'ಭರ್ಜರಿ' ಕೇಜ್ ಫೈಟ್ ಗೆ ಧ್ರುವ ಸರ್ಜಾ ಸಿದ್ಧತೆ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸರುವ 'ಭರ್ಜರಿ' ಸಿನೆಮಾದಲ್ಲಿ ಆಕ್ಷನ್ ದೃಶ್ಯಗಳಿಗೆ ಕೊರತೆಯೇನಿರುವದಿಲ್ಲ. ಈಗ ಅವರು ವಿಶೇಷ ಫೈಟ್ ಒಂದರಲ್ಲಿ ಸ್ಟಂಟ್ ಮಾಸ್ಟರ್ ವಿಜಯ್

Published On :
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸರುವ 'ಭರ್ಜರಿ' ಸಿನೆಮಾದಲ್ಲಿ ಆಕ್ಷನ್ ದೃಶ್ಯಗಳಿಗೆ ಕೊರತೆಯೇನಿರುವದಿಲ್ಲ. ಈಗ ಅವರು ವಿಶೇಷ ಫೈಟ್ ಒಂದರಲ್ಲಿ ಸ್ಟಂಟ್ ಮಾಸ್ಟರ್ ವಿಜಯ್ ಅವರ ನಿರ್ದೇಶನದಲ್ಲಿ ಅವರು ಬಾಲಿವುಡ್ ಕುಸ್ತಿಪಟು ಕೇತನ್ ಕರಂಡೆ ಜೊತೆಗೆ ಸೆಣಸಲಿದ್ದಾರಂತೆ.
'ಆಕ್ಷನ್ ಜಾಕ್ಸನ್', 'ಗ್ರಾಂಡ್ ಮಸ್ತಿ' ಹೀಗೆ 30 ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಕೇತನ್, ದರ್ಶನ್ ಅವರ 'ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದರು. ಈಗ 'ಭರ್ಜರಿ' ಅವರ ಎರಡನೇ ಸಿನೆಮಾ.
ಕನಕಪುರ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ಈ ಫೈಟ್ ಗಾಗಿ ಅದ್ದೂರಿ ಸೆಟ್ ಹಾಕಲಾಗಿದ್ದು, ಇದಕ್ಕೆ ನಿರ್ಮಾಪಕರಿಗೆ ತಗಲಿರುವ ವೆಚ್ಚ ಬರ್ರೋಬರ್ರಿ 75 ಲಕ್ಷವಂತೆ! ಆರು ದಿನಗಳ ಕಾಲ ಚಿತ್ರೀಕರಣ ನಡೆಯಲಿರುವ ಈ ಫೈಟ್ ದೃಶ್ಯಗಳಲ್ಲಿ 500 ಕ್ಕೂ ಹೆಚ್ಚು ಕಿರಿಯ ನಟರು ಭಾಗವಹಿಸಲಿದ್ದಾರಂತೆ.
ಇದನ್ನು ಕಂಬಿ ಕುಸ್ತಿ ಎಂದು ಕರೆಯುವ ನಿರ್ದೇಶಕ ಚೇತನ್ ಕುಮಾರ್ ಇದು ಬೋನಿನ ಒಳಗೆ ನಡೆಯುವ ಫೈಟ್ ಅಂತೆ.
ರಚಿತಾ ರಾಮ್ ನಾಯಕನಟಿಯಾಗಿರುವ ಈ ಸಿನೆಮಾದಲ್ಲಿ ಹರಿಪ್ರಿಯಾ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ವೈಶಾಲಿ ದೀಪಕ್, ಸಾಯಿ ಕುಮಾರ್ ಮತ್ತು ಸುಧಾರಾಣಿ ಕೂಡ ತಾರಾಗಣದಲ್ಲಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದು, ಶ್ರೀಶಾ ಕುಡುವಲ್ಲಿ ಅವರ ಸಿನಿಮಾಟೋಗ್ರಾಫಿ ಸಿನೆಮಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


