ಸಿನಿಮಾ ಸುದ್ದಿ

ಮದುವೆ ನಂತರ ಬ್ರೇಕ್ ತೆಗೆದುಕೊಳ್ಳುವುದಿಲ್ಲ: ಪ್ರಿಯಾಮಣಿ

ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಪ್ರಿಯಾಮಣಿ ನಾಡಿದ್ದು ಬುಧವಾರ...

ಮದುವೆ ನಂತರ ಬ್ರೇಕ್ ತೆಗೆದುಕೊಳ್ಳುವುದಿಲ್ಲ: ಪ್ರಿಯಾಮಣಿ
ನಟಿ ಪ್ರಿಯಾಮಣಿ(ಸಂಗ್ರಹ ಚಿತ್ರ)
Published On :
ಚೆನ್ನೈ: ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಪ್ರಿಯಾಮಣಿ ನಾಡಿದ್ದು ಬುಧವಾರ ತಮ್ಮ ಸ್ನೇಹಿತ ಮುಸ್ತಾಫ ರಾಜ್ ಜೊತೆ ಮದುವೆಯಾಗುತ್ತಿದ್ದು, ಮದುವೆ ನಂತರ ನಟನೆಗೆ ವಿರಾಮ ತೆಗೆದುಕೊಳ್ಳುತ್ತಿಲ್ಲವಂತೆ. ಮದುವೆಯಾದ ಎರಡೇ ದಿನಕ್ಕೆ ಶೂಟಿಂಗ್ ಗೆ ಹಾಜರಾಗುತ್ತೇನೆ ಎನ್ನುತ್ತಾರೆ ನಟಿ.
ಪ್ರಿಯಾ ಮತ್ತು ಮುಸ್ತಫಾ ಬೆಂಗಳೂರಿನಲ್ಲಿ ರಿಜಿಸ್ಟರ್ ಮದುವೆಯಾಗಲಿದ್ದು, ನಂತರ ರಿಸೆಪ್ಷನ್ ಇಟ್ಟುಕೊಳ್ಳಲಿದ್ದಾರೆ. 
ನಾವು ಬೇರೆ ಬೇರೆ ಧರ್ಮದವರಾಗಿರುವುದರಿಂದ ರಿಜಿಸ್ಟರ್ ಮದುವೆಯನ್ನು ಆಯ್ಕೆ ಮಾಡಿಕೊಂಡೆವು. ಸಾಂಪ್ರದಾಯಿಕ ವಿಧಾನಕ್ಕಿಂತ ರಿಜಿಸ್ಟರ್ ಮದುವೆ ತುಂಬಾ ಸರಳವಾಗಿರುತ್ತದೆ. ಎರಡೂ ಕಡೆಯ ಒಪ್ಪಿಗೆ ಮೂಲಕವೇ ಈ ರೀತಿ ಮದುವೆಯಾಗುತ್ತಿದ್ದೇವೆ ಎಂದು ಪ್ರಿಯಾಮಣಿ ಐಎಎನ್ಎಸ್ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮದುವೆ ನಂತರವೂ ಚಿತ್ರಗಳಲ್ಲಿ ಅಭಿನಯಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಈಗಾಗಲೇ ಎರಡು ಚಿತ್ರಗಳ ಶೂಟಿಂಗ್ ನಡೆಯುತ್ತಿದೆ. ಹೀಗಾಗಿ ಮದುವೆ ನಂತರ ಎರಡೇ ದಿನದಲ್ಲಿ ಪುನಃ ಕೆಲಸಕ್ಕೆ ಹಿಂತಿರುಗುವುದಾಗಿ ಹೇಳಿದ್ದಾರೆ.
ಇನ್ನು ಮದುವೆ ರಿಸೆಪ್ಷನ್ ಗೆ ಕೂಡ ಆಪ್ತರಿಗೆ ಮಾತ್ರ ಆಹ್ವಾನವಿರುತ್ತದೆ ಎಂದು ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.