ಪುಷ್ಪಕ ವಿಮಾನವನ್ನು ವಿತರಿಸಲಿರುವ 'ತೂಗುದೀಪ ಡಿಸ್ಟ್ರಿಬ್ಯೂಶನ್ಸ್'
ಜನಪ್ರಿಯ ನಟ-ನಿರ್ದೇಶಕ ರಮೇಶ್ ಅರವಿಂದ್ ನಟನೆಯ 100 ನೇ ಚಿತ್ರ ಪುಷ್ಪಕ ವಿಮಾನ ದಿನದಿಂದ ದಿನಕ್ಕೆ ಕುತೂಹಲದ ಕಾವೇರಿಸುತ್ತಿದೆ. ಆಡಿಯೋ ಬಿಡುಗಡೆ ಕೂಡ ಶೀಘ್ರದಲ್ಲೇ ನೆರವೇರಲಿದ್ದು,

Published On :
ಬೆಂಗಳೂರು: ಜನಪ್ರಿಯ ನಟ-ನಿರ್ದೇಶಕ ರಮೇಶ್ ಅರವಿಂದ್ ನಟನೆಯ 100 ನೇ ಚಿತ್ರ ಪುಷ್ಪಕ ವಿಮಾನ ದಿನದಿಂದ ದಿನಕ್ಕೆ ಕುತೂಹಲದ ಕಾವೇರಿಸುತ್ತಿದೆ. ಆಡಿಯೋ ಬಿಡುಗಡೆ ಕೂಡ ಶೀಘ್ರದಲ್ಲೇ ನೆರವೇರಲಿದ್ದು, ಬಾಲಿವುಡ್ ನಟಿ ಜೂಹಿ ಚಾವ್ಲಾ ಕಾಣಿಸಿಕೊಂಡಿರುವ 'ಜಿಲ್ಕಾ ಜಿಲ್ಕಾ' ಹಾಡು ಎಲ್ಲರ ಗಮನ ಸೆಳೆಯಲಿದೆ ಎನ್ನುತ್ತಾರೆ ನಿರ್ಮಾಪಕ ವಿಖ್ಯಾತ್.
"ಈ ಹಾಡಿನ ಸಂಪೂರ್ಣ ಶ್ರೇಯಸ್ಸು ಗೀತ ರಚನಕಾರ ಪವನ್ ಒಡೆಯರ್, ಸಿನೆಮ್ಯಾಟೋಗ್ರಾಫರ್ ಭುವನ್ ಗೌಡ, ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಕಲಾ ನಿರ್ದೇಶಕ ಕಡ್ಡಿ ಶಿವು ಅವರಿಗೆ ಸಲ್ಲಬೇಕು. ಇವರುಗಳು ಇಲ್ಲದೆ ಹೋಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಜೂಹಿ ಚಾವ್ಲಾ ಕೂಡ ಈ ಹಾಡನ್ನು ಪ್ರಶಂಸಿಸಿ ಅಭಿನಂದನೆ ತಿಳಿಸಿದ್ದಾರೆ" ಎನ್ನುವ ಅವರು ಈ ಸಿನೆಮಾದಲ್ಲಿ ನಾಲ್ಕು ಹಾಡುಗಳು ಮತ್ತು ಎರಡು ಥೀಮ್ ಹಾಡುಗಳಿದ್ದು ಈ ವಾರಾಂತ್ಯದಲ್ಲಿ ಬಿಡುಗಡೆ ಕಾಣಲಿವೆ ಎಂದಿದ್ದಾರೆ.
ಈಗಾಗಲೇ ಟಿವಿ ವಾಹಿನಿಯ ಹಕ್ಕುಗಳು ಭಾರಿ ಬೆಲೆಗೆ ಮಾರಾಟವಾಗಿವೆ ಎಂದು ತಿಳಿದುಬಂದಿದ್ದು, ನಿರ್ಮಾಪಕರಿಗೆ ಸಿಕ್ಕಿರುವ ಮತ್ತೊಂದು ಸಿಹಿ ಸುದ್ದಿಯಲ್ಲಿ ನಟ ದರ್ಶನ ಮತ್ತು ದಿನಕರ್ ಒಡೆತನದ ತೂಗುದೀಪ ವಿತರಕರು ಈ ಸಿನೆಮಾವನ್ನು ರಮೇಶ್ ಅರವಿಂದ್ ಅವರ ವೃತ್ತಿ ಜೀವನದಲ್ಲೇ ಕಂಡಿರುವ ಅತಿ ಹೆಚ್ಚು ಮೊತ್ತಕ್ಕೆ (ಹಿಂತಿರುಗಿಸಲಾಗದ) ವಿತರಣಾ ಹಕ್ಕುಗಳನ್ನು ಕೊಂಡಿದ್ದಾರೆ ಎಂದು ತಿಳಿದುಬಂದಿದೆ.
"ಹಿಂದಿರುಗಿಸಲಾಗದ ಮೊತ್ತದ ವಿತರಣಾ ಮಾದರಿಯಲ್ಲಿ ಈ ಸಿನೆಮಾ ಕನ್ನಡ ಚಿತ್ರರಂಗದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾಗಿದೆ" ಎಂದು ವಿಖ್ಯಾತ್ ಹೇಳಿದ್ದಾರೆ.
"ದರ್ಶನ್ ನಮ್ಮ ಟ್ರೇಲರ್ ನೋಡಿ ಅದನ್ನು ಪ್ರಶಂಸಿಸಿದ್ದರು. ಈಗ ಚಿತ್ರೀಕರಣ ನಂತರದ ಕೆಲಸಗಳು ಸಾಗುತ್ತಿರುವ ಸಮಯದಲ್ಲಿ ವಿತರಣಾ ತಂಡ ನಮ್ಮ ಕೆಲಸವನ್ನು ತುಸು ಮಟ್ಟಿಗೆ ನೋಡಿ ಬಹಳ ಖುಷಿ ಪಟ್ಟು ಅತ್ಯುತ್ತಮ ಬೆಲೆಗೆ ವಿತರಣಾ ಹಕ್ಕುಗಳನ್ನು ಕೊಳ್ಳಲು ಮುಂದೆ ಬಂದರು" ಎಂದು ನಿರ್ಮಾಪಕ ತಿಳಿಸುತ್ತಾರೆ.
ಎಸ್ ರವೀಂದ್ರನಾಥ್ ನಿರ್ದೇಶನದ ಈ ಸಿನೆಮಾದಲ್ಲಿ ರಚಿತಾ ರಾಮ್ ಮತ್ತು ಬಾಲನಟಿ ಯುವಿನಾ ಪಾರ್ಥವಿ ನಟಿಸಿದ್ದು, ದೀಪಾವಳಿ ಸಮಯಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Juhi Chawlaramesh Aravindರಮೇಶ್ ಅರವಿಂದ್Pushpaka Vimanaಪುಷ್ಪಕ ವಿಮಾನಯುವಿನಾ ಪಾರ್ಥವಿThoogudeepa distributionsತೂಗುದೀಪ ಡಿಸ್ಟ್ರಿಬ್ಯೂಶನ್ಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


