59ನೇ ಗ್ರಾಮಿ ಪ್ರಶಸ್ತಿ: ಅಡೆಲೆಗೆ ವರ್ಷದ ಗಾಯಕಿ ಸೇರಿದಂತೆ 5 ಪ್ರಶಸ್ತಿ
ಖ್ಯಾತ ಪಾಪ್ ಗಾಯಕಿ ಅಡೆಲೆಯವರ 25, ಅಡೆಲೆ ವರ್ಷದ ಆಲ್ಬಂ ಗ್ರಾಮಿ ಪ್ರಶಸ್ತಿಯನ್ನು...

Published On :
ಲಾಸ್ ಏಂಜಲೀಸ್: ಖ್ಯಾತ ಪಾಪ್ ಗಾಯಕಿ ಅಡೆಲೆಯವರ 25, ಅಡೆಲೆ ವರ್ಷದ ಆಲ್ಬಂ ಗ್ರಾಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಒಟ್ಟು 5 ವಿಭಾಗಗಳಲ್ಲಿ ಅವರು ಪ್ರಶಸ್ತಿ ಬಾಚಿಕೊಂಡಿದ್ದಾರೆ.
25 ಅಡೆಲೆ ವರ್ಷದ ಹಾಡು, ಹಲೊ ರೆಕಾರ್ಡ್ ಆಫ್ ದ ಇಯರ್, ಪಾಪ್ ಸೊಲೊ ಪ್ರದರ್ಶನ ಮತ್ತು ಉತ್ತಮ ಪಾಪ್ ಧ್ವನಿ ಆಲ್ಬಮ್ ಸೇರಿದಂತೆ ಒಟ್ಟು 5 ಪ್ರಶಸ್ತಿಗಳನ್ನು ಅಡೆಲೆ ಈ ವರ್ಷ ಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಪಾಪ್ ಗಾಯಕಿ ಬೆಯೋನ್ಸ್ 9 ಪ್ರಶಸ್ತಿಗೆ ನಾಮಾಂಕಿತರಾಗಿದ್ದರು. ಅವರಿಗೆ ಉತ್ತಮ ಮ್ಯೂಸಿಕ್ ವಿಡಿಯೊ ರಚನೆ, ಲೆಮೊನಾಡೆಗೆ ಉತ್ತಮ ನಗರ ಸಮಕಾಲೀನ ಆಲ್ಬಮ್ ಗೆ ಪ್ರಶಸ್ತಿ ಬಂದಿದೆ.
59ನೇ ವಾರ್ಷಿಕ ಗ್ರಾಮಿ ಪ್ರಶಸ್ತಿ ಸಮಾರಂಭ ಕಳೆದ ರಾತ್ರಿ ಲಾಸ್ ಏಂಜಲೀಸ್ ನಲ್ಲಿ ನಡೆಯಿತು. ವರ್ಣರಂಜಿತ ಸಮಾರಂಭದಲ್ಲಿ ಜಾರ್ಜ್ ಮೈಕೆಲ್ ಗೌರವಾರ್ಥ ಅಡೆಲೆ ಹಲೊ ಮತ್ತು ಫಾಸ್ಟ್ ಲವ್ ಹಾಡನ್ನು ಹಾಡಿದರೆ, ಬೆಯೋನ್ಸ್ ಪ್ರದರ್ಶನ ನೀಡಿದರು. ಬ್ಲಾಕ್ ಬಸ್ಟರ್ ಗಾಗಿ ಡೇವಿಡ್ ಬೊವಿ 5 ಮರಣೋತ್ತರ ಪ್ರಶಸ್ತಿಗಳನ್ನು ಮತ್ತು ಚಾನ್ಸ್ ದ ರ್ಯಾಪರ್ ಗೆ ಮೂರು ಪ್ರಶಸ್ತಿಗಳು ಬಂದಿವೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಡೆಲೆ ಭಾವಪರವಶರಾದರು. ಬೆಯಾನ್ಸ್ ಕುರಿತು ಮಾತನಾಡಿದ ಅವರು, ನಾವೆಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ ಎಂದರು. ಪ್ರೇಕ್ಷಕರ ನಡುವೆ ಕುಳಿತಿದ್ದ ಬೆಯೋನ್ಸ್ ನಗೆ ಬೀರಿದರು.
ಹಲೊ ಹಾಡಿನ ಬರಹಗಾರ ಮತ್ತು ಆಲ್ಬಂ ನಿರ್ಮಾಪಕ ಗ್ರೆಗ್ ಕುಸ್ರ್ಟಿನ್ ಅವರನ್ನು ಅಡೆಲೆ ವೇದಿಕೆಗೆ ಬರಲು ಹೇಳಿದರು.
ಅವಳಿ ಮಕ್ಕಳಿಗೆ ಗರ್ಭವತಿಯಾಗಿರುವ ಬೆಯೋನ್ಸ್ ತಾಯ್ತನದ ಸಂದೇಶ ಸಾರುವ ಪ್ರದರ್ಶನ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


