'ಚಕ್ರವರ್ತಿ'ಯ ತಾರಾಗಣಕ್ಕೆ ಕುಮಾರ್ ಬಂಗಾರಪ್ಪ ಸೇರ್ಪಡೆ
ಈಗಾಗಲೇ ಹಲವು ಖ್ಯಾತ ನಟರನ್ನು ಒಳಗೊಂಡು ಸದ್ದು ಮಾಡುತ್ತಿರುವ 'ಚಕ್ರವರ್ತಿ' ಚಿತ್ರತಂಡಕ್ಕೆ ಈಗ ನಟ-ರಾಜಕಾರಣಿ ಕುಮಾರ್ ಬಂಗಾರಪ್ಪ ಸೇರ್ಪಡೆಯಾಗಿದ್ದಾರೆ.

Published On :
ಬೆಂಗಳೂರು: ಈಗಾಗಲೇ ಹಲವು ಖ್ಯಾತ ನಟರನ್ನು ಒಳಗೊಂಡು ಸದ್ದು ಮಾಡುತ್ತಿರುವ 'ಚಕ್ರವರ್ತಿ' ಚಿತ್ರತಂಡಕ್ಕೆ ಈಗ ನಟ-ರಾಜಕಾರಣಿ ಕುಮಾರ್ ಬಂಗಾರಪ್ಪ ಸೇರ್ಪಡೆಯಾಗಿದ್ದಾರೆ.
ದರ್ಶನ್ ನಾಯಕನಟನಾಗಿರುವ ಈ ಚಿತ್ರದಲ್ಲಿ ಕುಮಾರ್ ಬಂಗಾರಪ್ಪ ಖಳನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಕುಮಾರ್ ತಾರಾಗಣಕ್ಕೆ ಸೇರ್ಪಡೆಯಾಗಿರುವುದಕ್ಕೆ ಚೊಚ್ಚಲ ನಿರ್ದೇಶಕ ಚಿಂತನ್ ಹರ್ಷ ವ್ಯಕ್ತಪಡಿಸಿದ್ದಾರೆ.
"ಅವರ ಪಾತ್ರದ ಬಗ್ಗೆ ಹೆಚ್ಚು ಹೇಳುವುದಿಲ್ಲ ಆದರೆ ಅವರದ್ದು ಪ್ರಮುಖ ಪಾತ್ರ" ಎನ್ನುವ ಚಿಂತನ್ "ಕುಮಾರ್ ಅವರ ಭಾಗದ ಚಿತ್ರೀಕರಣ ಸಂಪೂರ್ಣ ಮಲೇಷಿಯಾದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ ಮಧ್ಯಭಾಗದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ" ಎನ್ನುತ್ತಾರೆ.
ಕುಮಾರ್ ಬಂಗಾರಪ್ಪ ನಟಿಸಿದ್ದ ಕೊನೆಯ ಚಿತ್ರ 2012 ರ 'ಕೆಳದಿ ಶಿವಪ್ಪ ನಾಯಕ'.
ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ ಕೂಡ ಖಳನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಸೃಜನ್ ಲೋಕೇಶ್ ಮತ್ತು ಆದಿತ್ಯ ಕೂಡ ನಟರು. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ಕೆ ಎಸ್ ಚಂದ್ರಶೇಖರ್ ಸಿನೆಮ್ಯಾಟೋಗ್ರಾಫರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


