ಸಿನಿಮಾ ಸುದ್ದಿ

ಭಾಷೆಯ ಆಧಾರದಲ್ಲಿ ಭಾರತೀಯ ಸಿನಿಮಾಗಳನ್ನು ವಿಂಗಡಿಸಬೇಡಿ: ಪ್ರಿಯಾಂಕಾ ಛೋಪ್ರಾ

ನಾನು ನಮ್ಮ ಸಿನಿಮಾಗಳ ನಡುವೆ ಹೋಲಿಕೆ ಮಾಡಲು ಹೋಗುವುದಿಲ್ಲ. ಅಂತಿಮವಾಗಿ ನಾವೆಲ್ಲರೂ ಭಾರತೀಯರು. ಇಲ್ಲಿ ನಿರ್ಮಾಣವಾಗುವುದೆಲ್ಲಾ ಭಾರತೀಯ ...

ಭಾಷೆಯ ಆಧಾರದಲ್ಲಿ ಭಾರತೀಯ ಸಿನಿಮಾಗಳನ್ನು ವಿಂಗಡಿಸಬೇಡಿ: ಪ್ರಿಯಾಂಕಾ ಛೋಪ್ರಾ
ಪ್ರಿಯಾಂಕಾ ಛೋಪ್ರಾ
Published On :
ನವದೆಹಲಿ: ನಾನು ನಮ್ಮ ಸಿನಿಮಾಗಳ ನಡುವೆ ಹೋಲಿಕೆ ಮಾಡಲು ಹೋಗುವುದಿಲ್ಲ. ಅಂತಿಮವಾಗಿ ನಾವೆಲ್ಲರೂ ಭಾರತೀಯರು. ಇಲ್ಲಿ ನಿರ್ಮಾಣವಾಗುವುದೆಲ್ಲಾ ಭಾರತೀಯ ಸಿನಿಮಾಗಳು ಎಂದು ಬಾಲಿವುಡ್ ನಟಿ ಪ್ರಿಯಾಂಕಾ  ಹೇಳಿದ್ದಾರೆ. 
ಚಿತ್ರ ಪ್ರಾದೇಶಿಕವಾದದ್ದಾಗಿರಲಿ ಅಥವಾ ಹಿಂದಿ ಭಾಷೆಯದ್ದೇ ಆಗಿರಲಿ ಒಟ್ಟಾರೆಯಾಗಿ ನಾನು ಅದನ್ನು ಕಣ್ತುಂಬಿಕೊಳ್ಳಲು ಕಾತರಳಾಗಿರುತ್ತೇನೆಯೇ ಹೊರತು ಅವುಗಳನ್ನು ವಿಭಾಗಿಸುವ ಗೋಜಿಗೆ ಹೋಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರತಿವರ್ಷವೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗುವ ಸಂದರ್ಭಗಳಲ್ಲಿ ಯಾವ ಭಾಷೆಯ ಸಿನಿಮಾಗಳು ಎಷ್ಟು ಪ್ರಶಸ್ತಿ ಪಡೆದಿವೆ ಎಂದು ವಿಭಾಗಿಸಲಾಗುತ್ತದೆ. ಹಾಗೆ ಮಾಡುವುದು ಬೇಡ ಎಂದು  ಸಲಹೆ ನೀಡಿದ್ದಾರೆ. 
ಪ್ರಾದೇಶಿಕ ಭಾಷೆಯಲ್ಲಿಯೂ ಹಲವು ಮಂದಿ ಅತ್ಯುತ್ತಮ ನಿರ್ದೇಶಕರು ಹಾಗೂ ನಿರ್ಮಾಪಕರಿದ್ದಾರೆ. ಪ್ರಾದೇಶಿಕ ಸಿನಿಮಾಗಳೂ ಹೆಚ್ಚಿನ ಮಾನ್ಯತೆ ಪಡೆಯಲಿ ಹಾಗೂ ಮತ್ತಷ್ಟು ಉತ್ತಮ ಸಿನಿಮಾಗಳನ್ನು ರೂಪಿಸಲಿ ಎಂದು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.