ಸಿನಿಮಾ ಸುದ್ದಿ

ರಾಜಮೌಳಿ 'ಮಹಾಭಾರತ'ದಲ್ಲಿ ಅಮೀರ್ ಖಾನ್, ಮೋಹನ್ ಲಾಲ್, ರಜನೀಕಾಂತ್?

ಬ್ಲಾಕ್ ಬಸ್ಟರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಭಾರಿ ಬಜೆಟ್ ಚಿತ್ರ 'ಮಹಾಭಾರತ' ದಲ್ಲಿ ಬಾಲಿವುಡ್ ಸ್ಟಾರ್ ಗಳಲ್ಲದೇ ದಕ್ಷಿಣ ಭಾರತದ ಪ್ರಮುಖ ಹೀರೋಗಳು ...

ರಾಜಮೌಳಿ 'ಮಹಾಭಾರತ'ದಲ್ಲಿ ಅಮೀರ್ ಖಾನ್, ಮೋಹನ್ ಲಾಲ್, ರಜನೀಕಾಂತ್?
ಅಮೀರ್ ಖಾನ್, ರಜನೀಕಾಂತ್, ಮೋಹನ್ ಲಾಲ್,
Published On :

ಮುಂಬಯಿ: ಬ್ಲಾಕ್ ಬಸ್ಟರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ ಭಾರಿ ಬಜೆಟ್ ಚಿತ್ರ 'ಮಹಾಭಾರತ' ದಲ್ಲಿ ಬಾಲಿವುಡ್ ಸ್ಟಾರ್ ಗಳಲ್ಲದೇ ದಕ್ಷಿಣ ಭಾರತದ ಪ್ರಮುಖ ಹೀರೋಗಳು ಕೂಡ ನಟಿಸಲಿದ್ದಾರೆ ಎಂದು ಹೇಳಲಾಗಿದೆ.

ವರದಿಯೊಂದರ ಪ್ರಕಾರ 400 ಕೋಟಿ ರು. ಬಜೆಟ್ ಸಿನಿಮಾ ಇದಾಗಿದ್ದು, ಅಮೀರ್ ಖಾನ್ ಜೊತೆಗೆ ರಜನೀಕಾಂತ್ ಮತ್ತು ಮೋಹನ್ ಲಾಲ್ ಕೂಡ ಅಭಿನಯಿಸಲಿದ್ದಾರೆ ಎನ್ನಲಾಗಿದೆ.

ಪೌರಾಣಿಕ ಕಥೆಯ ಹಿನ್ನೆಲೆ ಹೊಂದಿರುವ ಮಹಾಭಾರತ ಸಿನಿಮಾದಲ್ಲಿ ಸಂಪ್ರದಾಯಬದ್ದ ಪಾತ್ರಗಳಿದ್ದು, ಯಾವ ನಟ, ಯಾವ ಪಾತ್ರ ನಿರ್ವಹಿಸಲಿದ್ದಾರೆ ಎಂಬುದನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಎಸ್. ಎಸ್ ರಾಜಮೌಳಿ ಅವರ ಬಹುದೊಡ್ಡ ಅಭಿಮಾನಿಯಾಗಿರುವ ಅಮೀರ್ ಖಾನ್ ಈ ಸಿನಿಮಾದಲ್ಲಿ ಕೃಷ್ಣ ಇಲ್ಲವೇ ಕರ್ಣನ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಮಹಭಾರತ ಸಿನಿಮಾ ಬಗ್ಗೆ ರಾಜಮೌಳಿ ಇದುವರೆಗೂ ಎಲ್ಲಿಯೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ, ಸದ್ಯ ಬಾಹುಬಲಿ-2 ಸಿನಿಮಾದಲ್ಲಿ ರಾಜಮೌಳಿ ಬ್ಯುಸಿಯಾಗಿದ್ದಾರೆ. ನಿರ್ಮಾಪಕರು ಸಿನಿಮಾ ಬಗ್ಗೆ ಅಧಿಕೃತವಾಗಿ ಪ್ರಕಟಿಸುವವರೆಗೂ ಕಾಯಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.