ಸಿನಿಮಾ ಸುದ್ದಿ

ಇನ್ಮುಂದೆ ತಮ್ಮದೇ ನಿರ್ಮಾಣದ ಚಿತ್ರಗಳಲ್ಲಿ ಮಾತ್ರ ಪುನೀತ್ ನಟನೆ!

ನಟನಾ ವೃತ್ತಿ ಆರಂಭಿಸಿದಾಗಿನಿಂದಲೂ ಯಶಸ್ಸನ್ನೇ ಕಾಣುತ್ತಿರುವ ನಟ ಪುನೀತ್ ರಾಜ್ ಕುಮಾರ್, ಮತ್ತೊಂದು ಎತ್ತರಕ್ಕೇರಲು ಸಿದ್ಧತೆ ನಡೆಸುತ್ತಿದ್ದಾರೆ....

ಇನ್ಮುಂದೆ ತಮ್ಮದೇ ನಿರ್ಮಾಣದ ಚಿತ್ರಗಳಲ್ಲಿ ಮಾತ್ರ  ಪುನೀತ್ ನಟನೆ!
ಪುನೀತ್ ರಾಜಕುಮಾರ್
Published On :
ಬೆಂಗಳೂರು: ನಟನಾ ವೃತ್ತಿ ಆರಂಭಿಸಿದಾಗಿನಿಂದಲೂ ಯಶಸ್ಸನ್ನೇ ಕಾಣುತ್ತಿರುವ ನಟ ಪುನೀತ್ ರಾಜ್ ಕುಮಾರ್, ಮತ್ತೊಂದು ಎತ್ತರಕ್ಕೇರಲು ಸಿದ್ಧತೆ ನಡೆಸುತ್ತಿದ್ದಾರೆ.
ಪಿಆರ್ ಕೆ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುವ ಸಿನಿಮಾಗಳಲ್ಲಿ ಮಾತ್ರ ನಟಿಸಲು ಪುನೀತ್ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.ಸದ್ಯ ತಾವು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ನಂತರ ಕೇವಲ ತಮ್ಮ ಬ್ಯಾನರ್ ನ ಸಿನಿಮಾಗಳಲ್ಲಿ ಮಾತ್ರ ಪುನೀತ್ ನಟಿಸಲಿದ್ದಾರೆ.
ಸದ್ಯಕ್ಕೆ ಎಂಎನ್ ಕುಮಾರ್ ನಿರ್ಮಾಣದಲ್ಲಿ ಹರ್ಷ ನಿರ್ದೇಶಿಸುತ್ತಿರುವ  ಅಂಜನೀಪುತ್ರದಲ್ಲಿ ಪುನೀತ್ ನಟಿಸುತ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ಮತ್ತು ಹೊಂಬಾಳೆ ಪ್ರೊಡಕ್ಷನ್ ಸಿನಿಮಾಗಳಿಗೂ ಪುನೀತ್ ಕಮಿಟ್ ಆಗಿದ್ದಾರೆ. ಇ ಸಿನಿಮಾಗಳು ಮುಗಿದ ನಂತರ ಬೇರೆ ಯಾವುದೇ ಬ್ಯಾನರ್ ಗಳಡಿ ಪುನೀತ್ ಅಭಿನಯಿಸುವುದಿಲ್ಲವಂತೆ.
ಪುನೀತ್ ತಾಯಿ ಪಾರ್ವತಮ್ಮ ರಾಜ್ ಕುಮಾರ್ ತಮ್ಮ ವಜ್ರೇಶ್ವರಿ ಮತ್ತು ಪೂರ್ಣಿಮಾ ಎಂಟರ್ ಪ್ರೈಸಸ್  ನಡಿ 80 ಯಶಸ್ವಿ ಸಿನಿಮಾ ನೀಡಿದ್ದಾರೆ. ಅವುಗಳಲ್ಲಿ ತ್ರಿಮೂರ್ತಿ, ಹಾಲು ಜೇನು, ಕವಿರತ್ನ ಕಾಳಿದಾಸ ಮತ್ತು ಜೀವನ ಚೈತ್ರ ಸಿನಿಮಾಗಳು ಸೇರಿವೆ.
ಪುನೀತ್ ತಮ್ಮ ಕಿರಿಯ ವಯಸ್ಸಿನಲ್ಲಿಯೇ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಆತ್ಮ ವಿಶ್ವಾಸದಲ್ಲಿದ್ದಾರೆ. ಮುಂದಿನ ದಿನಗಳಲ್ಲಿಯೂ ಪುನೀತ್ ಕೇವಲ ತಮ್ಮ ನಟನಾ ವೃತ್ತಿಯ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಲಿದ್ದು, ಪಿಆರ್ ಕೆ ಪ್ರೊಡಕ್ಷನ್ ಹೊಣೆಗಾರಿಕೆಯನ್ನು ಪತ್ನಿ ಅಶ್ವಿನಿ ಪುನೀತ್ ನೋಡಿಕೊಳ್ಳಲಿದ್ದಾರೆ.
ಈ ಪ್ರೊಡಕ್ಷನ್ ಹೌಸ್ ಈಗಾಗಲೇ ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದು, ಬೇರೆ ನಿರ್ದೇಶಕ ಹಾಗೂ ನಟರ ಸಿನಿಮಾಗಳನ್ನು ನಿರ್ಮಿಸುತ್ತಿದೆ.
ಪುನೀತ್ ಮುಂದಿನ ಪ್ರಾಜೆಕ್ಟ್ ತಮ್ಮ ಪಿಆರ್ ಕೆ ಬ್ಯಾನರ್ ನಲ್ಲೇ ನಡೆಯಲಿದ್ದು, ಶಶಾಂಕ್ ಸಿನಿಮಾ ನಿರ್ದೇಶಿಸಲಿದ್ದಾರೆ. ಹೇಮಂತ್ ರಾವ್ ಕವಲು ದಾರಿ ನಿರ್ದೇಶಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.