'ಮುಕುಂದ' ಸುದೀಪ್ ಜೊತೆಗೆ ಹೆಜ್ಜೆ ಹಾಕಿದ ರಚಿತಾ ರಾಮ್ ಮತ್ತು ಭಾವನಾ
ಕಳೆದ ವಾರ ಕೊನೆಯ ಹಾಡಿನ ಚಿತ್ರೀಕರಣದೊಂದಿಗೆ 'ಮುಕುಂದ ಮುರಾರಿ' ಸಿನೆಮಾದ ಚಿತ್ರೀಕರಣ ಅಂತ್ಯಗೊಂಡಿದೆ. ಈ ಹಾಡು ನೆಲಮಂಗಲದ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡಿದೆ.

Published On :
ಬೆಂಗಳೂರು: ಕಳೆದ ವಾರ ಕೊನೆಯ ಹಾಡಿನ ಚಿತ್ರೀಕರಣದೊಂದಿಗೆ 'ಮುಕುಂದ ಮುರಾರಿ' ಸಿನೆಮಾದ ಚಿತ್ರೀಕರಣ ಅಂತ್ಯಗೊಂಡಿದೆ. ಈ ಹಾಡು ನೆಲಮಂಗಲದ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡಿದೆ.
'ಮುಕುಂದ ಮುರಾರಿ'ಯಲ್ಲಿ ಕೃಷ್ಣನ ವೇಷ ಹಾಕಿರುವ ಸುದೀಪ್ ಜೊತೆಗೆ ರಚಿತಾ ರಾಮ್ ರಾಧೆಯಾಗಿ ಮತ್ತು ಭಾವನಾ ರುಕ್ಮಿಣಿಯಾಗಿ ಹೆಜ್ಜೆ ಹಾಕಿರುವುದು ಈ ಹಾಡಿನ ವಿಶೇಷ.
ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ ಇರುವ ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ.
ಈಗ ಸದ್ಯಕ್ಕೆ ಸೆನ್ಸಾರ್ ಮಂಡಳಿ ಮುಂದೆ ಸಿನೆಮಾ ಇದ್ದು, ಬಿಡುಗಡೆಯ ತವಕದಲ್ಲಿದ್ದಾರೆ ನಿರ್ದೇಶಕ ನಂದ್ ಕಿಶೋರ್. "ನಾನು ನನ್ನ ಸರದಿಗಾಗಿ ಕಾಯುತ್ತಿದ್ದೇನೆ" ಎನ್ನುವ ನಿರ್ದೇಶಕ, ದಸರಾ ಹಬ್ಬದ ನಂತರ ಸಿನೆಮಾ ಬಿಡುಗಡೆ ಮಾಡುವ ಇರಾದೆ ಹೊಂದಿದ್ದಾರೆ.
"ಹಬ್ಬದ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಿನೆಮಾಗಳು ಬಿಡುಗಡೆಯಾಗುತ್ತಿರುವುದರಿಂದ, ನಂತರದ ದಿನಗಳಲ್ಲಿ ನಮಗೆ ಬೇಕಾದಷ್ಟು ಥಿಯೇಟರ್ ಗಳು ಸಿಕ್ಕಿದ ಮೇಲಷ್ಟೇ ಸಿನೆಮಾ ಬಿಡುಗಡೆ ಮಾಡಲಿದ್ದೇವೆ" ಎಂದು ತಿಳಿಸುತ್ತಾರೆ.
ಈ ಸಿನೆಮಾದಲ್ಲಿ ಉಪೇಂದ್ರ ಮತ್ತು ನಿಖಿತಾ ತುಕ್ರಲ್ ಮುಖ್ಯ ಭೂಮಿಕೆಯಲ್ಲಿದ್ದು, ಇದು ಬಾಲಿವುಡ್ ಸಿನೆಮಾ 'ಓ ಮೈ ಗಾಡ್'ನ ರಿಮೇಕ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


