ವಿನಯ್ ರಾಜ್ ಕುಮಾರ್ ಮುಂದಿನ ಚಿತ್ರಕ್ಕೆ ಪವನ್ ಒಡೆಯರ್ ಸಿದ್ಧತೆ
ರಘು ಶಾಸ್ತ್ರಿ ನಿರ್ದೇಶನದಲ್ಲಿ ವಿನಯ್ ರಾಜ್ ಕುಮಾರ್ ರನ್ ಆ್ಯಂಟನಿ ಬಿಡುಗಡೆಯಾಗಿ ಸುಮಾರು ಆರು ತಿಂಗಳುಗಳೇ ಕಳೆದಿವೆ. ಕಮರ್ಷಿಯಲ್ ಹಿಟ್ ಚಿತ್ರದಲ್ಲಿ...

ಬೆಂಗಳೂರು: ರಘು ಶಾಸ್ತ್ರಿ ನಿರ್ದೇಶನದಲ್ಲಿ ವಿನಯ್ ರಾಜ್ ಕುಮಾರ್ ರನ್ ಆ್ಯಂಟನಿ ಬಿಡುಗಡೆಯಾಗಿ ಸುಮಾರು ಆರು ತಿಂಗಳುಗಳೇ ಕಳೆದಿವೆ. ಕಮರ್ಷಿಯಲ್ ಹಿಟ್ ಚಿತ್ರದಲ್ಲಿ ನಟಿಸಲು ಮನಸ್ಸು ಮಾಡಿರುವ ವಿನಯ್ ರಾಜ್ ಮುಂದಿನ ಮೂರನೇ ಚಿತ್ರಕ್ಕಾಗಿ ನಿರ್ದೇಶಕ ಪವನ್ ಒಡೆಯರ್ ಚಿತ್ರಕಥೆ ಬರೆಯುತ್ತಿದ್ದಾರೆ.
ಏಪ್ರಿಲ್ 24 ರಂದು ಡಾ. ರಾಜ್ ಕುಮಾರ್ ಅವರ ಹುಟ್ಟು ಹಬ್ಬವಿದ್ದು, ಅಂದಿನಿಂದಲೇ ಸಿನಿಮಾ ಶೂಟಿಂಗ್ ಆರಂಭಿಸಲು ಪವನ್ ಒಡೆಯರ್ ಚಿತ್ರಕಥೆ ಬರೆಯುತ್ತಿದ್ದಾರೆ ಎನ್ನಲಾಗಿದೆ.
ವಿನಯ್ ರಾಜ್ ಕುಮಾರ್ ಅವರ ಮುಂದಿನ ಕಮರ್ಷಿಯಲ್ ಚಿತ್ರಕ್ಕಾಗಿ ಪವನ್ ಒಡೆಯರ್ ಚಿತ್ರಕಥೆ ಬರೆಯುತ್ತಿದ್ದು, ವಿನಯ್ ತಂದೆ ರಾಘವೇಂದ್ರ ರಾಜ್ ಕುಮಾರ್ ಕೂಡ ಕಥೆಗೆ ಓಕೆ ಹೇಳಿದ್ದಾರೆ.
ಡಾ. ರಾಜ್ ಕುಮಾರ್ ಅವರ ಮೊಮ್ಮಗನಾಗಿರುವ ವಿನಯ್ ರಾಜ್ ಕುಮಾಪ್ ಪ್ರಕಾಶ್ ಜಯರಾಮ್ ನಿರ್ದೇಶನದ ಸಿದ್ದಾರ್ಥ ಮೊದಲ ಚಿತ್ರವಾಗಿತ್ತು, ಅದಾದ ನಂತರ ಮುಂಬಯಿಯ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದ ವಿನಯ್ ರನ್ ಆ್ಯಂಟನಿ ಚಿತ್ರದಲ್ಲಿ ನಟಿಸಿದ್ದರು.
ಗೋವಿಂದಾಯ ನಮ, ರಣ ವಿಕ್ರಮ, ಗೂಗ್ಲಿ ಸಿನಿಮಾ ನಿರ್ದೇಶಿಸಿರುವ ಪವನ್ ಒಡೆಯರ್ ವಿನಯ್ ಹೊಸ ಅವತಾರಕ್ಕಾಗಿ ಚಿತ್ರಕಥೆ ಬರೆಯಲು ಎಲ್ಲಾ ಸಮಯವನ್ನು ಕಳೆಯುತ್ತಿದ್ದಾರೆ. ಆದರೆ ಈ ಬಗ್ಗೆ ನಟನಾಗಲೀ ನಿರ್ದೇಶಕರಾಗಲೀ ಎಲ್ಲಿಯೂ ಅಧಿಕೃತವಾಗಿ ಇನ್ನೂ ಪ್ರಕಟಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


