ಸಿನಿಮಾ ಸುದ್ದಿ

ವಂಚನೆ ಆರೋಪ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಎಫ್ ಐಆರ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್ ಐಆರ್ ..

ವಂಚನೆ ಆರೋಪ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿರುದ್ಧ ಎಫ್ ಐಆರ್
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ
Published On :
ಮುಂಬಯಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಬಿವಂಡಿ ಮೂಲದ ಮಾಲೋಟಿಯಾ ಟೆಕ್ಸ್ ಟೈಲ್  ಮಾಲೀಕರಾದ 60 ವರ್ಷದ ರವಿ ಮೋಹನ್‍ಲಾಲ್ ಭೋಲಾಟಿಯಾ ಶಿಲ್ಪಾ ಶೆಟ್ಟಿ ದಂಪತಿ ತಮಗೆ 24 ಲಕ್ಷ ರು ಹಣ ವಂಚಿಸಿದ್ದಾರೆ ಎಂದು ದೂರು ದಾಖಲಿಸಿದ್ದರು,
ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ  ಅವರನ್ನ ಆನ್‍ಲೈನ್ ಶಾಪಿಂಗ್ ಡೀಲ್‍ಗಾಗಿ ಭೇಟಿ ಮಾಡಿದ್ದೆ. ಈ ಇಬ್ಬರು ಮಾಲೋಟಿಯಾ ಟೆಕ್ಸ್ ಟೈಲ್ ನ ಬೆಡ್ ಶೀಟ್ ಗಳನ್ನು ಆನ್ ಲೈನ್ ಮಾರಾಟ ಮಾಡಿ  ಗ್ರಾಹಕರಿಂದ ಹಣ ಪಡೆದಿದ್ದಾರೆ. ಆದರೆ ಟೆಕ್ಸ್ ಟೈಲ್ ಕಂಪನಿಗೆ ನೀಡಬೇಕಿದ್ದ ಹಣ ನೀಡಿರಲಿಲ್ಲ ಎಂದು ಅವರು ದೂರಿನಲ್ಲ ಉಲ್ಲೇಖಿಸಿದ್ದಾರೆ.
10 ದಿನಗಳ ಹಿಂದೆ ರವಿ ಅವರು ಪೊಲೀಸ್ ಆಯುಕ್ತರಾದ ಪರಮ್ ಬೀರ್ ಸಿಂಗ್ ಅವರನ್ನ ಭೇಟಿ ಮಾಡಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಸೇರಿದಂತೆ ಐವರ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿಯಲ್ಲಿ ವಂಚನೆ ಕೇಸು ದಾಖಲಿಸಲಾಗಿದೆ ಎಂದು ಮುಂಬಯಿ ಪೊಲೀಸ್ ಆಯುಕ್ತ ಮನೋಜ್ ಪಾಟೀಲ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.