ಸಿನಿಮಾ ಸುದ್ದಿ

ಶಿವಮೊಗ್ಗ ಜೈಲಿನಲ್ಲಿ 'ದ ವಿಲನ್' ಚಿತ್ರೀಕರಣ ಪ್ರಾರಂಭ

ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವ 'ದ ವಿಲನ್' ಸಿನೆಮಾದ ಚಿತ್ರೀಕರಣವನ್ನು ನಿರ್ದೇಶಕ ಪ್ರೇಮ್ ಶಿವಮೊಗ್ಗದ ಜೈಲಿನಿಂದ ಪ್ರಾರಂಭಿಸಿದ್ದಾರೆ.

ಶಿವಮೊಗ್ಗ ಜೈಲಿನಲ್ಲಿ 'ದ ವಿಲನ್' ಚಿತ್ರೀಕರಣ ಪ್ರಾರಂಭ
ಶಿವಮೊಗ್ಗ ಜೈಲಿನಲ್ಲಿ 'ದ ವಿಲನ್' ಚಿತ್ರೀಕರಣ ಪ್ರಾರಂಭಿಸಿದ ನಿರ್ದೇಶಕ ಪ್ರೇಮ್ ಮತ್ತು ಚಿತ್ರತಂಡ
Published On :
ಬೆಂಗಳೂರು: ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವ 'ದ ವಿಲನ್' ಸಿನೆಮಾದ ಚಿತ್ರೀಕರಣವನ್ನು ನಿರ್ದೇಶಕ ಪ್ರೇಮ್ ಶಿವಮೊಗ್ಗದ ಜೈಲಿನಿಂದ ಪ್ರಾರಂಭಿಸಿದ್ದಾರೆ. ಇದರಲ್ಲಿ ನಟ ಸುದೀಪ್ ಭಾಗಿಯಾಗಿದ್ದಾರೆ. ಅಂದಹಾಗೆ ಶಿವಮೊಗ್ಗ ನಟನ ಸ್ವಂತ ಸ್ಥಳ.
"ಕೊರಿಯಾದ ಜೈಲುಗಳ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಕಟ್ಟಿರುವ ಮೊದಲ ಖಾರಗೃಹ ಇದು. ಅದು ಉದ್ಘಾಟನೆ ಆಗುವುದಕ್ಕೆ ಮೊದಲೇ ನಾವಿಲ್ಲಿ ಚಿತ್ರೀಕರಣ ನಡೆಸುತ್ತಿರುವುದಕ್ಕೆ ಸಂತಸ ತಂದಿದೆ" ಎನ್ನುವ ಪ್ರೇಮ್ ಇದಕ್ಕಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರ ಬಳಿ ಪರವಾನಗಿ ಪಡೆದಿರುವುದಾಗಿ ಹೇಳುತ್ತಾರೆ. 
"ನಾನು ಜೈಲಿನಲ್ಲಿ ಚಿತ್ರೀಕರಣ ನಡೆಸಲು ಪರವಾನಗಿ ಪಡೆಯಲು ಅವರ ಬಳಿ ಹೋಗಿದ್ದೆ. ಆಗ ಅವರು ಹೊಸ ಜೈಲಿನಲ್ಲಿ ಚಿತ್ರೀಕರಣ ಮಾಡುವಂತೆ ಸಲಹೆ ನೀಡಿದರು" ಎನ್ನುವ ಪ್ರೇಮ್ "ಪರಪ್ಪನ ಅಗ್ರಹಾರದಲ್ಲಿ ಕೂಡ ಚಿತ್ರೀಕರಣ ನಡೆಸುವ ಆಯ್ಕೆಯನ್ನು ಅವರು ನೀಡಿದರು ಆದರೆ ಈ ಹೊಸ ಜೈಲಿಗೆ ಭೇಟಿ ನೀಡಿದ ಮೇಲೆ ಆಸಕ್ತಿದಾಯಕ ಎಂದೆನಿಸಿ ಅಲ್ಲಿಂದಲೇ ಪ್ರಾರಂಭಿಸಿದೆ. ಸಚಿವರು ಮತ್ತು ಪೊಲೀಸ್ ಇಲಾಖೆ ನೀಡಿರುವ ಬೆಂಬಲಕ್ಕೆ ಅವರಿಗೆ ಧನ್ಯವಾದ" ಎನ್ನುತ್ತಾರೆ ಪ್ರೇಮ್. 
ಮುಂದಿನ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಜೈಲನ್ನು ಉದ್ಘಾಟನೆ ಮಾಡಲಿದ್ದಾರಂತೆ. ಪ್ರೇಮ್ ಮುಂದೆ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಿದ್ದು ನಂತರ ಲಂಡನ್ ಗೆ ಹಾರಲಿದ್ದಾರೆ. ಅಲ್ಲಿ ನಟ ಶಿವರಾಜ್ ಕುಮಾರ್ ತಂಡವನ್ನು ಸೇರಲಿದ್ದಾರೆ. ಅಂದಹಾಗೆ ನಾಯಕ ನಟಿಯ ಶೋಧ ಮುಂದುವರೆದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.