'ಕಿರಿಕ್ ಪಾರ್ಟಿ' ತೆಲುಗು ರಿಮೇಕ್ ಜೂನ್ ನಿಂದ ಪ್ರಾರಂಭ
ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದ ಕನ್ನಡದ ಬ್ಲಾಕ್ ಬಸ್ಟರ್ ಚಲನಚಿತ್ರ 'ಕಿರಿಕ್ ಪಾರ್ಟಿ'ಯ ತೆಲುಗು ರಿಮೇಕ್ ಚಿತ್ರೀಕರಣ ಜೂನ್ ನಿಂದ ಪ್ರಾರಂಭವಾಗಲಿದೆ. ಇದರಲ್ಲಿ ನಿಖಿಲ್ ಸಿದ್ಧಾರ್ಥ್ ಮುಖ್ಯ ಭೂಮಿಕೆಯಲ್ಲಿ

Published On :
ಚೆನ್ನೈ: ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದ ಕನ್ನಡದ ಬ್ಲಾಕ್ ಬಸ್ಟರ್ ಚಲನಚಿತ್ರ 'ಕಿರಿಕ್ ಪಾರ್ಟಿ'ಯ ತೆಲುಗು ರಿಮೇಕ್ ಚಿತ್ರೀಕರಣ ಜೂನ್ ನಿಂದ ಪ್ರಾರಂಭವಾಗಲಿದೆ. ಇದರಲ್ಲಿ ನಿಖಿಲ್ ಸಿದ್ಧಾರ್ಥ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅನಿಲ್ ಸುಂಕರ ಅವರ ಎಕೆ ಎಂಟರ್ಟೈನ್ಮೆಂಟ್ಸ್ ಈ ಸಿನೆಮಾವನ್ನು ನಿರ್ಮಿಸಸುತ್ತಿದೆ.
"ಇದು ಪ್ರತಿ ಫ್ರೇಮ್ ನ ರಿಮೇಕ್ ಆಗಿರುವುದಿಲ್ಲ. 'ಹ್ಯಾಪಿ ಡೇಸ್' ನಂತರ ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಕ್ಯಾಂಪಸ್ ಸಿನೆಮಾ ಮೂಡಿಬಂದಿಲ್ಲ. ಆದುದರಿಂದ ನಿಖಿಲ್ ಒಳಗೊಂಡಂತೆ ಇಡೀ ತಂಡ ಈ ಪ್ರಕಾರವನ್ನು ಮರುಕಳಿಸುವ ಅಗತ್ಯ ಇದೆ ಎಂದು ಮನಗಂಡು 'ಕಿರಿಕ್ ಪಾರ್ಟಿ' ಸಿನೆಮಾವನ್ನು ಇಲ್ಲಿಗೆ ಅಳವಡಿಸಿಕೊಳ್ಳಲು ಮುಂದಾದರು. ಇದರಲ್ಲಿ ಹೆಚ್ಚು ಗಮನ ಕಾಲೇಜು ರಾಜಕೀಯದತ್ತ ಇರಲಿದೆ" ಎಂದು ಮೂಲಗಳು ತಿಳಿಸಿವೆ.
ಶೇಖರ್ ಕಮ್ಮುಲ ಅವರ ಕ್ಯಾಂಪಸ್ ಸಿನೆಮಾ 'ಹ್ಯಾಪಿ ಡೇಸ್' ಮೂಲಕ ನಿಖಿಲ್ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದರು. ಸದ್ಯಕ್ಕೆ ಸ್ಕ್ರಿಪ್ಟ್ ಮಾತುಕತೆ ಜಾರಿಯಲ್ಲಿದ್ದು, ತಾರಾಗಣದ ಆಯ್ಕೆ ಅಂತಿಮಗೊಳ್ಳಬೇಕಿದೆ.
"ಖ್ಯಾತ ನೃತ್ಯನಿರ್ದೇಶಕ ರಾಜು ಸುಂದರಂ ಈ ಸಿನೆಮಾವನ್ನು ನಿರ್ದೇಶಿಸಿಸುವ ಸಾಧ್ಯತೆ ಇದೆ. ಈ ಸಿನೆಮಾ ಜೂನ್ ನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ" ಎಂದು ಮೂಲಗಳು ತಿಳಿಸಿವೆ.
ಸಣ್ಣ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ೫೦ ಕೋಟಿಗೂ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರ. ಈ ಚಿತ್ರದ ನಂತರ ನಟ ರಕ್ಷಿತ್ ಶೆಟ್ಟಿ ಮುಂದಿನ ಸೂಪರ್ ಸ್ಟಾರ್ ಎಂದೇ ಬಿಂಬಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
rakshith shettyremakeರಿಮೇಕ್Teluguರಕ್ಷಿತ್ ಶೆಟ್ಟಿತೆಲುಗುKirik partyಕಿರಿಕ್ ಪಾರ್ಟಿNikhil Siddarthaನಿಖಿಲ್ ಸಿದ್ಧಾರ್ಥ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


