ಸಿನಿಮಾ ಸುದ್ದಿ

ಎಲ್ಲಾ ಟ್ರೆಂಡ್ ಗಳನ್ನು ಬ್ರೇಕ್ ಮಾಡಲಿದೆ ವಿಲನ್ ಚಿತ್ರದಲ್ಲಿನ ಸುದೀಪ್ ಫಂಕಿ ಹೇರ್ ಸ್ಟೈಲ್?

ಹೆಬ್ಬುಲಿ ಚಿತ್ರದಲ್ಲಿ ತಮ್ಮ ವಿಶಿಷ್ಟ ಹೇರ್ ಸ್ಟೈಲ್ ಮೂಲಕ ಯುವ ಜನರಲ್ಲಿ ಭಾರೀ ಹವಾ ಸೃಷ್ಟಿಸಿರುವ ಸುದೀಪ್ ಈಗ ಮತ್ತೊಂದು ಹೊಸ ಟ್ರೆಂಡ್ ,...

ಎಲ್ಲಾ ಟ್ರೆಂಡ್ ಗಳನ್ನು ಬ್ರೇಕ್ ಮಾಡಲಿದೆ ವಿಲನ್ ಚಿತ್ರದಲ್ಲಿನ ಸುದೀಪ್ ಫಂಕಿ ಹೇರ್ ಸ್ಟೈಲ್?
ಸುದೀಪ್
Published On :

ಬೆಂಗಳೂರು: ಹೆಬ್ಬುಲಿ ಚಿತ್ರದಲ್ಲಿ ತಮ್ಮ ವಿಶಿಷ್ಟ ಹೇರ್ ಸ್ಟೈಲ್ ಮೂಲಕ ಯುವ ಜನರಲ್ಲಿ  ಭಾರೀ ಹವಾ ಸೃಷ್ಟಿಸಿರುವ ಸುದೀಪ್ ಈಗ ಮತ್ತೊಂದು ಹೊಸ ಟ್ರೆಂಡ್ ಗೆ ನಾಂದಿ ಹಾಡಲಿದ್ದಾರೆ.

ಪ್ರೇಮ್ ನಿರ್ದೇಶವನದ ವಿಲ್ಲನ್ ಚಿತ್ರದಲ್ಲಿ  ಸುದೀಪ್ ಅವರಿಗೆ ಹೊಸ ರೀತಿಯ ಕೇಶ ವಿನ್ಯಾಸ ಮಾಡಲಾಗಿದೆ.  ವಿಲ್ಲನ್ ಚಿತ್ರದ ಫೋಟೋ ಶೂಟ್ ವೇಳೆ ನಿರ್ದೇಶಕ ಪ್ರೇಮ್ ಸುದೀಪ್ ಹೇರ್ ಸ್ಟೈಲ್ ಬಗ್ಗೆ ಹಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

ಹೊಸ ಕೇಶ ವಿನ್ಯಾಸದಲ್ಲಿ ಸುದೀಪ್ ಸಣ್ಣ ವಯಸ್ಸಿನ ಯುಕವನಂತೆ ಕಾಣಲಿದ್ದಾರೆ, ಹೇರ್ ಸ್ಟೈಲ್ ಗಾಗಿ ಹೈದರಾಬಾದ್ ನಿಂದ ಅಲೆಕ್ಸ್ ಎಂಬ ಹೇರ್ ಡ್ರೆಸ್ಸರ್ ಕರೆಸಲಾಗಿದೆ, ಹೊಸ ಸ್ಟೈಲ್ ಗಾಗಿ ಐದು ಗಂಟೆ ಸಮಯ ತೆಗೆದುಕೊಳ್ಳಲಾಗಿದೆ, ಸುದೀಪ್ ಅವರ ಫಂಕಿ ಹೇರ್ ಸ್ಟೈಲ್ ಹೊಸ ಟ್ರೆಂಡ್ ಸಷ್ಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರೇಮ್ ಹೇಳಿದ್ದಾರೆ.

ಪ್ರೋಮೋ ಶೂಟ್ ಮಾಡಿರುವ ನಿರ್ದೇಶಕ ಪ್ರೇಮ್  ಸುದೀಪ್ ಜೊತೆ ರಾಕ್ ಲೈನ್ ಸ್ಟುಡಿಯೋದಲ್ಲಿ ಫೇಸ್ ಬುಕ್ ಲೈವ್ ಮಾಡಲಿದ್ದಾರೆ. ಈ ಹಿಂದೆ ಪ್ರೇಮ್ ಶಿವರಾಜ್ ಕುಮಾರ್ ಅವರ ಜೊತೆ ಫೇಸ್ ಬುಕ್ ಲೈವ್ ನಲ್ಲಿ ಭಾಗಿಯಾಗಿದ್ದರು. ಮುಂದಿನ ದಿನಗಳಲ್ಲಿ ಇಬ್ಬರು ನಟರುಗಳ ಜೊತೆ ಪ್ರೇಮ್  ಪೋಸ್ಚರ್ ಬಿಡುಗಡೆ ಮಾಡಲಿದ್ದಾರೆ,

ವಿಲ್ಲನ್ ಸಿನಿಮಾವನ್ನು ಸಿ,ಆರ್ ಮನೋಹರ್ ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ಆಮಿ ಜಾಕ್ಸನ್ ನಟನೆ ಬಗ್ಗೆ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ, ಶೃತಿ ಹರಿಹರನ್ ಆಯ್ರಕೆ ಅಂತಿಮವಾಗಿದ್ದು, ಶಿವರಾಜ್ ಕುಮಾರ್ ಗೆ ಯಾರೂ ನಾಯಕಿ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.