ಸಿನಿಮಾ ಸುದ್ದಿ

ಮಂಡ್ಯ ಆಡುಭಾಷೆ ಮೂಲಕ 'ಅಯೋಗ್ಯ'ನಾಗಿ ಸತೀಶ್ ನೀನಾಸಂ!

ಟೈಗರ್ ಗಲ್ಲಿ ಮತ್ತು ಚಂಬಲ್ ಸಿನಿಮಾಗಳ ನಂತರ ಸತೀಶ್ ನಿನಾಸಂ ಅಯೋಗ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ...

ಮಂಡ್ಯ ಆಡುಭಾಷೆ ಮೂಲಕ 'ಅಯೋಗ್ಯ'ನಾಗಿ ಸತೀಶ್ ನೀನಾಸಂ!
ಸತೀಶ್ ನೀನಾಸಂ
Published On :
ಟೈಗರ್ ಗಲ್ಲಿ ಮತ್ತು ಚಂಬಲ್ ಸಿನಿಮಾಗಳ ನಂತರ ಸತೀಶ್ ನಿನಾಸಂ ಅಯೋಗ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾಳೆ, ವರಲಕ್ಷ್ಮಿ ಹಬ್ಬದ ದಿನ ನಡೆಯಲಿರುವ ಸಿನಿಮಾ ಮುಹೂರ್ತದಲ್ಲಿ ಯೋಗರಾಜ್ ಭಟ್, ಸೂರಿ, ನಟ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ.
ದಶಕದವರೆಗೆ ನಿರ್ದೇಶಕ ಯೋಗರಾಜ್ ಭಟ್ ಅವರ ಜೊತೆ ಕೆಲಸ ಮಾಡಿದ್ದ ಮಹೇಶ್ ಕುಮಾರ್ ಇದೀಗ ಸ್ವತಂತ್ರ ನಿರ್ದೇಶಕರಾಗಿ ಅಯೋಗ್ಯದಲ್ಲಿ ಕೆಲಸ ಮಾಡಲಿದ್ದಾರೆ. ತಮ್ಮ ಶಿಷ್ಯರನ್ನು ಹುರಿದುಂಬಿಸಿಕೊಂಡು ಬರುತ್ತಿರುವ ಯೋಗರಾಜ್ ಭಟ್ ಈ ಚಿತ್ರಕ್ಕೆ ಹಾಡು ಬರೆಯಲಿದ್ದಾರೆ.
ಹಳ್ಳಿಯ ವಾತಾವರಣದ  ಕಥೆಯನ್ನು ಹೊಂದಿರುವ ಅಯೋಗ್ಯದಲ್ಲಿ ಸತೀಶ್ ಮಂಡ್ಯ ಶೈಲಿಯಲ್ಲಿ ಮಾತನಾಡಲಿದ್ದಾರೆ. ನಾನು ಹಳ್ಳಿಯಲ್ಲಿ ಬೆಳೆದಿರುವುದರಿಂದ ಹಳ್ಳಿಯವರ ಭಾವನೆ, ಜೀವನ ಶೈಲಿ ಅರ್ಥವಾಗುತ್ತದೆ. ಹಳ್ಳಿಯವರು ಸಿನಿಮಾದಲ್ಲಿ ಏನು ನೋಡಲು ಬಯಸುತ್ತಾರೆ ಎಂಬುದು ಕೂಡ ಗೊತ್ತಾಗುತ್ತದೆ. ಸರಳ ಹಾಸ್ಯವನ್ನು ಹಳ್ಳಿ ಜನರು ಬಯಸುತ್ತಾರೆ. ಈ ಚಿತ್ರದಲ್ಲಿ ಕೂಡ ಅದನ್ನೇ ನಿರೀಕ್ಷಿಸಬಹುದು ಎನ್ನುತ್ತಾರೆ ಸತೀಶ್. ಚಿತ್ರದ ಶೂಟಿಂಗ್ ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.