ಗಮನ ಸೆಳೆದ ಹಾರರ್ ಸಿನೆಮಾ 'ಆವಾಹಯಾಮಿ' ಟ್ರೇಲರ್
ಕನ್ನಡ ಚಿತ್ರೋದ್ಯಮದಲ್ಲಿ ಇದು ಹಾರರ್ ಪರ್ವ. ಕಳೆದ ವರ್ಷ ಬಿಡುಗಡೆಯಾದ ನವನೀತ್ ನಿರ್ದೇಶನದ 'ಕರ್ವ' ಯಶಸ್ವಿ ಪ್ರದರ್ಶನ ಕಂಡಿತ್ತು. ಹಾಗೆಯೇ...
Published On :
ಬೆಂಗಳೂರು: ಕನ್ನಡ ಚಿತ್ರೋದ್ಯಮದಲ್ಲಿ ಇದು ಹಾರರ್ ಪರ್ವ. ಕಳೆದ ವರ್ಷ ಬಿಡುಗಡೆಯಾದ ನವನೀತ್ ನಿರ್ದೇಶನದ 'ಕರ್ವ' ಯಶಸ್ವಿ ಪ್ರದರ್ಶನ ಕಂಡಿತ್ತು. ಹಾಗೆಯೇ ನಿರ್ದೇಶಕ ಪವನ್ ಕುಮಾರ್ ಅವರ 'ಯು-ಟರ್ನ್', ಲೋಹಿತ್ ನಿರ್ದೇಶನದ 'ಮಮ್ಮಿ ಸೇವ್ ಮಿ' ಚಿತ್ರಗಳು ಕೂಡ ಉತ್ತಮ ಪ್ರದರ್ಶನ ಕಂಡಿದ್ದವು.
ಈಗ ಗಿರೀಶ್ ಕುಮಾರ್ ಬಿ ಬರೆದು ನಿರ್ದೇಶಿಸಿರುವ 'ಆವಾಹಯಾಮಿ' ಸಿನೆಮಾದ ಶೀರ್ಷಿಕೆ ಮತ್ತು ಟ್ರೇಲರ್ ಗಮನ ಸೆಳೆದಿವೆ. ಟ್ರೇಲರ್ ನಿಂದಲೇ ಈ ಹಾರರ್ ಚಿತ್ರ ಪ್ರೇಕ್ಷಕರನ್ನು ಬೆಚ್ಚಿಬೀಳಿಸಲು ಸನ್ನದ್ಧವಾಗಿರುವುದು ಗೋಚರವಾಗುತ್ತದೆ.
'ಆವಾಹಯಾಮಿ'ಗೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದು, ಕಿರಣ್ ಕೆ ನಾಯರ್ ಅವರ ಸಿನೆಮ್ಯಾಟೋಗ್ರಫಿ ಇದೆ.
ಸಂಪೂರ್ಣ ಹೊಸ ತಂಡ ಕಟ್ಟಿಕೊಂಡು ಮಾಡಿರುವ ಈ ಸಿನೆಮಾದಲ್ಲಿ ವಿಜಯ್ ರಾಜ್, ಮೌನ ಶ್ರೀ, ಗಿರೀಶ್ ಕುಮಾರ್, ಅಕ್ಷತಾ ಮುಂತಾದವರು ನಟಿಸಿದ್ದಾರೆ.
ಆರ್ ಗೌಡ ಪ್ರೊಡಕ್ಷನ್ಸ್, ವುಡ್ಕೀಪರ್ಸ್ ಅಂಡ್ ಫ್ರೆಂಡ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರ ಶೀಘ್ರದಲ್ಲೇ ಬಿಡುಗಡೆ ಕಾಣಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

