ಸ್ಟಂಟ್ ವೇಳೆ ಬಲಗೈ ಮುರಿದಿದ್ದರೂ 'ರಾಜರಥ' ಶೂಟಿಂಗ್ ಮುಂದುವರಿಸಿದ ನಟ ನಿರೂಪ್ ಭಂಡಾರಿ!
ರಂಗಿತರಂಗ ನಟ ನಿರೂಪ್ ಭಂಡಾರಿ ರಾಜರಥ ಸಿನಿಮಾ ಚಿತ್ರೀಕರಣದ ವೇಳೆ ತಮ್ಮ ಬಲ ಗೈ ಮುರಿದುಕೊಂಡು ಗಾಯಗೊಂಡಿದ್ದಾರೆ. ಹೀಗಿದ್ದರೂ...

Published On :
ಬೆಂಗಳೂರು: ರಂಗಿತರಂಗ ನಟ ನಿರೂಪ್ ಭಂಡಾರಿ ರಾಜರಥ ಸಿನಿಮಾ ಚಿತ್ರೀಕರಣದ ವೇಳೆ ತಮ್ಮ ಬಲ ಗೈ ಮುರಿದುಕೊಂಡು ಗಾಯಗೊಂಡಿದ್ದಾರೆ. ಹೀಗಿದ್ದರೂ ಅವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ತಮ್ಮ ಸಹೋದರ್ ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ ರಾಜರಥ ಸಿನಿಮಾ ಸ್ಟಂಟ್ ಸನ್ನಿವೇಶದ ಚಿತ್ರೀಕರಣ ವೇಳೆ ಗಾಯಗೊಂಡಿದ್ದಾರೆ.
ಊಟಿಯಲ್ಲಿ ನಾಲ್ಕು ದಿನಗಳ ಚಿತ್ರೀಕರಣ ಮುಗಿದಿದ್ದು, ಚಿತ್ರ ತಂಡ ಸದ್ಯ ಮೈಸೂರಿನಲ್ಲಿ ಕ್ಯಾಂಪ್ ಹೂಡಿದ್ದು , ಅಂತಿಮ ಹಂತದ ಶೂಟಿಂಗ್ ನಡೆಯುತ್ತಿದೆ. ಮೊದಲೇ ನಿರ್ಧರಿಸಿದ ಶೆಡ್ಯೂಲ್ ನಂತೆ ಶೂಟಿಂಗ್ ನಡೆಯಬೇಕೆಂದು ನಿರ್ಧರಿಸಿರುವ ನಿರೂಪ್ ತಮಗೆ ಗಾಯವಾಗಿದ್ದರೂ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ನಿರೂಪ್ ಗೆ ಬಲಗೈ ಮುರಿದಿದೆ. ಸ್ಟಂಟ್ ವೇಳೆಕಲ್ಲು ಚಪ್ಪಡಿಯ ಮೇಲೆ ಸ್ಲಿಪ್ ಆಗಿ ನಿರೂಪ್ ಬಿದ್ದಿದ್ದಾರೆ. ಅದೃಷ್ಟವಶಾತ್ ನಿರೂಪ್ ಬ್ಯಾಕ್ ಪ್ಯಾಕ್ ಹಾಕಿದ್ದರು, ಇಲ್ಲದಿದ್ದರೇ ಆತನ ಪಕ್ಕೆಲುಹು ಮತ್ತು ತಲೆಗೆ ಗಾಯಗಳಾಗುತ್ತಿತ್ತು ಎಂದು ಸಹೋದರ ಅನೂಪ್ ಭಂಡಾರಿ ಹೇಳಿದ್ದಾರೆ. ಈ ಮೊದಲು ರಂಗಿತರಂಗ ಸಿನಿಮಾ ಶೂಟಿಂಗ್ ವೇಳೆಯಲ್ಲೂ ಸಹ ಇದೇ ರೀತಿಯ ಘಟನೆ ನಡೆದಿತ್ತು, ಎರಡು ವೇಳೆ ದುರಂತದಿಂದ ನಿರೂಪ್ ಬಚಾವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
2 ತಿಂಗಳು ವಿಶ್ರಾಂತಿ ಪಡೆಯುವಂತೆ ನಿರೂಪ್ ಗೆ ವೈದ್ಯರು ತಿಳಿಸಿದ್ದಾರೆ. ಆದರೆ ನಟನಾಗಿ ತಮ್ಮ ವೃತ್ತಿ ಧರ್ಮದ ಬಗ್ಗೆ ಅರಿವಿರುವ ನಿರೂಪ್ ಶೂಟಿಂಗ್ ಮುಂದುವರಿಸುವಂತೆ ಹೇಳಿದ್ದಾರೆ. ಈ ವೇಳೆ ನಿರೂಪ್ ಎರಡು ಸ್ಟಂಟ್ ಮಾಡಬೇಕಿತ್ತು, ಅದಕ್ಕಾಗಿ ಅವರು ಕಳೆದ ಎರಡು ತಿಂಗಳಿಂದ ಅಭ್ಯಾಸ ಮಾಡಿದ್ದರು. ಹೀಗಾಗಿ ಅದರಿಂದ ಹಿಂದೆ ಸರಿಯಲು ನಿರೂಪ್ ಗೆ ಇಷ್ಟವಿಲ್ಲ. ಅವರ ಆತ್ಮ ವಿಶ್ವಾಸ ನಮಗೆ ಶೂಟಿಂಗ್ ಮುಂದುವರಿಸಲು ಧೈರ್ಯ ನೀಡಿದೆ ಎಂದು ಅನೂಪ್ ತಿಳಿಸಿದ್ದಾರೆ.
ಆಗಸ್ಟ್ 24 ರೊಳಗೆ ಸಿನಿಮಾದ ಸಂಭಾಷಣೆಯ ದೃಶ್ಯ ಪೂರ್ಣಗೊಳ್ಳಲಿದೆ. ಆವಂತಿಕಾ ಶೆಟ್ಟಿ ರಾಜರಥ ಸಿನಿಮಾದಮಲ್ಲಿ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


