ಮಾನ್ಯ ಪ್ರಧಾನ ಮಂತ್ರಿಗಳೇ, ನಿಮಗೆ ನಿಜಕ್ಕೂ ಸಂತೋಷವಾಗಿದೆಯೇ: ಟ್ವಿಟ್ಟರ್ ನಲ್ಲಿ ಪ್ರಕಾಶ್ ರೈ ಪ್ರಶ್ನೆ
"ಮಾನ್ಯ ಪ್ರಧಾನ ಮಂತ್ರಿಗಳೇ, ಗೆಲುವಿಗೆ ಧನ್ಯವಾದಗಳು. ಆದರೆ ನೀವು ನಿಜವಾಗಿಯೂ ಸಂತೋಷದಿಂದಿದ್ದೀರಾ?" ಹೀಗೆಂದು ದಕ್ಷಿಣ ಭಾರತ ಖ್ಯಾತ ನಟ ಪ್ರಕಾಶ್ ರೈ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

Published On :
ಬೆಂಗಳೂರು: "ಮಾನ್ಯ ಪ್ರಧಾನ ಮಂತ್ರಿಗಳೇ, ಗೆಲುವಿಗೆ ಧನ್ಯವಾದಗಳು. ಆದರೆ ನೀವು ನಿಜವಾಗಿಯೂ ಸಂತೋಷದಿಂದಿದ್ದೀರಾ?" ಹೀಗೆಂದು ದಕ್ಷಿಣ ಭಾರತ ಖ್ಯಾತ ನಟ ಪ್ರಕಾಶ್ ರೈ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
ಇಂದು ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬಿದ್ದಿದ್ದುೆರಡೂ ರಾಜ್ಯಗಳಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಈ ಸಂದರ್ಭದಲ್ಲಿ ನಟ ಪ್ರಕಾಶ್ ರೈ ಪ್ರಧಾನಿ ಮೋದಿಗೆ ಪ್ರಶ್ನೆ ಹಾಕಿದ್ದಾರೆ.
ಮಾನ್ಯ ಪ್ರಧಾನ ಮಂತ್ರಿಗಳೇ ಎಂದು ಪತ್ರದ ಶೈಲಿಯಲ್ಲಿ ಪ್ರಾರಂಭವಾಗುವ ಟ್ವೀಟ್ ನಲ್ಲಿ ಪ್ರಕಾಶ್ ರೈ, ಪ್ರಧಾನಿಗೆ ಅಭಿನಂದನೆ ತಿಳಿಸುತ್ತಾರೆ. "ನಿಮ್ಮ ಅಭಿವೃದ್ದಿ ಕಾರ್ಯತಂತ್ರದಿಂದಾಗಿ ನೀವು ಭಾರೀ ಬಹುಮತಗಳಿಂದ ಗೆಲ್ಲಬೇಕಾಗಿತ್ತು. 150 ಕ್ಷೇತ್ರಗಳಲ್ಲಿ ಗೆಲ್ಲುವ ನಿಮ್ಮ ಗುರಿ ಏನಾಯಿತು? ನಿಮ್ಮ ತಂತ್ರ ಫಲಿಸಲಿಲ್ಲ. ಧರ್ಮ, ಜಾತಿ, ಪಾಕಿಸ್ತಾನ, ವೈಯುಕ್ತಿಕ ಲಾಭಗಳಿಕೆ ಈ ಎಲ್ಲಕ್ಕಿಂತ ದೊಡ್ಡ ಸಮಸ್ಯೆಗಳು ನಮ್ಮ ನಡುವೆ ಇದೆ. ಗ್ರಾಮೀಣ ಪ್ರದೇಶದ ರೈತರ ದನಿಯನ್ನು ದಮನ ಮಾಡಲಾಗಿದೆ, ಅಥವಾ ನಿರ್ಲಕ್ಷಿಸಲಾಗಿದೆ. ಆದರೆ ಇದೀಗ ಗ್ರಾಮ ಭಾರತದ ಸಮಸ್ಯೆಗಳ ದನಿ ಏರಿದೆ. ಆ ದನಿ ನಿಮಗೆ ಕೇಳುತ್ತಿದೆಯೆ?" ಪ್ರಕಾಶ್ ರೈ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
TwitterPM Modiಪ್ರಧಾನಿ ಮೋದಿಟ್ವಿಟ್ಟರ್Prakash rajಪ್ರಕಾಶ್ ರೈಗುಜರಾತ್ ಚುನಾವಣಾ ಫಲಿತಾಂಶPoll resulsGujarat Election Result
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


