ಇಂಟರೆಸ್ಟಿಂಗ್ ಆಗಿದೆ 'ಲೈಫ್ ಜೊತೆ ಒಂದ್ ಸೆಲ್ಫಿ' ಮೊದಲ ಪೋಸ್ಟರ್
ದಿನಕರ ತೂಗುದೀಪ ಅವರ ಮುಂದಿನ ಲೈಫ್ ಜೊತೆ ಒಂದು ಸೆಲ್ಫಿ ಸಿನಿಮಾ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು. ಸಖತ್ ಕುತೂಹಲ ...

Published On :
ಬೆಂಗಳೂರು: ದಿನಕರ ತೂಗುದೀಪ ಅವರ ಮುಂದಿನ ಲೈಫ್ ಜೊತೆ ಒಂದು ಸೆಲ್ಫಿ ಸಿನಿಮಾ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು. ಸಖತ್ ಕುತೂಹಲ ಕೆರಳಿಸಿದೆ.
ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಿನಕರ್ ಪತ್ನಿ ಮಾನಸ ಚಿತ್ರಕಥೆ ಬರೆದಿದ್ದಾರೆ. ಮೂರು ಮಂದಿ ಸ್ನೇಹಿತರ ಕಥೆ ಇದಾಗಿದೆ.
ಶಚಿನಾ ಹೆಗ್ಗಾರ್ ಮತ್ತು ರೇಷ್ಮಿ, ನಿರಂಜನ ಬಾಬು, ವಿನ್ಯಾಸಕರಾಗಿದ್ದಾರೆ. ಸಿನಿಮಾದಲ್ಲಿ ಪ್ರಜ್ವಲ್ ಕೋಟ್ಯಾದಿಪತಿ, ಪ್ರೇಮ್ ಸಾಫ್ಟ್ ವೇರ್ ಎಂಜಿನೀಯರ್, ಹರಿಪ್ರಿಯಾ ಕೆಲಸ ಹುಡುಕುವ ಯುವತಿ ಪಾತ್ರದಲ್ಲಿ ನಟಿಸಲಿದ್ದಾರೆ.
ಸಿನಿಮಾ ಒಂದು ಫ್ಲಾಶ್ ಬ್ಯಾಕ್ ಸುತ್ತ ಸುತ್ತುತ್ತದೆ, ಬದುಕಿನ ಸಂತೋಷದ ಕ್ಷಣಗಳನ್ನು ಇಂದು ನಾವು ಸೆಲ್ಫೀ ಮೂಲಕ ಸೆರೆ ಹಿಡಿಯುತ್ತೇವೆ, ಆ ಜೀವನ ಪ್ರಯಾಣವೇ ಲೈಫ್ ಜೊತೆ ಒಂದ್ ಸೆಲ್ಫೀ ಕತೆಯಾಗಿದೆ ಎಂದು ದಿನಕರ್ ವಿವರಿಸಿದ್ದಾರೆ.
ಗೋವಾದಲ್ಲಿ ಮೊದಲ ಶೂಟಿಂಗ್ ಮಾಡಲು ಚಿತ್ರತಂಡ ನಿರ್ದರಿಸಿದೆ. ಪ್ರಜ್ವಲ್ ದೇವರಾಜ್ ತಾಯಿ ಪಾತ್ರದಲ್ಲಿ ಸುಧಾರಾಣಿ ನಟಿಸಲಿದ್ದಾರೆ. ಸಾಧು ಕೋಕಿಲಾ ಕೂಡ ಅಭಿನಿಸುತ್ತಿದ್ದು, ಸಮೃದ್ಧಿ ಕ್ರಿಯೇಷನ್ ಸಿನಿಮಾ ನಿರ್ಮಿಸುತ್ತಿದೆ. ಹರಿಕೃಷ್ಣ ಸಂಗೀತ ನೀಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Kannada Cinemaಕನ್ನಡ ಸಿನಿಮಾದಿನಕರ್ ತೂಗುದೀಪDinakar ThoogudeepaLife Jothe Ondh Selfieಲೈಫ್ ಜೊತೆ ಒಂದ್ ಸೆಲ್ಫಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


