ಇಂಟರ್ ನೆಟ್ ನಲ್ಲಿ ನಟಿಯ ಖಾಸಗಿ ಫೋಟೋ ಲೀಕ್; ಪೊಲೀಸ್ ದೂರು ದಾಖಲು
ಗ್ರಾಫಿಕ್ಸ್ ಮಾಡಿದ ಫೋಟೋಗಳನ್ನು ಇಂಟರ್ ನೆಟ್ ಲೀಕ್ ಮಾಡಿ ತಮ್ಮ ತೇಜೋವಧೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿ ಖ್ಯಾತ ನಟಿ ಸೋನುಗೌಡ ಪೊಲೀಸರಲ್ಲಿ ದೂರು ಸಲ್ಲಿಸಿದ್ದಾರೆ.

ಬೆಂಗಳೂರು: ಗ್ರಾಫಿಕ್ಸ್ ಮಾಡಿದ ಫೋಟೋಗಳನ್ನು ಇಂಟರ್ ನೆಟ್ ಲೀಕ್ ಮಾಡಿ ತಮ್ಮ ತೇಜೋವಧೆಗೆ ಯತ್ನಿಸಲಾಗಿದೆ ಎಂದು ಆರೋಪಿಸಿ ಖ್ಯಾತ ನಟಿ ಸೋನುಗೌಡ ಪೊಲೀಸರಲ್ಲಿ ದೂರು ಸಲ್ಲಿಸಿದ್ದಾರೆ.
ಶನಿವಾರ ಕೆಲ ಸುದ್ದಿ ಮಾಧ್ಯಮಗಳಲ್ಲಿ ನಟಿಯ ನಗ್ನ ಫೋಟೊಗಳು ಪ್ರಸಾರವಾಗಿದ್ದು, ಈ ಪ್ರಕರಣ ಸಂಬಂಧ ನಟಿ ಸೋನು ಗೌಡ ಪೊಲೀಸರಲ್ಲಿ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯನಾದ ಓರ್ವ ವ್ಯಕ್ತಿ ತಮಗೆ ಕಿರುಕುಳ ನೀಡಿ ಬೆದರಿಕೆ ಹಾಕಿದ್ದ. ಇದಕ್ಕೆ ತಾವು ಸೊಪ್ಪು ಹಾಕದಿದ್ದಾಗ ಆತ ಈ ರೀತಿ ತಮ್ಮ ತೇಜೋವಧೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ನಟಿ ಸೋನುಗೌಡ ಪೊಲೀಸ್ ದೂರು ನೀಡಿದ್ದಾರೆ.
ದೂರಿನಲ್ಲಿ ತಮ್ಮ ಅಳಲು ತೋಡಿಕೊಂಡಿರುವ ನಟಿ ಸೋನುಗೌಡ ಅವರು, "ಇಂಟರ್‌ನೆಟ್ ಕಾಲ್ ಮೂಲಕ ಪರಿಚಯವಾಗಿ ಚೆನ್ನಾಗಿ ಮಾತನಾಡುತ್ತಿದ್ದ ಬಳಿಕ ವ್ಯಕ್ತಿ `ನನಗೆ ನೀನು ಬೇಕು’ ಎಂದು ಕಾಡಲಾರಂಭಿಸಿ ಬ್ಲಾಕ್ ಮೇಲ್ ಮಾಡುವ ಮಟ್ಟಕ್ಕೆ ಇಳಿದಿದ್ದ. ಇದರಿಂದ ಬೇಸತ್ತ ನಾನು ಕೊನೆಗೆ ಆತನ ಸಂಪರ್ಕವನ್ನೇ ಕಡಿದುಕೊಂಡೆ. ಇದರಿಂದ ಆತ ನೀನು ಬದುಕಿನಲ್ಲಿ ಮತ್ತೆ ತಲೆ ಎತ್ತಬಾರದು ಎಂದು ಈ ರೀತಿ ದ್ವೇಷ ಸಾಧಿಸಿದ್ದಾನೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿರುವ ಮಾಸ್ಕ್ ಮಾಡಿದ ನಗ್ನಚಿತ್ರಗಳಿಗೆ ಸಂಬಂಧಿಸಿದಂತೆ ಅವರು ಎರಡು ವಾರದ ಹಿಂದೆಯೇ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದು, ಲೀಕ್ ಆಗಿರುವ ಚಿತ್ರಗಳು ತಮ್ಮದಲ್ಲ. ದ್ವೇಷದಿಂದ ಹೀಗೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಪೊಲೀಸರ ಬಳಿ ಆ ವ್ಯಕ್ತಿ ಕುರಿತು ಮಾಹಿತಿ ಹಂಚಿಕೊಂಡಿರುವ ನಟಿ ಸೋನುಗೌಡ ಅವರು, "ಇಂಟರ್‌ನೆಟ್ ಮೂಲಕ ಪರಿಚಯವಾದ ಆತ ಪ್ರೊಡಕ್ಷನ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ. ಆರಂಭದಲ್ಲಿ ಸಭ್ಯವಾಗಿ ಮಾತನಾಡುತ್ತಿದ್ದ ಆತ ವಾರಕ್ಕೆ ಒಮ್ಮೆ ಕರೆ ಮಾಡುತ್ತಿದ್ದ. ಸಾಮಾನ್ಯವಾಗಿ ಅಭಿಮಾನಿಗಳೊಂದಿಗೆ ಮಾತನಾಡುತ್ತೇವಾದ್ದರಿಂದ ಹಾಗೆ ಆತನೊಂದಿಗೂ ಮಾತನಾಡುತ್ತಿದ್ದೆ. ಯಾವಾಗ ನೀನು ಬೇಕು, ಇಲ್ಲವೆಂದರೆ ನಿನಗೆ ಏನು ಮಾಡಬೇಕೆಂದು ಗೊತ್ತಿದೆ ಎಂದು ಬ್ಲಾಕ್ ಮೇಲ್ ಮಾಡಲು ಆರಂಭಿಸಿದನೋ ಆಗ ನಾನು ಆತನ ಸಂಪರ್ಕ ಕಡಿದುಕೊಂಡೆ. ಬಳಿಕ ಆತ ನೀನು ಬದುಕಿನಲ್ಲಿ ತಲೆ ಎತ್ತದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಅಲ್ಲಿಂದ ಸಂಪೂರ್ಣವಾಗಿ ನಾನು ಆತನ ಫೋನ್ ಸಂಪರ್ಕವನ್ನು ಕಡಿದುಕೊಂಡಿದ್ದೆ. ಈ ತರಹದ ಕರೆಗಳು ನಟಿಯರಿಗೆ ಬರುವುದು ಸಾಮಾನ್ಯವೆಂದು ನಿರ್ಲಕ್ಷ್ಯಿಸಿದ್ದೆ".
ಇದು ನಡೆದು ಸುಮಾರು 2-3 ತಿಂಗಳ ಬಳಿಕ ಅಂತರ್ಜಾಲದಲ್ಲಿ ಫೋಟೊಗಳು ಹರಿದಾಡಿವೆ. ಇತ್ತೀಚಿಗೆ ಉತ್ತಮ ಸಿನಿಮಾಗಳ ಅವಕಾಶ ಸಿಗುತ್ತಿರುವುದರಿಂದ ನನ್ನ ಏಳಿಗೆಯನ್ನು ಸಹಿಸದೆ ಹೀಗೆ ಮಾಡಲಾಗುತ್ತಿದೆ. ನಾನು ಯಾವ ತಪ್ಪೂ ಮಾಡಿಲ್ಲ ಎಂದು ಸೋನುಗೌಡ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


