ಸಿನಿಮಾ ಸುದ್ದಿ

ಕಾರು ಅಪಘಾತ: ಸ್ಥಳದಲ್ಲೇ ಇಬ್ಬರು ಕಿರುತೆರೆ ಕಲಾವಿದರ ದಾರುಣ ಸಾವು

ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ ಮಹಾಕಾಳಿಯ ಕಲಾವಿದರಾದ ಗಗನ್ ಕಾಂಗ್ ಮತ್ತು ಅರ್ಜಿತ್ ಲವಾಣಿಯ ಕಾರು ...

ಕಾರು ಅಪಘಾತ: ಸ್ಥಳದಲ್ಲೇ ಇಬ್ಬರು ಕಿರುತೆರೆ ಕಲಾವಿದರ ದಾರುಣ ಸಾವು
ಗಗನ್ ಕಾಂಜ್ ಮತ್ತು ಅರ್ಜಿತ್ ಲವಾಣಿಯಾ
Published On :
ಮುಂಬಯಿ: ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ ಮಹಾಕಾಳಿಯ ಕಲಾವಿದರಾದ ಗಗನ್ ಕಾಂಗ್ ಮತ್ತು ಅರ್ಜಿತ್ ಲವಾಣಿಯ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಶನಿವಾರ ರಾತ್ರಿ ಶೂಟಿಂಗ್ ಮುಗಿಸಿ ಮನೆಗೆ ವಾಪಸಾಗುವ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ಅಂಬರ್ ಗಾನ್ ನಿಂದ ಮುಂಬೈಗೆ  ಹೊರಟ್ಟಿದ್ದ ಕಾರು ಕಂಟೈನರ್ ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಕಲಾವಿದರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, 
ಗಗನ್ ಮತ್ತು ಅರ್ಜಿತ್ ಉತ್ತಮ ಗೆಳೆಯರಾಗಿದ್ದು, ಹನುಮಾನ್ ಧಾರಾವಾಹಿಯಲ್ಲಿ ಗಗನ್ ಹನುಮಂತನ ತಂದೆ ಕೇಸರಿ ಪಾತ್ರದಲ್ಲಿ ನಟಿಸಿದ್ದರು, ಮಹಾಕಾಳಿ ಧಾರಾವಾಹಿಯಲ್ಲಿ ಗಗನ್ ದೇವೇಂದ್ರ ಹಾಗೂ ಅರ್ಜಿತ್ ನಂದಿ ಪಾತ್ರದಲ್ಲಿ ನಟಿಸುತ್ತಿದ್ದರು. 
ಕಳೆದ ಎರಡು ವಾರಗಳ ಹಿಂದಷ್ಟೇ ಧಾರಾವಾಹಿ ಆರಂಭವಾಗಿತ್ತು. ಇನ್ನೂ ಈ ಇಬ್ಬರು ಕಲಾವಿದರ ಸಾವಿನ ಬಗ್ಗೆ ಧಾರಾವಾಹಿ ತಂಡ ತೀವ್ರ ಆಘಾತ ವ್ಯಕ್ತ ಪಡಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.