ಸಿನಿಮಾ ಸುದ್ದಿ

'ಸಂತು' ಮಾತಾಡಲಿ ಎಂದ ಯಶ್; ಚಿತ್ರ ಭರ್ಜರಿ ಯಶಸ್ಸು ಕಾಣಲಿದೆ ಎಂದ ಮಂಜು

ಸಾಮಾನ್ಯವಾಗಿ ತಮ್ಮ ಮುಂದಿನ ಸಿನೆಮಾಗಳ ಬಗ್ಗೆ ಹೆಚ್ಚೆಚ್ಚು ಮಾತನಾಡಿ ಪ್ರಚಾರ ಮಾಡುವುದು ನಟರ ರೂಢಿ. ಆದರೆ ಇದಕ್ಕೆ ತದ್ವಿರುದ್ಧವಾಗಿ ತಮ್ಮ ಮುಂದಿನ ಸಿನೆಮಾ 'ಸಂತು ಸ್ಟ್ರೈಟ್ ಫಾರ್ವರ್ಡ್'

'ಸಂತು' ಮಾತಾಡಲಿ ಎಂದ ಯಶ್; ಚಿತ್ರ ಭರ್ಜರಿ ಯಶಸ್ಸು ಕಾಣಲಿದೆ ಎಂದ ಮಂಜು
ನಟ ಯಶ್
Published On :
ಬೆಂಗಳೂರು: ಸಾಮಾನ್ಯವಾಗಿ ತಮ್ಮ ಮುಂದಿನ ಸಿನೆಮಾಗಳ ಬಗ್ಗೆ ಹೆಚ್ಚೆಚ್ಚು ಮಾತನಾಡಿ ಪ್ರಚಾರ ಮಾಡುವುದು ನಟರ ರೂಢಿ. ಆದರೆ ಇದಕ್ಕೆ ತದ್ವಿರುದ್ಧವಾಗಿ ತಮ್ಮ ಮುಂದಿನ ಸಿನೆಮಾ 'ಸಂತು ಸ್ಟ್ರೈಟ್ ಫಾರ್ವರ್ಡ್' ಬಗ್ಗೆ ಹೆಚ್ಚು ಮಾತನಾಡದೆ ನಟ ಯಶ್ ಮೌನಕ್ಕೆ ಶರಣಾಗಿದ್ದಾರೆ. 
ದೀಪಾವಳಿಗೆ ಬಿಡುಗಡೆಗೆ ಸಿದ್ಧವಾಗಿರುವ 'ಸಂತು ಸ್ಟ್ರೈಟ್ ಫಾರ್ವರ್ಡ್' ಬಗ್ಗೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸುವ ಯಶ್, ಸಿನೆಮಾದ ಪಾತ್ರ ಸಂತು ಮಾತನಾಡಲಿದೆ ಎನ್ನುತ್ತಾರೆ.
ಈ ಮಧ್ಯೆ ಮಹೇಶ್ ರಾವ್ ನಿರ್ದೇಶನದ ಈ ಚಿತ್ರ ಭಾರಿ ಯಶಸ್ಸು ಪಡೆಯಲಿದೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸುತ್ತಾರೆ ನಿರ್ಮಾಪಕ ಕೆ ಮಂಜು. "ಇದು ನೋಡಿ ಸಂಭ್ರಮಿಸಬೇಕಾದ ಸಿನೆಮಾ. ಯಶ್ ಅಭಿಮಾನಿಗಳಿಗೆ ಇದು ಹುಚ್ಚೆಬ್ಬಿಸಬಲ್ಲದ್ದಾಗಿದ್ದರೆ, ಇದು ಕೌಟುಂಬಿಕ ಚಿತ್ರವೂ ಹೌದು. ಎಲ್ಲರು ನೋಡುವಂತಾದ್ದು" ಎನ್ನುತ್ತಾರೆ. 
ಯಶ್ ಮತ್ತು ತಮ್ಮದು ಅದೃಷ್ಟವಂತ ಜೋಡಿ ಎನ್ನುವ ಮಂಜು "ನಮ್ಮನ್ನು ಒಟ್ಟಿಗೆ ತಂಡ 'ರಾಜ ಹುಲಿ' ಶತದಿನ ಪೂರೈಸಿತ್ತು. ಇದು ಸಂತು ಜೊತೆಗೂ ಮುಂದುವರೆಯಲಿದೆ" ಎನ್ನುತ್ತಾರೆ. 
"ನಾನು ವಿವಿಧ ಕಲಾವಿದರೊಂದಿಗೆ ಸುಮಾರು 42 ಸಿನೆಮಾಗಳನ್ನು ನಿರ್ಮಿಸಿದ್ದೇನೆ, ಆದರೆ ನಟನಾಗಿ ಯಶ್ ತಮ್ಮ ಕೆಲಸದ ಬಗ್ಗೆ ಪ್ಯಾಶನೇಟ್ ಆಗಿದ್ದಾರೆ. ಸಿನೆಮಾದ ಎಲ್ಲ ಆಯಾಮಗಳನ್ನು ಅವರು ಪ್ರೀತಿಸುತ್ತಾರೆ ಮತ್ತು ನಿರ್ಮಾಪಕ ಹಾಗು ಇಡೀ ಚಿತ್ರತಂಡಕ್ಕೆ ಬಹಳ ಬೆಲೆ ನೀಡುತ್ತಾರೆ. ಅವರ ಒಂದೇ ಗುರಿ ತಮ್ಮ ಸಿನೆಮಾದ ಮೂಲಕ ಪ್ರೇಕ್ಷಕರನ್ನು ರಂಜಿಸುವುದು" ಎನ್ನುತ್ತಾರೆ ಮಂಜು. 
ನಿಶ್ಚಿತಾರ್ಥದ ನಂತರ ಯಶ್ ಮತ್ತು ರಾಧಿಕಾ ಪಂಡಿತ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಚಿತ್ರ ಶುಕ್ರವಾರ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.