'ಆರೆಂಜ್' ಮೂಲಕ ಹಿಂದಿರುಗಿದ ಗಣೇಶ್-ಪ್ರಶಾಂತ್ ರಾಜ್ ಜೋಡಿ
ಮತ್ತೊಂದು ಸಿನೆಮಾ 'ಆರೆಂಜ್'ಗೆ ನಟ-ನಿರ್ದೇಶಕ ಹಿಟ್ ಜೋಡಿ ಗಣೇಶ್ ಮತ್ತು ಪ್ರಶಾಂತ್ ರಾಜ್ ಹಿಂದಿರುಗಿದ್ದಾರೆ.

Published On :
ಬೆಂಗಳೂರು: ಮತ್ತೊಂದು ಸಿನೆಮಾ 'ಆರೆಂಜ್'ಗೆ ನಟ-ನಿರ್ದೇಶಕ ಹಿಟ್ ಜೋಡಿ ಗಣೇಶ್ ಮತ್ತು ಪ್ರಶಾಂತ್ ರಾಜ್ ಹಿಂದಿರುಗಿದ್ದಾರೆ.
೨೦೧೬ ರಲ್ಲಿ ಬಿಡುಗಡೆಯಾಗಿದ್ದ ಈ ಜೋಡಿಯ ಹಿಂದಿನ ಚಿತ್ರ 'ಜೂಮ್' ಶತ ದಿನ ಪೂರೈಸಿ ಯಶಸ್ವಿ ಚಿತ್ರ ಎನಿಸಿಕೊಂಡಿತ್ತು. ಈಗ ಶಿರಡಿಯಲ್ಲಿ ಶ್ರೀ ಸಾಯಿಬಾಬಾ ಆಶೀರ್ವಾದದೊಂದಿಗೆ ಹೊಸ ಸಿನೆಮಾಗೆ ಮುಹೂರ್ತವನ್ನು ಸದ್ದಿಲ್ಲದೇ ನೆರವೇರಿಸಿದ್ದಾರೆ.
ಗಣೇಶ್ ಪತ್ನಿ ಶಿಲ್ಪಾ, ನಟ ಮತ್ತು ನಿರ್ದೇಶಕರ ಕೆಲವು ಗೆಳೆಯರಷ್ಟೇ ಮುಹೂರ್ತದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.
"ಗಣೇಶ್ ಅವರ ಹುಟ್ಟುಹಬ್ಬವಾದ ಜುಲೈ ೨ ರಿಂದ ಈ ಸಿನೆಮಾ ಪ್ರಾರಂಭಿಸಲು ಯೋಜಿಸಿಕೊಂಡಿದ್ದೇನೆ" ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್.
ಬಣ್ಣವೊಂದರ ಹೆಸರಿನ ಶೀರ್ಷಿಕೆಯ ಈ ಚಿತ್ರದ ಬಗ್ಗೆ ಕುತೂಹಲ ಮೂಡಿದ್ದು, ಪ್ರೀತಿಯ ಹೊಸ ಬಣ್ಣ ಕಿತ್ತಳೆ ಆಗಲಿದೆ ಎನ್ನುತ್ತಾರೆ ನಿರ್ದೇಶಕ. "ಇಂದಿನ ದಿನಗಳ ರೋಮ್ಯಾನ್ಸ್ ಬಗ್ಗೆ ನನ್ನ ಚಿತ್ರ" ಎನ್ನುತ್ತಾರೆ.
ಪ್ರಶಾಂತ್ ಅವರೇ ಈ ಸಿನೆಮಾ ನಿರ್ಮಿಸಲಿದ್ದು, 'ಜೂಮ್' ನಲ್ಲಿ ದುಡಿದ ತಂತ್ರಜ್ಞರನ್ನು ಈ ಯೋಜನೆಗೂ ತೊಡಗಿಸಿಕೊಳ್ಳಲಿದ್ದಾರಂತೆ. "ಪ್ರೇಮ್ ನಟನೆಯ 'ದಳಪತಿ' ಬಿಡುಗಡೆ ಕೆಲಸದಿಂದ ಸ್ವಲ್ಪ ಬಿಡುವು ಪಡೆದು 'ಆರೆಂಜ್' ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದೆ. ಶೀಘ್ರದಲ್ಲೇ ತಾರಾಗಣವನ್ನು ಅಂತಿಮಗೊಳಿಸಲಿದ್ದೇವೆ" ಎನ್ನುತ್ತಾರೆ ಪ್ರಶಾಂತ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


