'ಎಂ ಎಸ್ ಧೋನಿ...' ಸಿನೆಮಾದಲ್ಲಿ ಸುಶಾಂತ್ ಪ್ರದರ್ಶನ ಅದ್ಭುತ: ಸೂರ್ಯ
'ಎಂ ಎಸ್ ಧೋನಿ: ದ ಆನ್ ಟೋಲ್ಡ್ ಸ್ಟೋರಿ' ಸಿನೆಮಾ ನೋಡಿ ಅವಾಕ್ಕಾದ ತಮಿಳು ಸಿನೆಮಾ ನಟ ಸೂರ್ಯ ಪ್ರಖ್ಯಾತ ಕ್ರಿಕೆಟರ್ ಪಾತ್ರ ನಿರ್ವಹಿಸಿರುವ ಸುಶಾಂತ್ ಸಿಂಗ್ ರಜಪೂತ್

Published On :
ಚೆನ್ನೈ: 'ಎಂ ಎಸ್ ಧೋನಿ: ದ ಆನ್ ಟೋಲ್ಡ್ ಸ್ಟೋರಿ' ಸಿನೆಮಾ ನೋಡಿ ಅವಾಕ್ಕಾದ ತಮಿಳು ಸಿನೆಮಾ ನಟ ಸೂರ್ಯ ಪ್ರಖ್ಯಾತ ಕ್ರಿಕೆಟರ್ ಪಾತ್ರ ನಿರ್ವಹಿಸಿರುವ ಸುಶಾಂತ್ ಸಿಂಗ್ ರಜಪೂತ್ ಅವರ ನಟನೆ ಅದ್ಭುತ ಎಂದಿದ್ದಾರೆ.
"ಈಗಷ್ಟೇ 'ಎಂ ಎಸ್ ಧೋನಿ: ದ ಆನ್ ಟೋಲ್ಡ್ ಸ್ಟೋರಿ' ಸಿನೆಮಾ ವೀಕ್ಷಿಸಿದೆ. ಸುಶಾಂತ್ ಅಥವಾ ಧೋನಿ; ನೀವು ಇವುಗಳಿಲ್ಲಿ ನಿಜವಾಗಿಯೂ ಯಾರು? ಅದ್ಭುತ ಪ್ರದರ್ಶನ" ಎಂದು ಸೂರ್ಯ ಟ್ವೀಟ್ ಮಾಡಿದ್ದಾರೆ.
ನೀರಜ್ ಪಾಂಡೆ ನಿರ್ದೇಶನದ ಈ ಸಿನೆಮಾ ಭಾರತೀಯ ಒಂದು ದಿನದ ಕ್ರಿಕೆಟ್ ತಂಡದ ನಾಯಕ ಎಂ ಎಸ್ ಧೋನಿ ಜೀವನಾಧಾರಿತವಾದದ್ದು.
ಸಿನೆಮಾ ಬಗ್ಗೆ ಇನ್ನು ಹೆಚ್ಚು ಪ್ರಶಂಸೆಯ ಮಳೆಗರೆದಿರುವ ಸೂರ್ಯ "ದಂತಕತೆ ಮಹಿ ಅವರಿಗೆ ಸಲಾಂ ಮತ್ತು ಇಡೀ ಚಿತ್ರ ತಂಡದ ಕೆಲಸಕ್ಕೆ. ಕಷ್ಟಕರವಾದ ಬಯೋಪಿಕ್ ಅದ್ಭುತವಾಗಿ ಮಾಡಿದ್ದೀರಿ" ಎಂದು ಬರೆದಿದ್ದಾರೆ.
ಶುಕ್ರವಾರ ಬಿಡುಗಡೆಯಾದ ಈ ಸಿನೆಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆಯ ಮಾತುಗಳನ್ನು ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸೂರ್ಯSushant Singh Rajputಸುಶಾಂತ್ ಸಿಂಗ್ ರಜಪೂತ್SuriyaM.S. Dhoni: The Untold Storyಎಂ ಎಸ್ ಧೋನಿ: ದ ಆನ್ ಟೋಲ್ಡ್ ಸ್ಟೋರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


