ಸಿನಿಮಾ ಸುದ್ದಿ

ಶಾಂತಿಗಾಗಿ ಸ್ಯಾಂಡಲ್ವುಡ್ ಕಳಕಳಿಯ ಮನವಿ

ಕಾವೇರಿ ವಿವಾದದ ಬಂದ್ ಗಾಗಿ ಸಂಪೂರ್ಣವಾಗಿ ಬೆಂಬಲಿಸಿದ್ದ ಕನ್ನಡ ಚಿತ್ರರಂಗದ ನಟರು, ಪ್ರತಿಭಟನೆಯ ವೇಳೆಯಲ್ಲಿ ಶಾಂತಿ ಕಾಪಾಡುವಂತೆ ಜನರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.

ಶಾಂತಿಗಾಗಿ ಸ್ಯಾಂಡಲ್ವುಡ್ ಕಳಕಳಿಯ ಮನವಿ
ಕಾವೇರಿ ವಿವಾದದ ಬಂದ್ ನಲ್ಲಿ ಭಾಗಿಯಾಗಿದ್ದ ಚಿತ್ರರಂಗ
Published On :
ಬೆಂಗಳೂರು: ಕಾವೇರಿ ವಿವಾದದ ಬಂದ್ ಗಾಗಿ ಸಂಪೂರ್ಣವಾಗಿ ಬೆಂಬಲಿಸಿದ್ದ ಕನ್ನಡ ಚಿತ್ರರಂಗದ ನಟರು, ಪ್ರತಿಭಟನೆಯ ವೇಳೆಯಲ್ಲಿ ಶಾಂತಿ ಕಾಪಾಡುವಂತೆ ಜನರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. 
ಭಾರತಿ ವಿಷ್ಣುವರ್ಧನ್, ಶಿವರಾಜ್ ಕುಮಾರ್, ಉಪೇಂದ್ರ, ದರ್ಶನ್, ಸುದೀಪ್, ಪುನೀತ್ ರಾಜಕುಮಾರ್, ಯಶ್ ಮತ್ತು ಗಣೇಶ್ ಸೇರಿದಂತೆ ಹಲವು ಚಿತ್ರರಂಗದ ಸ್ಟಾರ್ ಗಳು ಟ್ವೀಟ್ ಮಾಡುವ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಗಲಭೆಗಳಲ್ಲಿ ಭಾಗಿಯಾಗದಂತೆ ಕೇಳಿಕೊಂಡಿದ್ದಾರೆ. 
ಮಾಧ್ಯಮಗಳ ಮೂಲಕ ಸಂದೇಶ ನೀಡಿರುವ ಹಿರಿಯ ನಟ ಶಿವರಾಜ್ ಕುಮಾರ್ "ಜೀವ ಬಹಳ ಅಮೂಲ್ಯವಾದದ್ದು. ಮೃತ ಜನರನ್ನು ಮತ್ತೆ ಕರೆದುಕೊಂಡು ಬರಲು ಸಾಧ್ಯವಿಲ್ಲ. ಆಸ್ತಿ ಪಾಸ್ತಿ ಹಾನಿ ಮಾಡಿ, ಗಲಭೆ ಮಾಡಿ ನಂತರ ಕ್ಷಮಿಸಿ ಎಂದು ಹೇಳುವುದರಲ್ಲಿ ಯಾವುದೇ ಉಪಯೋಗವಿಲ್ಲ. ಎಲ್ಲರಿಗೂ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿದ್ದೇನೆ" ಎಂದಿದ್ದಾರೆ. ಹೀಗೆಯೇ ಕನ್ನಡ ಚಿತ್ರರಂಗದ ನಿಯೋಗವನ್ನು ಪ್ರಧಾನಿಯವರ ಬಳಿ ಕೊಂಡೊಯ್ದು, ಈ ಗಂಭೀರ ಪರಿಸ್ಥಿಯನ್ನು ಅವರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. 
ದರ್ಶನ್ ಅವರು ಟ್ವೀಟ್ ಮಾಡಿ "ಈಗ ಸದ್ಯದ ಪರಿಸ್ಥಿತಿ ನೋವುಂಟು ಮಾಡಿದೆ. ಕನ್ನಡಿಗರು ಶಾಂತಿ ಪ್ರಿಯರು ಮತ್ತು ಯಾವುದೇ ಕನ್ನಡಿಗನಿಗೆ ತೊದರೆಯಾಗುವುದಿಲ್ಲ ಎಂದು ನಂಬಿದ್ದೇನೆ" ಎಂದಿರುವ ಅವರು "ನಮ್ಮ ಅತಿಥಿಗಳು ನಮ್ಮ ಪ್ರದೇಶ ಮತ್ತು ಭಾಷೆಯನ್ನೂ ಗೌರವಿಸಬೇಕು, ನಾವು ರೈತರ ಬಗ್ಗೆ ಕಾಳಜಿ ವಹಿಸಿ ಅವರಿಗೆ ನ್ಯಾಯ ಒದಗಿಸಬೇಕು" ಎಂದಿದ್ದಾರೆ. 
ಸುದೀಪ್ ತಮ್ಮ ಟ್ವೀಟ್ ಗಳ ಮೂಲಕ ತಾಳ್ಮೆಯಿಂದಿರುವಂತೆ ಕೇಳಿಕೊಂಡಿದ್ದು "ನಮ್ಮ ರಾಜ್ಯದ ಶಾಂತಿಗೆ ಧಕ್ಕೆಯಾಗುತ್ತಿದೆ. ನ್ಯಾಯ ಸಿಗುವುದು ಪ್ರಮುಖ, ಅದಕ್ಕೆ ತಲುಪಲು ಹಲವಾರು ಮಾರ್ಗಗಳಿವ. ಶಾಂತಿಯಿಂದಿರಿ" ಎಂದಿರುವ ಅವರು "ದಯವಿಟ್ಟು ಶಾಂತಿಯನ್ನು ಹರಡಿ, ನಮ್ಮ ರಾಜ್ಯಕ್ಕೆ ನ್ಯಾಯ ಒದಗಿಸಲು ತಜ್ಞರು ಅಗತ್ಯ ಕೆಲಸ ಮಾಡಲಿದ್ದಾರೆ" ಎಂದು ಕೂಡ ಹೇಳಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ "ಪರಿಸ್ಥಿತಿ ಶಾಂತಗೊಳ್ಳಬೇಕಿದೆ ಮತ್ತು ನಮಗೆ ನ್ಯಾಯ ಸಿಗಬೇಕಿದೆ ಆದರೆ ಈ ಪರಿಸ್ಥಿತಿ ಅದನ್ನು ಇನ್ನೂ ನಿಧಾನಗೊಳಿಸಲಿದೆ. ಆದುದರಿಂದ ಪ್ರಚೋದನಕಾರಿಯಾದದ್ದನ್ನು ಟ್ವೀಟ್ ಮಾಡಬೇಡಿ ಎಂಬುದು ನನ್ನ ಮನವಿ" ಎಂದು ಬರೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.