ನನ್ನ ಹಾರುವ ಕನಸಿಗೆ ರೆಕ್ಕೆ ಕೊಟ್ಟಿದ್ದು ಸ್ಯಾಂಡಲ್ ವುಡ್: ಸಂಯುಕ್ತಾ ಹೆಗಡೆ
ಕಿರಿಕ್ ಪಾರ್ಟಿ ನನ್ನ ಮೊದಲ ಸಿನಿಮಾ, ಹೀಗಾಗಿ ಅದೂ ನನ್ನ ಹೃದಯಕ್ಕೆ ಹತ್ತಿರವಾಗಿದೆ. ತೆಲುಗಿನ ರಿಮೇಕ್ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ....

Published On :
ಬೆಂಗಳೂರು: ನಿಖಿಲ್ ಸಿದ್ಧಾರ್ಥ ಅಭಿನಯಿಸಲಿರುವ 'ಕಿರಿಕ್ ಪಾರ್ಟಿ' ತೆಲುಗು ರಿಮೇಕ್ ಚಿತ್ರೀಕರಣಕ್ಕೆ ಸಿದ್ಧವಾಗಿದ್ದು, ಸಂಯುಕ್ತ ಹೆಗಡೆ ತೆಲುಗಿನಲ್ಲಿ ನಟಿಸುತ್ತಿದ್ದಾರೆ.
ಜೊತೆಗೆ ಪ್ರಭುದೇವ ಅವರ ತಮಿಳು ಸಿನಿಮಾದಲ್ಲಿಯೂ ಸಂಯುಕ್ತ ಹೆಗಡೆ ಸ್ಟೆಪ್ ಹಾಕಲಿದ್ದಾರೆ. ಜೊತೆಗೆ ತೆಲುಗಿನ ಆರ್ಯ ಸಿನಿಮಾದಲ್ಲಿಯೂ ನಟಿಸುತ್ತಿರುವ ಸಂಯುಕ್ತ ಕಲಾವಿದರಿಗೆ ಭಾಷೆ ಯಾವುದೇ ಕಾರಣಕ್ಕೂ ಅಡ್ಡಿ ಬರುವುದಿಲ್ಲ ಎಂದು ಹೇಳಿದ್ದಾರೆ.
ಕಿರಿಕ್ ಪಾರ್ಟಿ ನನ್ನ ಮೊದಲ ಸಿನಿಮಾ, ಹೀಗಾಗಿ ಅದೂ ನನ್ನ ಹೃದಯಕ್ಕೆ ಹತ್ತಿರವಾಗಿದೆ. ತೆಲುಗಿನ ರಿಮೇಕ್ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ. ಮತ್ತೆ ಸುಂದರ ನೆನಪುಗಳು ಇದರಿಂದ ಮರುಕಳಿಸುತ್ತವೆ ಎಂದು ಹೇಳಿರುವ ಸಂಯುಕ್ತ ಸೆಪ್ಟಂಬರ್ 10 ರಿಂದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.
ಪ್ರಭುದೇವ ಅವರ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಸಂಯುಕ್ತಾ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ನನಗೆ ಡ್ಯಾನ್ಸ್ ನಲ್ಲಿರುವ ಪ್ರತಿಭೆ ನೋಡಿ ಆ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಪ್ರಭುದೇವ ಜೊತೆ ನಟಿಸುತ್ತಿರುವುದು ನನ್ನ ಆದೃಷ್ಟ, ಇದೊಂದು ದೊಡ್ಡ ಡೀಲ್, ನನ್ನ ಕನಸು ನನಸಾಗುತ್ತಿದೆ, ನಾನು ಪ್ರಭುದೇವ ಅವರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂಬುದಷ್ಟೇ ಮಾತ್ರ ಗೊತ್ತು, ಅಕ್ಟೊಬರ್ 10 ರಿಂದ ಶೂಟಿಂಗ್ ನಲ್ಲಿ ಭಾಗವಹಿಸುವುದಾಗಿ ಸಂಯುಕ್ತಾ ಹೇಳಿದ್ದಾರೆ.
ತಮಗೆ ಸಿಕ್ಕಿರುವ ಎಲ್ಲಾ ಅವಕಾಶಗಳ ಕ್ರೆಡಿಟ್ ಸ್ಯಾಂಡಲ್ ವುಡ್ ಗೆ ಸಲ್ಲಬೇಕೆಂದು ಅವರು ಹೇಳಿದ್ದಾರೆ. ಕನ್ನಡದಲ್ಲಿ ನಿಜವಾಗಿಯೂ ಒಳ್ಳೊಳ್ಳೆ ಸಿನಿಮಾಗಳು ಬರುತ್ತಿವೆ, ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬ ಕಲಾವಿದರ ಮೇಲಿರುತ್ತದೆ. ತನಗೆ ಸಿನಿಮಾಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಿದ ಕನ್ನಡ ಇಂಡಸ್ಟ್ರಿಗೆ ಧನ್ಯವಾದ ಹೇಳಿದ್ದಾರೆ.
ಕನ್ನಡ ಸಿನಿಮಾ ಇಂಡಸ್ಟ್ರಿಯ ಉತ್ತಮ ಗುಣಮಟ್ಟದಿಂದಾಗಿ ನಮಗೆ ಹೊರಗಡೆಯೂ ಉತ್ತಮ ಅವಕಾಶಗಳು ಸಿಗುತ್ತಿವೆ ಎಂದು ಸಂಯುಕ್ತಾ ಹೇಳಿದ್ದಾರೆ, ಸಂಯುಕ್ತಾ ಹೆಗಡೆ ಅಭಿನಯಿಸಿರುವ ಎರಡನೇ ಕನ್ನಡ ಸಿನಿಮಾ ಕಾಲೇಜ್ ಕುಮಾರ್ ಬಿಡುಗಡೆಗೆ ಸಿದ್ಧವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


