ಸಿನಿಮಾ ಸುದ್ದಿ

'ಚಕ್ರವರ್ತಿ'ಯ ಗೆಳೆಯನ ಪಾತ್ರದಲ್ಲಿ ಸೃಜನ್ ಲೋಕೇಶ್

'ಚಕ್ರವರ್ತಿ' ಸಿನೆಮಾಗೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿದ್ದು ಮುಂದಿನ ವಾರ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ದರ್ಶನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನೆಮಾದಲ್ಲಿ ಆದಿತ್ಯ ಮತ್ತು ಸೃಜನ್

'ಚಕ್ರವರ್ತಿ'ಯ ಗೆಳೆಯನ ಪಾತ್ರದಲ್ಲಿ ಸೃಜನ್ ಲೋಕೇಶ್
ಸೃಜನ್ ಲೋಕೇಶ್
Published On :
ಬೆಂಗಳೂರು: 'ಚಕ್ರವರ್ತಿ' ಸಿನೆಮಾಗೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿದ್ದು ಮುಂದಿನ ವಾರ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ದರ್ಶನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನೆಮಾದಲ್ಲಿ ಆದಿತ್ಯ ಮತ್ತು ಸೃಜನ್ ಲೋಕೇಶ್ ಸೇರಿದಂತೆ ಖ್ಯಾತ ತಾರೆಯರು ನಟಿಸಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. 
ತೆರೆಯ ಮೇಲಾಗಲಿ ಅಥವಾ ತೆರೆಯ ಹಿಂದೆಯಾಗಲಿ ಈ ನಟರು ದರ್ಶನ್ ಅವರ ಒಡನಾಡಿಗಳು. ಈ ಹಿಂದೆ ಈ ನಟರು ಸ್ವತಂತ್ರವಾಗಿ ಹಿರೋಗಳಾಗಿ ನಟಿಸಿದ್ದರೂ, ದರ್ಶನ್ ಅವರ ಸಿನೆಮಾಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. 
ಗೆಳೆತನವಷ್ಟೇ ಅಲ್ಲ, ತೆರೆಯ ಮೇಲೆ ದರ್ಶನ್ ಜೊತೆಗಿನ ನನ್ನ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಇಷ್ಟಪಡುತ್ತಾರೆ ಎನ್ನುತ್ತಾರೆ ಸೃಜನ್. "ಸಿನೆಮಾಗಳಲ್ಲಿ ದರ್ಶನ್ ಸ್ಟಾರ್ ಆದರೆ ವ್ಯಕ್ತಿಯಾಗಿ ಅವರು ಬಹಳ ವಿನಯವಂತ" ಎನ್ನುವ ಅವರು "ಅವರು 'ಚಕ್ರವರ್ತಿ'ಯ ಪಾತ್ರದಲ್ಲಿ ಮಿಂಚಿದ್ದಾರೆ ಕಿಟ್ಟಪ್ಪ ಅಲಿಯಾಸ್ ಕಿಟ್ಟಿ ಪಾತ್ರದಲ್ಲಿ ನಾನು ನನ್ನ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದೇನೆ" ಎನ್ನುತ್ತಾರೆ. 
ಯಾವ ಪಾತ್ರವು ಸಣ್ಣದಲ್ಲ ಎನ್ನುವ ಸೃಜನ್ "ಉದಾಹರಣೆಗೆ ಹೀರೋಗೆ ಸೈಕಲ್ ಒಂದು ಗುದ್ದಿ, ಅವನಿಗೆ ಪೆಟ್ಟಾದರೆ ಸೈಕಲ್ ಕೂಡ ಪ್ರಮುಖ ಪಾತ್ರವಾಗುತ್ತದೆ ಮತ್ತು ಅದು ಕಥೆಗೆ ಪ್ರಮುಖ ತಿರುವು ತಂದುಕೊಡುತ್ತದೆ. ಕಿಟ್ಟಪ್ಪ ಮತ್ತು ಚಕ್ರವರ್ತಿಯ ಸಂಬಂಧ ಪ್ರೇಕ್ಷಕರಿಗೆ ತಿಳಿದು ಅದು ಎಷ್ಟು ಪ್ರಮುಖ ಪಾತ್ರ ಎಂದು ತಿಳಿಯಲಿದೆ" ಎನ್ನುತ್ತಾರೆ. 
ಭೂಗತ ಲೋಕದ ಈ ಕಥೆಯನ್ನು ಚೊಚ್ಚಲ ನಿರ್ದೇಶಕ ಚಿಂತನ್ ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದಾರೆ ಎನ್ನುತ್ತಾರೆ ಸೃಜನ್. "ಕೆಲವು ಸಿನೆಮಾಗಳನ್ನು ವಿವರಿಸಲು ಕಷ್ಟ. ಅವುಗಳನ್ನು ನೋಡಿಯೇ ನೀವು ತಿಳಿಯಬೇಕು. 'ಚಕ್ರವರ್ತಿ' ಅಂತಹ ಒಂದು ಸಿನೆಮಾ" ಎನ್ನುತ್ತಾರೆ ನಟ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.