ಹೇಮಮಾಲಿನಿ, ಐಶ್ವರ್ಯ, ಜೀನತ್, ಸೂಜಿತ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳು
ಜನಪ್ರಿಯ ನಟಿಯರಾದ ಹೇಮಮಾಲಿನಿ ಮತ್ತು ಐಶ್ವರ್ಯ ರೈ ಬಚ್ಚನ್, ನಿರ್ದೇಶಕ ಸೂಜಿತ್ ಸರ್ಕಾರ್ ಮತ್ತು ಜೀನತ್ ಅಮನ್ ಅವರುಗಳು ೨೦೧೭ ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಶ್ರೇಷ್ಠ ಪ್ರಶಸ್ತಿಗಳಿಗೆ

Published On :
ಮುಂಬೈ: ಜನಪ್ರಿಯ ನಟಿಯರಾದ ಹೇಮಮಾಲಿನಿ ಮತ್ತು ಐಶ್ವರ್ಯ ರೈ ಬಚ್ಚನ್, ನಿರ್ದೇಶಕ ಸೂಜಿತ್ ಸರ್ಕಾರ್ ಮತ್ತು ಜೀನತ್ ಅಮನ್ ಅವರುಗಳು ೨೦೧೭ ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ದಾಸಾಹೇಬ್ ಫಾಲ್ಕೆ ಶ್ರೇಷ್ಠ ಪ್ರಶಸ್ತಿಗಳು ೨೦೧೭ ಸಮಾರಂಭ ಶುಕ್ರವಾರ ರಾತ್ರಿ ಹಲವು ಬಾಲಿವುಡ್ ತಾರೆಯರ ನಡುವೆ ಮುಂಬೈನಲ್ಲಿ ನಡೆದಿದೆ.
ಭಾರತೀಯ ಸಿನೆಮಾದ ಪಿತೃ ಎಂದೇ ಬಣ್ಣಿಸಲಾಗುವ ದಾದಾಸಾಹೇಬ್ ಫಾಲ್ಕೆ ಅವರ ೧೪೮ನೆ ಜನ್ಮ ದಿನೋತ್ಸವವನ್ನು ದಾಸಾಹೇಬ್ ಫಾಲ್ಕೆ ಶ್ರೇಷ್ಠ ಪ್ರಶಸ್ತಿಗಳು ೨೦೧೭ ಮತ್ತು ಚಿತ್ರ ಪ್ರೊಡಕ್ಷನ್ಸ್ ಜಂಟಿಯಾಗಿ ಆಯೋಜಿಸಿದ್ದವು.
ಜೀನತ್ ಅಮನ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸರ್ಕಾರ್ ಅವರಿಗೆ 'ಪಿಂಕ್' ಸಿನೆಮಾ ನಿರ್ದೇಶನಕ್ಕಾಗಿ ಸೃಜನಶೀಲ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ. 'ಕಾಬಿಲ್' ಸಿನೆಮಾದ ಪಾತ್ರಕ್ಕೆ ರೋಹಿತ್ ರಾಯ್ ಅವರಿಗೆ ಅತ್ಯುತ್ತಮ ಖಳನಟ ಪ್ರಶಸ್ತಿ ನೀಡಲಾಗಿದೆ.
ಭಾರತೀಯ ಸಿನೆಮಾದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆ ನೀಡುವ ಸಿನೆಮಾರಂಗದ ವ್ಯಕ್ತಿಗಳಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಭಾರತೀಯ ಸಿನೆಮಾಗೆ ಕೊಡುಗೆ ನೀಡುವ ವ್ಯಕ್ತಿಗಳನ್ನು ಗುರಿತಿಸಲು ಮೊದಲ ಬಾರಿಗೆ ೧೯೬೯ ರಲ್ಲಿ ಸರ್ಕಾರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪರಿಚಯಿಸಿತ್ತು. ನಟಿ ದೇವಿಕಾರಾಣಿ ಮೊದಲ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Aishwarya Rai Bachchanಐಶ್ವರ್ಯ ರೈ ಬಚ್ಚನ್ಹೇಮಮಾಲಿನಿHema Maliniadasaheb Phalke Excellence AwardsZeenat Amanಜೀನತ್ ಅಮನ್ದಾದಾಸಾಹೇಬ್ ಫಾಲ್ಕೆ ಶ್ರೇಷ್ಠ ಪ್ರಶಸ್ತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


