ಉಪ್ಪು ಹುಳಿ ಖಾರ ಸವಿದ ಸುಧಾ ಮೂರ್ತಿ
ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿರ್ದೇಶನದ ಉಪ್ಪು ಹುಳಿ ಖಾರ ಚಿತ್ರದ ಧ್ವನಿ ಸುರುಳಿಯನ್ನು ತತ್ವಶಾಸ್ತ್ರಜ್ಞೆ, ಬರಹಗಾರ್ತಿ ಸುಧಾ ಮೂರ್ತಿ ಅವರು ಬಿಡುಗಡೆ ಮಾಡಿದರು...

Published On :
ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿರ್ದೇಶನದ ಉಪ್ಪು ಹುಳಿ ಖಾರ ಚಿತ್ರದ ಧ್ವನಿ ಸುರುಳಿಯನ್ನು ತತ್ವಶಾಸ್ತ್ರಜ್ಞೆ, ಬರಹಗಾರ್ತಿ ಸುಧಾ ಮೂರ್ತಿ ಅವರು ಬಿಡುಗಡೆ ಮಾಡಿದರು.
ಸ್ಯಾಂಡಲ್ವುಡ್ ನಟಿ ಮಾಲಾಶ್ರೀ, ರಕ್ಷಿತ್ ಶೆಟ್ಟಿ ಮತ್ತು ಧೃವ ಸರ್ಜಾರ ಸಮ್ಮುಖದಲ್ಲಿ ಸುಧಾ ಮೂರ್ತಿ ಅವರು ಆಡಿಯೋ ಬಿಡುಗಡೆ ಮಾಡಿದರು.
ಸುಧಾ ಮೂರ್ತಿಯವರು ಈ ಚಿತ್ರದ ಹಿತೈಷಿಯಾಗಿದ್ದಾರೆ. ನಿರ್ಮಾಪಕ ಎಂ. ರಮೇಶ್ ಅವರಿಗೆ ಅವರು ತುಂಬಾ ಬೆಂಬಲ ನೀಡಿದ್ದಾರೆ. ತೇಜಸ್ವಿನಿ ಎಂಟರ್ ಪ್ರೈಸರ್ಸ್ ಅಡಿಯಲ್ಲಿ ರಮೇಶ್ ಅವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎಂದು ಚಿತ್ರ ನಿರ್ದೇಶಕ ಇಮ್ರಾನ್ ಹೇಳಿದ್ದಾರೆ.
ಉಪ್ಪು ಹುಳಿ ಖಾರ ಇಮ್ರಾನ್ ಸರ್ದಾರಿಯಾ ಅವರ ಎರಡನೇ ಚಿತ್ರವಾಗಿದೆ. ಅಜಯ್ ರಾವ್ ರೊಂದಿಗೆ ಇಮ್ರಾನ್ ಎಂದೆದಿಗೂ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉಪ್ಪು ಹುಳಿ ಖಾರ ಚಿತ್ರದಲ್ಲಿ ಶಶಿ ದೇವರಾಜ್, ಶರತ್, ಅನುಶ್ರೀ, ಧನಂಜಯ್ ಮತ್ತು ಬಿ ಜಯಶ್ರೀ ಅವರು ಅಭಿನಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SandalwoodAudio Launchಇಮ್ರಾನ್ ಸರ್ದಾರಿಯಾಸ್ಯಾಂಡಲ್ವುಡ್Imran SardhariyaSudha murthyಉಪ್ಪು ಹುಳಿ ಖಾರಸುಧಾ ಮೂರ್ತಿUppu Huli Kharaಧ್ವನಿ ಸುರುಳಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


