ಬಾಹುಬಲಿ-2 ಚಿತ್ರ ಇಷ್ಟವಾಗದಿದ್ದರೇ ಅಂಥವರಿಗೆ ಮನೋವೈದ್ಯರ ಅವಶ್ಯಕತೆಯಿದೆ: ಆರ್ ಜಿವಿ
ಒಂದು ವೇಳೆ ನೀವು ಬಾಹಬಲಿ-2 ಸಿನಿಮಾ ಇಷ್ಟವಾಗಲಿಲ್ಲ ಎಂದರೇ ಅಂಥವರಿಗೆ ಮನೋವೈದ್ಯರ ಅವಶ್ಯಕತೆಯಿದೆ ಎಂದು ಅರ್ಥ ಎಂದು ನಿರ್ದೇಶಕ ರಾಮ್ ಗೋಪಾಲ ವರ್ಮಾ ...

Published On :
ನವದೆಹಲಿ: ಒಂದು ವೇಳೆ ನೀವು ಬಾಹಬಲಿ-2 ಸಿನಿಮಾ ಇಷ್ಟವಾಗಲಿಲ್ಲ ಎಂದರೇ ನಿಮಗೆ ಮಾನಸಿಕವಾಗಿ ಸಮಸ್ಯೆ ಇದೆ ಎಂದು ಅರ್ಥ ಎಂದು ನಿರ್ದೇಶಕ ರಾಮ್ ಗೋಪಾಲ ವರ್ಮಾ ಹೇಳಿದ್ದಾರೆ.
ಬಾಹುಬಲಿ ಸಿನಿಮಾ ವನ್ನು ಇಷ್ಟ ಪಡದ ಜನರಿಗೆ ಮಾನಸಿಕ ಆರೋಗ್ಯ ತಪಾಸಣೆ ಮಾಡಿಸುವುದಕ್ಕೆ ನಿರ್ಮಾಪಕ ಶೋಬು ಯರ್ಲಾಗಡ್ಡ ಅವರು ಧನ ಸಹಾಯ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಯರ್ಲಾಗುಡ್ಡ ಪೋಸ್ಟ್ ಗೆ ಪ್ರತಕ್ರಿಯಿಸಿರುವ ಆರ್ ಜಿವಿ ಅಮೆರಿಕಾದಲ್ಲಿ ಬಾಹಬಲಿ-2 ಹವಾ ಸೃಷ್ಟಿಸಿದೆ. ಬಾಹುಬಲಿ ವೋಲ್ಕಾನೋ ಹಲವು ಭೂಕಂಪಗಳನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ.
ಬಾಹುಬಲಿ-2 ಯಶಸ್ವಿಯಿಂದಾಗಿ ನನಗೆ ಹೊಟ್ಟೆಕಿಚ್ಚಿನಿಂದಾಗಿ ಆಸ್ಪತ್ರೆ ಸೇರಿದ್ದೇನೆ. ಹಲವು ಸಿನಿಮಾ ನಿರ್ಮಾಪಕರು ಈಗಾಗಲೇ ಐಸಿಯು ಗೆ ದಾಖಲಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ನೋ-ಈದ್, ನೋ ದಿವಾಳಿ, ನೋ ಅಮಿರ್, ನೋ ಶಾರುಖ್, ನೋ ಸಲ್ಮಾನ್, ಬಾಹಬಲಿ-2 ಸಿನಿಮಾ ಅತಿ ದೊಡ್ಡ ಇತಿಹಾಸ ಸೃಷ್ಟಿಸಿದೆ ಎಂದು ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


