ಬಾಹುಬಲಿ 2 ರಿಲೀಸ್ ಗೂ ಮೊದಲೇ ಪ್ರಭಾಸ್ ಗೆ ನಿರ್ದೇಶಕ ರಾಜಮೌಳಿ ಸ್ಪೆಷಲ್ ಗಿಫ್ಟ್!
ಬರೊಬ್ಬರಿ 5 ವರ್ಷಗಳ ಒಂದೇ ಚಿತ್ರಕ್ಕಾಗಿ ತಮ್ಮನ್ನು ತಾವು ಮೀಸಲಿಟ್ಟುಕೊಂಡಿದ್ದ ಬಾಹುಬಲಿ ನಟ ಪ್ರಭಾಸ್ ಗೆ ನಿರ್ದೇಶಕ ಎಸ್ ಎಸ್ ರಾಜಮೌಳಿ ವಿಶೇಷ ಉಡುಗೊರೆ ನೀಡಲು ಮುಂದಾಗಿದ್ದಾರೆ.

ಹೈದರಾಬಾದ್: ಬರೊಬ್ಬರಿ 3 ವರ್ಷಗಳು ಒಂದೇ ಚಿತ್ರಕ್ಕಾಗಿ ತಮ್ಮನ್ನು ತಾವು ಮೀಸಲಿಟ್ಟುಕೊಂಡಿದ್ದ ಬಾಹುಬಲಿ ನಟ ಪ್ರಭಾಸ್ ಗೆ ನಿರ್ದೇಶಕ ಎಸ್ ಎಸ್ ರಾಜಮೌಳಿ ವಿಶೇಷ ಉಡುಗೊರೆ ನೀಡಲು ಮುಂದಾಗಿದ್ದಾರೆ.
ಇದೇ ಏಪ್ರಿಲ್ 28ರಂದು ಬಾಹುಬಲಿ 2 ಚಿತ್ರ ವಿಶ್ವಾದ್ಯಂತ ಏಕಕಾಲಕ್ಕೆ ತೆರೆ ಕಾಣುತ್ತಿದ್ದು, ಇದಕ್ಕೂ ಮೊದಲೇ ರಾಜಮೌಳಿ ನಟ ಪ್ರಭಾಸ್ ಗೆ ಉಡುಗೊರೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಖಾಸಗಿ ದೈನಿಕವೊಂದು ವರದಿ ಮಾಡಿರುವಂತೆ ಬಾಹುಬಲಿ ಚಿತ್ರದಲ್ಲಿ ಪ್ರಭಾಸ್ ಬಳಕೆ ಮಾಡಿರುವ ಅಷ್ಟೂ ಯುದ್ಧೋಪಕರಣಗಳನ್ನು ಅವರಿಗೇ ಉಡುಗೊರೆಯಾಗಿ ನೀಡಲು ರಾಜಮೌಳಿ ಮುಂದಾಗಿದ್ದಾರೆ ಎಂದು ವರದಿ ಮಾಡಲಾಗಿದೆ.
ಬಾಹುಬಲಿ ಮತ್ತು ಬಾಹುಬಲಿ 2 ಚಿತ್ರದಲ್ಲಿ ನಟ ಪ್ರಭಾಸ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ವಿವಿಧ ಯುದ್ಧೋಪಕರಣಗಳನ್ನು ಬಳಕೆ ಮಾಡಿದ್ದಾರೆ. ಆ ಎಲ್ಲ ಯುದ್ಧೋಪಕರಣಗಳನ್ನೂ ನಟ ಪ್ರಭಾಸ್ ಗೆ ಉಡುಗೊರೆಯಾಗಿ ನೀಡಲು ರಾಜಮೌಳಿ ಮುಂದಾಗಿದ್ದಾರೆ. ಪ್ರಮುಖವಾಗಿ ಬಾಹುಬಲಿ ಪಾತ್ರದಲ್ಲಿ ಪ್ರಭಾಸ್ ಕೈಯಲ್ಲಿದ್ದ ಕುದುರೆ ಮುಖದ ಖಡ್ಗ ಹಾಗೂ ಟ್ರೈಲರ್ ನಲ್ಲಿ ಕಾಣಿಸುವ ಕೊಡಲಿಯನ್ನು ಪ್ರಭಾಸ್ ರಾಜಮೌಳಿ ಅವರಿಂದ ಉಡುಗೊರೆಯಾಗಿ ಪಡೆಯಲಿದ್ದಾರಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


