ಉಪೇಂದ್ರ ಸಿನೆಮಾ ನಿರ್ದೇಶಿಸಲಿರುವ ಶಶಾಂಕ್
ನಿರ್ದೇಶಕ ಮತ್ತು ನಟ ಉಪೇಂದ್ರ ಚಿತ್ರರಂಗದ ಬೇರೆ ಬೇರೆ ನಿರ್ದೇಶಕರ ಜೊತೆಗೆ ಕೆಲಸ ಮಾಡಲು ತೆರೆದುಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ಅವರ ಅಭಿಮಾನಿ ಮತ್ತು ನಿರ್ದೇಶಕ ಮಂಜು ಮಾಂಡವ್ಯ ಅವರ

Published On :
ಬೆಂಗಳೂರು: ನಿರ್ದೇಶಕ ಮತ್ತು ನಟ ಉಪೇಂದ್ರ ಚಿತ್ರರಂಗದ ಬೇರೆ ಬೇರೆ ನಿರ್ದೇಶಕರ ಜೊತೆಗೆ ಕೆಲಸ ಮಾಡಲು ತೆರೆದುಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ಅವರ ಅಭಿಮಾನಿ ಮತ್ತು ನಿರ್ದೇಶಕ ಮಂಜು ಮಾಂಡವ್ಯ ಅವರ ಸ್ಕ್ರಿಪ್ಟ್ ಒಪ್ಪಿಕೊಂಡ ಮೇಲೆ ಈಗ ನಿರ್ದೇಶಕ ಶಶಾಂಕ್ ಅವರ ಸಿನೆಮಾದಲ್ಲಿ ನಟಿಸಲು ಅವರು ಮುಂದಾಗಿದ್ದಾರೆ.
ಶಶಾಂಕ್ ಅವರು ಕೆಲವು ದಿನಗಳಿಂದ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಲು ಹವಣಿಸುತ್ತಿದ್ದರು. ಈಗ ಉಪೇಂದ್ರ ನಟನೆಯ ಸಿನೆಮಾದ ಮೂಲಕ ಅದನ್ನು ಸಾಕಾರ ಮಾಡಿಕೊಂಡಿರುವ ನಿರ್ದೇಶಕ "ನಾನು ಉಪ್ಪಿ ಸಿನೆಮಾವನ್ನು ನಿರ್ದೇಶಿಸುತ್ತಿರುವುದಕ್ಕೆ ಸಂತಸದಿಂದ್ದೇನೆ ಮತ್ತು ಅಷ್ಟೇ ಸಂತಸ ಅದನ್ನು ಸ್ವಂತ ಬ್ಯಾನರ್ ಅಡಿ ಅದನ್ನು ನಿರ್ಮಿಸುತ್ತಿರುವುದು" ಎನ್ನುತ್ತಾರೆ.
ನಿರ್ದೇಶಕ ಹೇಳುವಂತೆ ಉಪ್ಪಿಗಾಗಿ ಹೆಣೆದಿರುವ ಈ ಚಿತ್ರಕಥೆ ಬಹಳ ವಿಭಿನ್ನವಾದುದಂತೆ. "ಈ ಸಿನೆಮಾ ಉಪ್ಪಿಗಾಗಲಿ, ನನಗಾಗಲಿ ಅಥವಾ ಕನ್ನಡ ಚಿತ್ರರಂಗಕ್ಕಾಗಲಿ ಅತಿ ವಿಭಿನ್ನವಾಗಿರುತ್ತದೆ ಮತ್ತು ಇದಕ್ಕಾಗಿಯೇ ನಾನಿದನ್ನು ನಿರ್ಮಿಸುತ್ತಿದ್ದೇನೆ ಕೂಡ. ಉಪ್ಪಿ ಕೂಡ ನಿರ್ದೇಶಕಾನಾಗಿದ್ದು, ಈ ವಿಷಯ ಬಹಳ ವಿಭಿನ್ನ ಎಂದರು" ಎಂದು ತಿಳಿಸುತ್ತಾರೆ ಶಶಾಂಕ್.
ಈಗ ನಟನ ಆಯ್ಕೆ ಮುಗಿಸಿರುವುದರಿಂದ ಸ್ಕ್ರಿಪ್ಟ್ ಕೆಲಸ ಮುಂದುವರೆಸುವುದಕ್ಕೆ ಸುಲಭವಾಗಿದೆ ಎನ್ನುವ ಶಶಾಂಕ್ "ಕಳೆದ ಎರಡು ವರ್ಷಗಳಿಂದ ನಾವಿಬ್ಬರು ಒಟ್ಟಿಗೆ ಕೆಲಸ ಮಾಡುವುದನ್ನು ಚರ್ಚಿಸುತ್ತಿದ್ದೇವೆ ಆದರೆ ಉಪ್ಪಿಗೆ ಒಪ್ಪುವ ಚಿತ್ರಕಥೆ ಹೊಳೆಯುವವರೆಗೆ ಕಾಯ್ದೆ. ಹೆಚ್ಚಿನ ಸಮಯ ತೆಗೆದುಕೊಂಡು ಸಂಪೂರ್ಣ ಸ್ಕ್ರಿಪ್ಟ್ ನೊಂದಿಗೆ ಹಿಂದಿರುಗುವುದಕ್ಕೆ ಅವರು ಹೇಳಿದ್ದಾರೆ" ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


