ್ದೇಶನದ ಔಟ್ ಲುಕ್ ಕೂಡ ಬದಲಾಗಬೇಕು ಎಂದು ರವಿಚಂದ್ರನ್ ಅಭಿಪ್ರಾಯ ಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


